newsfirstkannada.com

INDvsPAK: ಇಂದು ಟೀಂ ಇಂಡಿಯಾ ಪಕ್ಕಾ ಗೆಲ್ಲುತ್ತೆ! 5 ಕೋಟಿ ರೂಪಾಯಿ ಬೆಟ್ಟಿಂಗ್​ ಕಟ್ಟಿದ ಖ್ಯಾತ ರ‍್ಯಾಪರ್​!

Share :

Published June 9, 2024 at 8:26am

Update June 9, 2024 at 8:27am

  ಟೀಂ ಇಂಡಿಯಾದ ಮೇಲೆ ಎಲ್ಲರ ಕಣ್ಣು.. ಗೆಲ್ಲುವ ನಿರೀಕ್ಷೆ

  ಭಾರತ ಮಾತ್ರವಲ್ಲ ವಿದೇಶದಲ್ಲೂ ಇಂಡಿಯಾದ ಮೇಲೆ ಬೆಟ್ಟಿಂಗ್​

  ಒಂದೆರಡಲ್ಲ, 5 ಕೋಟಿ ಬಾಜಿ ಕಟ್ಟಿದ ಈ ರ‍್ಯಾಪರ್ ಯಾರು ಗೊತ್ತಾ?

ಇಂದು ಎಲ್ಲರ ಕಣ್ಣು ಟೀಂ ಇಂಡಿಯಾದ ಮೇಲಿದೆ. ಕಾರಣ 2024ರ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಪಡೆ ಪಾಕಿಸ್ತಾನವನ್ನು ಮೊದಲ ಬಾರಿಗೆ ಎದುರಿಸುತ್ತಿದೆ. ಹಾಗಾಗಿ ಭಾರತ ತಂಡದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅನೇಕರು ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಈಗಾಗಲೇ ಬೆಟ್ಟಿಂಗ್​​ಗೂ ಇಳಿದಿದ್ದಾರೆ. ಕೋಟ್ಯಾಂತರ ರೂಪಾಯಿ ಮುಂದಿಟ್ಟು ಟೀಂ ಇಂಡಿಯಾ ಇಂದು ಜಯಿಸುತ್ತದೆ ಎಂದು ಬಾಜಿ ಕಟ್ಟಿದ್ದಾರೆ.

ಹೌದು. ಭಾರತ ಮತ್ತು ಪಾಕ್​ ಪಂದ್ಯ ರಣರೋಚಕದಿಂದ ಕೂಡಿರುತ್ತದೆ. ಅದರಂತೆಯೇ ಇಂದು ನಡೆಯುವ ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಪಂದ್ಯ ಏರ್ಪಡಲಿದೆ. ಆದರೆ ಇಂದಿನ ಪಂದ್ಯದಲ್ಲಿ ಭಾರತ ಗೆಲ್ಲುತ್ತೆ ಅಂತ ಭಾರತೀಯರು ಮಾತ್ರವಲ್ಲ, ವಿದೇಶಿಗರು ಬೆಟ್ಟಿಂಗ್​ ಕಟ್ಟಿದ್ದಾರೆ. ಅದರಂತೆಯೇ ಕೆನಡಾದ ಖ್ಯಾತ ರ‍್ಯಾಪರ್ ಆಬ್ರೆ ಡ್ರೇಕ್​ ಗ್ರಹಾಂ 5 ಕೋಟಿ ಬೆಟ್ಟಿಂಗ್​ ಕಟ್ಟಿದ್ದಾರೆ.

ಇದನ್ನೂ ಓದಿ: INDvsPAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​! ಬರೀ 10 ಸೆಕೆಂಡ್​ ಜಾಹೀರಾತಿಗೆ ಇಷ್ಟೊಂದು ಪಾವತಿಸಬೇಕಾ?

ಡ್ರೇಕ್ ಬೆಟ್ಟಿಂಗ್​ ಕಟ್ಟಿದ್ದು ಇದೇ ಮೊದಲಲ್ಲ. IPL 2024 ರ ಫೈನಲ್‌ಗೆ ಮುಂಚಿತವಾಗಿ, ಕೆನಡಾದ ರ‍್ಯಾಪರ್ ಕೋಲ್ಕತ್ತಾ ನೈಟ್ ರೈಡರ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮುತ್ತೆ ಎಂದು ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ 2 ಕೋಟಿ ಪಂತವನ್ನು ಕಟ್ಟಿದ್ದರು. ಇದೀಗ ಟೀಂ ಇಂಡಿಯಾದ ಮೇಲೆ ಬೆಟ್ಟಿಂಗ್​ ಕಟ್ಟಿದ್ದಾರೆ.

ಅಚ್ಚರಿ ಸಂಗತಿ ಎಂದರೆ ಟೀಂ ಇಂಡಿಯಾ ಮತ್ತು ಪಾಕ್​ ಟಿ20 ವಿಶ್ವಕಪ್​ನಲ್ಲಿ 9ನೇ ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಮೆನ್​ ಇನ್​ ಬ್ಲೂ 8 ಬಾರಿ ಜಯಿಸಿದೆ. ಪಾಕಿಸ್ತಾನ 2021ರಲ್ಲಿ ಒಮ್ಮೆ ಮಾತ್ರ ಗೆದ್ದಿತ್ತು.

ಇದನ್ನೂ ಓದಿ: ಧೋನಿ, ಯುವಿ, ಗಂಭೀರ್​ಗಿಂತ ಪಾಕ್​​ ವಿರುದ್ಧ​ ಕೊಹ್ಲಿಯೇ ಬೆಸ್ಟ್​.. ಟ್ರ್ಯಾಕ್​ ರೆಕಾರ್ಡ್​​ ಕೇಳಿದ್ರೆ ಶಾಕ್ ಆಗ್ತೀರಾ!

ಇಂದಿನ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಇದೆ. ಅದರಲ್ಲೂ ಭಾರತ ಸರಳವಾಗಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದರೂ ಇಂದು ಸಂಜೆ ನಡೆಯುತ್ತಿರುವ ಪಂದ್ಯವನ್ನು ಕಾಣಲು ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

INDvsPAK: ಇಂದು ಟೀಂ ಇಂಡಿಯಾ ಪಕ್ಕಾ ಗೆಲ್ಲುತ್ತೆ! 5 ಕೋಟಿ ರೂಪಾಯಿ ಬೆಟ್ಟಿಂಗ್​ ಕಟ್ಟಿದ ಖ್ಯಾತ ರ‍್ಯಾಪರ್​!

https://newsfirstlive.com/wp-content/uploads/2024/06/IND-vs-PAK.jpg

Load More