newsfirstkannada.com

Video- ಅನ್ಯ ಕೋಮಿನ ಕುಟುಂಬಕ್ಕೆ ಹೋಳಿ ಹಚ್ಚಿದ ಯುವಕರು.. ಜೈ ಶ್ರೀರಾಮ್ ಎನ್ನುತ್ತಾ ಅಸಭ್ಯ ವರ್ತನೆ

Share :

Published March 24, 2024 at 1:38pm

Update March 24, 2024 at 7:50pm

    ಬೈಕ್​ನಲ್ಲಿ ಕೆಲಸದ ನಿಮಿತ್ತ ಕುಟುಂಬದ ಮೂವರು ಹೋಗುತ್ತಿದ್ದರು

    ಕುಟುಂಬವನ್ನ ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಪೊಲೀಸರು

    ಹ್ಯಾಪಿ ಹೋಳಿ ಎನ್ನುತ್ತಾ ಬೈಕ್​ ಮೇಲಿದ್ದವ್ರಿಗೆ ಹೋಳಿ ಹಚ್ಚಿಯೇ ಬಿಟ್ರು

ಹೋಳಿ ಹುಣ್ಣಿಮೆ ಎಂದರೆ ಮನೆಯಲ್ಲಿ ಸಿಹಿ ಊಟ ಮಾಡಿ, ಸ್ನೇಹಿತರಿಗೆ, ಸಂಬಂಧಿಗಳಿಗೆ ಬಣ್ಣಗಳನ್ನು ಹಚ್ಚಿ ಖುಷಿ ಪಡುವುದು. ಇನ್ನೇನು ನಾಳೆ ಹೋಳಿ ಹಬ್ಬ ಇರುವುದರಿಂದ ಕೆಲವೆಡೆ ಯುವಕರು ಇಂದೇ ಬಣ್ಣ ಆಡುವುದು ಪ್ರಾರಂಭಿಸಿದ್ದಾರೆ. ಸದ್ಯ ಈ ರೀತಿ ಹೋಳಿ ಆಡುವಾಗ ಯುವಕರ ಗುಂಪೊಂದು ಅನ್ಯ ಕೋಮಿನ ಕುಟುಂಬದ ಮೇಲೆ ಹೋಳಿ ಹಾಕಿ, ನೀರು ಸುರಿದು ಜೈ ಶ್ರೀರಾಮ್, ಹರ.. ಹರ ಮಹಾದೇವ್ ಎನ್ನುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಸಂಬಂಧ ಕೇಸ್ ಕೂಡ ದಾಖಲಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಡಬಲ್ ಹೆಡ್ಡರ್​​ನಲ್ಲಿ ಮುಂಬೈ vs ಗುಜರಾತ್ ಬಿಗ್ ಫೈಟ್​.. ಎಲ್ಲರ ಕಣ್ಣು ಈ ಸ್ಟಾರ್​ ತ್ರಿಮೂರ್ತಿಗಳ ಮೇಲೆ!

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಎದುರು ನಿಲ್ಲೋದು ಯಾರು..? ಕುಮಾರಸ್ವಾಮಿ ಸ್ಪರ್ಧೆ ಪಕ್ಕಾನಾ..?

ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯ ನಗರದ ಧಾಂಪುರ್ ಪ್ರದೇಶದಲ್ಲಿ ಅನ್ಯ ಕೋಮಿನ ಕುಟುಂಬದ ಇಬ್ಬರು ಮಹಿಳೆಯರು, ಓರ್ವ ಸವಾರ ಬೈಕ್​ನಲ್ಲಿ ತೆರಳುತ್ತಿರುತ್ತಾರೆ. ಈ ವೇಳೆ ಅಡ್ಡ ಹಾಕಿರುವ ಯುವಕರು ಜೋಶ್​ನಲ್ಲಿಯೇ ಆ ಕುಟುಂಬದ ಮೇಲೆ ಹೋಳಿ ಹಾಕಿದ್ದಾರೆ. ಆಗ ಮೂವರು ನಮಗೆಲ್ಲ ಹಚ್ಚ ಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದ ಯುವಕರು ಮತ್ತಷ್ಟು ಜೋರಾಗಿ ಹ್ಯಾಪಿ ಹೋಳಿ, ಹ್ಯಾಪಿ ಹೋಳಿ ಎನ್ನುತ್ತಾ ಜೈ ಶ್ರೀರಾಮ್, ಹರ.. ಹರ ಮಹಾದೇವ್ ಎನ್ನುತ್ತಾ ಸವಾರನಿಗೆ ಹಾಗೂ ಹಿಂದೆ ಕುಳಿತ ವೃದ್ಧೆಗೆ ನೀರು ಸುರಿದು, ಕಲರ್ ಹಾಕಿದ್ದಾರೆ. ಬಳಿಕ ಬೈಕ್ ಮುಂದೆ ಹೋಗುತ್ತಿದ್ದಂತೆ ಯುವಕರು ಓಡಿ ಹೋಗಿ ಹೋಳಿ ಹಾಕಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಈ ಎಲ್ಲ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಸಂತ್ರಸ್ತ ಕುಟುಂಬವನ್ನು ತಲುಪಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಪಾಲ್ಗೊಂಡ ಯುವಕರಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video- ಅನ್ಯ ಕೋಮಿನ ಕುಟುಂಬಕ್ಕೆ ಹೋಳಿ ಹಚ್ಚಿದ ಯುವಕರು.. ಜೈ ಶ್ರೀರಾಮ್ ಎನ್ನುತ್ತಾ ಅಸಭ್ಯ ವರ್ತನೆ

https://newsfirstlive.com/wp-content/uploads/2024/03/UP_HOLI.jpg

Load More