ಪ್ರೀತಿಗೆ ಮನೆಯವರ ವಿರೋಧ.. ಪ್ರಿಯತಮೆ ಜೊತೆ ನೇಣಿಗೆ ಶರಣಾದ ಪೂಜಾರಿ

author-image
AS Harshith
Updated On
ಪ್ರೀತಿಗೆ ಮನೆಯವರ ವಿರೋಧ.. ಪ್ರಿಯತಮೆ ಜೊತೆ ನೇಣಿಗೆ ಶರಣಾದ ಪೂಜಾರಿ
Advertisment
  • ಪ್ರೇಮ ಪೂಜಾರಿಗೆ ಅಡ್ಡ ಬಂದ ಜಾತಿ.. ಪ್ರಿಯತಮೆ ಜೊತೆ ನೇಣಿಗೆ ಶರಣು
  • ಆತ ಕುರುಬ, ಆಕೆ ಅಗಸರ.. ಪ್ರೇಮಿಗಳಿಗೆ ಊರಿನ ಹಿರಿಯರು ಬೈದು ಬುದ್ಧಿ ಹೇಳಿದ್ರಂತೆ
  • ಒಂದೇ ಮರಕ್ಕೆ ನೇಣು ಹಾಕಿಕೊಂಡ ಪ್ರೇಮಿಗಳು.. ಇದಕ್ಕೆಲ್ಲಾ ಅಂತರ್ಜಾತಿನೇ ಕಾರಣನಾ?

ಬಾಗಲಕೋಟೆ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದ ಹೊರ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸಚಿನ್ ಭೀಮಪ್ಪ ದಳವಾಯಿ (22), ಪ್ರತಿಭಾ ಮಡಿವಾಳ (19) ಮೃತ ಪ್ರೇಮಿಗಳು. ಇಬ್ಬರು ಅಂತರ್ಜಾತಿ ಪ್ರೇಮಿಗಳಾಗಿದ್ದು, ಇಬ್ಬರು ಪ್ರೀತಿ ಮಾಡೋ ವಿಷಯ ಇತ್ತೀಚೆಗೆ ಬಹಿರಂಗ ಆಗಿತ್ತು. ಪ್ರೇಮಿಗಳಿಗೆ ಊರಿನ ಹಿರಿಯರು ಬೈದು ಬುದ್ಧಿ ಹೇಳಿದ್ದರಂತೆ. ಆದರೆ ಇಂದು ಅನಾಹುತ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 3 ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್​.. ಸಾವಿನ ಸುತ್ತ ಅನುಮಾನದ ಹುತ್ತ

ಪ್ರಿಯಕರ ಸಚಿನ್​ ಗ್ರಾಮದ ಬೀರಪ್ಪ ದೇವರ ದೇವಸ್ಥಾನದ ಪೂಜಾರಿಯಾಗಿದ್ದನು. ಇಂದು ಪ್ರಿಯತಮೆ ಪ್ರತಿಭಾ ಮಡಿವಾಳ ಜೊತೆ ಒಂದೇ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಗುರುವಿಲ್ಲ, ಜಾವೆಲಿನ್​ ಖರೀದಿಸಲು ಹಣವಿಲ್ಲ.. ಸಖತ್​​ ಡಿಫರೆಂಟಾಗಿದೆ ಪಾಕ್​ ಅಸಲಿ ‘ಚಿನ್ನ’ ನದೀಮ್​ ಕತೆ

ಸದ್ಯ ಪ್ರೇಮಿಗಳ ಪ್ರೀತಿಗೆ ಅಂತರ್ಜಾತಿ ವಿಚಾರ ಅಡ್ಡಿಯಾಯ್ತ ಎಂದು ಮೇಲ್ನೋಟಕ್ಕೆ ಕಂಡಿದೆ. ಪೊಲೀಸರ ತನಿಖೆಯಿಂದಷ್ಟೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬರಬೇಕಿದೆ. ಸ್ಥಳಕ್ಕೆ ಮಹಾಲಿಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment