newsfirstkannada.com

ಆತನಿಗೆ 29, ಆಕೆಗೆ 27.. ವಿವಾಹವಾಗಿ 6 ವರ್ಷದ ಬಳಿಕ ತಂದೆಯಾಗುತ್ತಿದ್ದಾರೆ ಈ ಖ್ಯಾತ ಸಿಂಗರ್​

Share :

Published May 11, 2024 at 11:31am

Update May 11, 2024 at 12:27pm

    ಕೊನೆಗೂ ಗರ್ಭಿಣಿಯಾದ ಜಸ್ನೀನ್​ ಬೈಬರ್​ ಗೆಳತಿ ಹೈಲಿ

    ಹೈಲಿ ಬೈಬರ್ ಮೆಟರ್ನಿಟಿ ಫೋಟೋ ಶೂಟ್ ಹಂಚಿಕೊಂಡ ಪತಿ

    ಬೇಬಿ ಬೈಬರ್​ ಬರುವ ನಿರೀಕ್ಷೆಯಲ್ಲಿ ಖ್ಯಾತ ಕೆನಾಡಿಯನ್​ ಸಿಂಗರ್​

ಕೆನಾಡಿಯನ್​ ಖ್ಯಾತ ಸಿಂಗರ್​ ಜಸ್ಟೀನ್​ ಬೈಬರ್​ ತಂದೆಯಾಗುತ್ತಿದ್ದಾರೆ. ‘ಬೇಬಿ ಬೈಬರ್’​ ಅನ್ನು ಬರ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿಯ ಸಂಗತಿ ಹಂಚಿಕೊಂಡಿದ್ದಾರೆ.

ಜಸ್ಟೀನ್​ ಬೈಬರ್ ಮತ್ತು​ ಗೆಳತಿ ಹೈಲಿ ಬೈಬರ್​ ಜೊತೆಗೆ ಮೆಟರ್ನಿಟಿ ಫೋಟೋ ಶೂಟ್​ ಮಾಡಿಸಿದ್ದಾರೆ. ಜೊತೆಗೆ ಗೆಳತಿಯ ಫೋಟೋವನ್ನು ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಜಸ್ಟೀನ್​ ಫೋಟೋ ಹಂಚಿಕೊಂಡಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ಅನೇಕರು ಜಸ್ಟೀನ್​ ಮತ್ತು ಹೈಲಿಗೆ ಶುಭಾಶಯ ತಿಳಿಸಿದರೆ, ಇನ್ನು ಕೆಲವರು ‘ಬೇಬಿ ಬೈಬರ್ ಆನ್​ ದಿ ವೇ’ ಎಂದು ಕಾಮೆಂಟ್​ ಮಾಡಿದ್ದಾರೆ.

View this post on Instagram

A post shared by Justin Bieber (@justinbieber)

ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?

2022ರಲ್ಲಿ ಹೈಲಿ ಗರ್ಭಿಣಿ ಎಂಬ ಸುದ್ದಿ ಹಬ್ಬಿತ್ತು. ಆದರೆ ಆಕೆ ಎಂಟೋಮೆಟ್ರಿಯೋಸಿಸ್​​ನಿಂದ ಬಳಲುತ್ತಿದ್ದಾಳೆ ಎಂಬುದು ಹರಿದಾಡಿತ್ತು. ಇದೇ ಕಾರಣ ಆಕೆಯ ಹೊಟ್ಟೆ ಊದಿಕೊಂಡತೆ ಕಾಣುತ್ತಿದೆ ಎಂದು ಹೇಳಲಾಗಿತ್ತು. ಆದರೀಗ ಸ್ಟಾರ್​ ದಂಪತಿ ಕೊನೆಗೂ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್​​.. ಅಸಲಿ ಕತೆ ಏನು?

ಜಸ್ಟೀನ್​ ಮತ್ತು ಹೈಲಿ ಜೊತೆಯಾಗಿ 6 ವರ್ಷಗಳಾಗಿದೆ. 29 ವರ್ಷದ ಖ್ಯಾತ ಕೆನಾಡಿಯನ್​ ಸಿಂಗರ್​ 27 ವರ್ಷದ ಹೈಲಿಯನ್ನು ಪ್ರೀತಿಸಿ ಅನೋನ್ಯವಾಗಿ ಸಂಸಾರ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಈ ಜೋಡಿ ‘ಬೇಬಿ ಬೈಬರ್’​ನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತನಿಗೆ 29, ಆಕೆಗೆ 27.. ವಿವಾಹವಾಗಿ 6 ವರ್ಷದ ಬಳಿಕ ತಂದೆಯಾಗುತ್ತಿದ್ದಾರೆ ಈ ಖ್ಯಾತ ಸಿಂಗರ್​

https://newsfirstlive.com/wp-content/uploads/2024/05/Justin-Baiber.jpg

Load More