Advertisment

7 ತಿಂಗಳ ಮಗಳ ಸಾವನ್ನು ಮರೆ ಮಾಡಿದ್ದಳು ಪತ್ನಿ! ನೋವಿನ ಕ್ಷಣವನ್ನು ಹಂಚಿಕೊಂಡ ​ಅಂಪೈರ್​!

author-image
AS Harshith
Updated On
7 ತಿಂಗಳ ಮಗಳ ಸಾವನ್ನು ಮರೆ ಮಾಡಿದ್ದಳು ಪತ್ನಿ! ನೋವಿನ ಕ್ಷಣವನ್ನು ಹಂಚಿಕೊಂಡ ​ಅಂಪೈರ್​!
Advertisment
  • ಸಂದರ್ಶನದ ವೇಳೆ ಕಣ್ಣೀರು ಹಾಕಿದ ಖ್ಯಾತ ಅಂಪೈರ್​
  • ಮಗಳ ಸಾವನ್ನು ಪತ್ನಿ ಮತ್ತು ಕುಟುಂಬಸ್ಥರು ಮರೆ ಮಾಡಿದ್ದೇಕೆ?
  • ಮಗಳ ಸಾವಿನ ನಂತರ ನಾನು 1 ತಿಂಗಳ ಕಾಲ ಕತ್ತಲೆಯಲ್ಲಿದ್ದೆ

ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್​ ಮಾಡಿದ ಪಾಕಿಸ್ತಾನದ ಅಲೀಂದಾರ್​ ತಮ್ಮ ಜೀವನದ ದುಃಖದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಚಾನೆಲ್​ನಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

Advertisment

ಅಲೀಂದಾರ್​ 2003ರಲ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನದ ಆರಂಭದಲ್ಲಿದ್ದರು. ಈ ವೇಳೆ ಅವರ ಎಳು ತಿಂಗಳ ಮಗಳ ಸಾವಿನ ಸುದ್ದಿಯನ್ನು ಪತ್ನಿ ಮತ್ತು ಕುಟುಂಬಸ್ಥರು ಮರೆ ಮಾಚಿದರು. ಮಗಳ ಸಾವಿನ ಬಗ್ಗೆ ನನ್ನೊಂದಿಗೆ ಹೇಳಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಬೆನ್ನಲ್ಲೇ ದುಲೀಪ್ ಟ್ರೋಫಿಗೆ ಕೈಕೊಟ್ಟ ಇನ್ನಿಬ್ಬರು ಸ್ಟಾರ್​​..!

56 ವರ್ಷದ ಅಲೀಂದಾರ್​, ‘ಐಸಿಸಿ ಪ್ಯಾನೆಲ್​​ ಅಂಪೈರ್​ ಆಗಿ ನನ್ನ ವೃತ್ತಿ ಜೀವನ ಆರಂಭವಾಯ್ತು. ಇದು ನನ್ನ ವೃತ್ತಿ ಜೀವನಕ್ಕೆ ಬಹಳ ಮುಖ್ಯವಾದ ಪಂದ್ಯಾವಳಿಯಾಗಿದೆ. ಈ ಸಮಯದಲ್ಲಿ ನನ್ನ ಮಗಳ ಸಾವಿನ ಬಗ್ಗೆ ನನಗೆ ತಿಳಿದರೆ ನಾನು ಮನೆಗೆ ಹಿಂತಿರುಗುತ್ತೇನೆ ಎಂದು ಪತ್ನಿ ಮತ್ತು ಕುಟುಂಬವರಿಗೆ ತಿಳಿದಿತ್ತು. ಹಾಗಾಗಿ ಈ ವಿಚಾರವನ್ನು ಮರೆಮಾಚಿದ್ರು’ ಎಂದು ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಕ್ರಿಕೆಟರ್ಸ್​!

‘ಮಗಳ ಸಾವಿನ ನಂತರ ನಾನು 1 ತಿಂಗಳ ಕಾಲ ಕತ್ತಲೆಯಲ್ಲಿದ್ದೆ. ನಾನು ಜೋಹಾರ್ನ್ಸ್​ಬರ್ಗ್​ನಲ್ಲಿದ್ದಾಗ ಸಿಯಾಲ್​​ಕೋಟ್​​ನ ಒಬ್ಬ ಪಾಕಿಸ್ತಾನಿ ವ್ಯಕ್ತಿ ನನಗೆ ಸಂತಾಪ ಸೂಚಿಸಲು ಬಂದಿದ್ದರು. ಈ ವೇಳೆ ನನಗೆ ಆಘಾತವಾಯಿತು. ನಾನು ತಕ್ಷಣ ಐಸಿಸಿಗೆ ಮಾಹಿತಿ ತಿಳಿಸಿ ಮನೆಗೆ ಹಿಂತಿರುಗಿದೆ. ಮಗಳ ವಿಚಾರವಾಗಿ ಪತ್ನಿಗೆ ಕರೆ ಮಾಡಿದಾಗ ಅವಳು ಅಳುತ್ತಾ ವಿಚಾರ ಹೇಳಿದಳು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

Advertisment

ಅಲೀಂದಾರ್​ 2000 ಮತ್ತು 2023ರ ನಡುವೆ ತಮ್ಮ ವೃತ್ತಿ ಜೀವನದಲ್ಲಿ 145 ಟೆಸ್ಟ್​​ ಪಂದ್ಯ, 231 ODI ಮತ್ತು 72 ಟಿ20 ಪಂದ್ಯಕ್ಕೆ ಅಂಪೈರ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment