newsfirstkannada.com

CardiacArrest: ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

Share :

Published February 20, 2024 at 2:01pm

Update February 20, 2024 at 2:14pm

  ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್‌ಗೆ ಹೃದಯ ಸ್ತಂಭನ

  ಅನುಪಮಾ ಟಿವಿ ಶೋನಿಂದ ಜನಪ್ರಿಯರಾಗಿದ್ದ ಬಾಲಿವುಡ್ ನಟ

  ನಾಳೆ ಮುಂಬೈನಲ್ಲಿ ನಟ ರಿತುರಾಜ್ ಸಿಂಗ್ ಅವರ ಅಂತ್ಯಕ್ರಿಯೆ

ಮುಂಬೈ: ಹಿಂದಿ ಕಿರುತೆರೆಯ ಖ್ಯಾತ ನಟ ರಿತುರಾಜ್ ಸಿಂಗ್ ಅವರು ಸಾವನ್ನಪ್ಪಿದ್ದಾರೆ. 59 ವರ್ಷದ ಹಿರಿಯ ನಟ ಹೃದಯ ಸ್ತಂಭನಕ್ಕೆ ತುತ್ತಾಗಿದ್ದು ಇಂದು ನಿಧನರಾಗಿದ್ದಾರೆ. ರಿತುರಾಜ್ ಸಿಂಗ್ ಅವರ ಸಾವಿನ ಸುದ್ದಿಯನ್ನ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.

ರಿತುರಾಜ್ ಸಿಂಗ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್‌ ಆಗಿದ್ದರು. ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಹೃದಯ ಸ್ತಂಭನದಿಂದ ದಿಢೀರನೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಾಳೆ ಮುಂಬೈನಲ್ಲಿ ನಟ ರಿತುರಾಜ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಸ್ಮೈಲ್ ಹೆಚ್ಚಿಸೋ ಹುಚ್ಚಿಗೆ ಯುವಕ ದಾರುಣ ಸಾವು; ಆಗಿದ್ದೇನು?

ಹಿಂದಿಯ ಅನುಪಮಾ ಟಿವಿ ಶೋನಿಂದ ಜನಪ್ರಿಯರಾಗಿದ್ದು, ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಟಿವಿ ಸೀರಿಯಲ್ ಜೊತೆಗೆ ರಿತುರಾಜ್ ಹಲವು ಸಿನಿಮಾಗಳಲ್ಲೂ ಅಭಿನಯ ಮಾಡಿದ್ದಾರೆ. ಬದರಿನಾಥ್ ಕಿ ದುಲ್ಹನಿಯಾ ಇವರು ಅಭಿನಯಿಸಿದ ಜನಪ್ರಿಯ ಸಿನಿಮಾ. ಇದರ ಜೊತೆಗೆ ಬನೇಗಿ ಅಪ್ನಿ ಬಾತ್, ಹಿಟ್ಲರ್ ದೀದಿ, ಶಪತ್, ಅದಾಲತ್ ಮತ್ತು ದಿಯಾ ಔರ್ ಬಾತಿ ಹಮ್ ಟಿವಿ ಶೋಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CardiacArrest: ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

https://newsfirstlive.com/wp-content/uploads/2024/02/Rituraj-Singh.jpg

Load More