newsfirstkannada.com

OTTಯಲ್ಲಿ ರಿಲೀಸ್​ ಆದ ಹೀರಾಮಂಡಿ ಸೀರಿಸ್​ ಬಗ್ಗೆ ಫ್ಯಾನ್ಸ್​ ಬೇಸರ; ಸಂಜಯ್ ಲೀಲಾ ಬನ್ಸಾಲಿ ಎಡವಿದ್ದೆಲ್ಲಿ?

Share :

Published May 28, 2024 at 5:17pm

  ಬಾಲಿವುಡ್‌ನ ಅತ್ಯಂತ ಬೇಡಿಕೆಯ ಡೈರೆಕ್ಟರ್​ ಸಂಜಯ್ ಲೀಲಾ ಬನ್ಸಾಲಿ

  ಅಲಾಮ್​ಜೇಬ್​ ಪಾತ್ರದಲ್ಲಿ ಅಭಿನಯಿಸಿದ ಶರ್ಮಿನ್ ಬಗ್ಗೆ ಫ್ಯಾನ್ಸ್​ ಕೋಪ

  ರಾಮ್ ಲೀಲಾ, ಪದ್ಮಾವತ್, ಹೀಗೆ​ ಬ್ಲಾಕ್​ ಬಾಸ್ಟರ್​ ಸಿನಿಮಾ ಕೊಟ್ಟಿದ್ದ ಸಂಜಯ್ ಲೀಲಾ

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಅಂದ್ರೆ ಅದು ಆಮೀರ್ ಖಾನ್.. ಅಂತೆಯೇ ಸಂಜಯ್ ಲೀಲಾ ಬನ್ಸಾಲಿ ಅವರು ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಿರ್ದೇಶಕರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳು ರಿಲೀಸ್ ಆದರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ರಾಮ್ ಲೀಲಾ, ಪದ್ಮಾವತ್, ದೇವದಾಸ್​, ಗಂಗೂಬಾಯಿ ಕಾತ್ಯಾವಾಡಿ ಹೀಗೆ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನ ಕೊಟ್ಟ ಸಂಜಯ್ ಲೀಲಾ ಬನ್ಸಾಲಿ ಅಂದ್ರೆ ಬಾಲಿವುಡ್​ ಮಂದಿಗೆ ಸಖತ್ ಪ್ರೀತಿ. ಒಮ್ಮೆಯಾದ್ರೂ ಇವರ ಚಿತ್ರದಲ್ಲಿ ನಟಿಸಬೇಕು ಅಂತ ಬಹುತೇಕ ನಟ ನಟಿಯರಿಗೆ ಆಸೆ ಇರುತ್ತದೆ.

ಇದನ್ನೂ ಓದಿ: ‘ಚಂದ್ರಮುಖಿ ಪ್ರಾಣ ಸಖಿ’ ಸಿನಿಮಾ ನಿರ್ಮಾಪಕ ಸ್ವಾಗತ್​ ಬಾಬು ವಿಧಿವಶ

ಇನ್ನೂ, ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸಿದವ್ರು ಸಣ್ಣ ಪಾತ್ರವೇ ಆದ್ರೂ ಸಖತ್ ಫೇಮಸ್ ಆಗಿಬಿಡ್ತಾರೆ. ಯಾಕಂದ್ರೆ ಬನ್ಸಾಲಿ ಚಿತ್ರದಲ್ಲಿ ಪಾತ್ರ ಚಿಕ್ಕದ್ದಿರಲಿ ಅಥವಾ ದೊಡ್ಡದಿರಲಿ ಎಲ್ಲದ್ದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತೆ. ಕಾಸ್ಟ್ಯೂಮ್​ಯಿಂದ ಹಿಡಿದು ಮ್ಯೂಸಿಕ್​ನವರೆಗೂ ಎಲ್ಲವನ್ನೂ ಬನ್ಸಾಲಿ ಖುದ್ದು ಪರಿಶೀಲಿಸಿ ಓಕೆ ಮಾಡ್ತಾರೆ. ಬಹುಶಃ ಇದೇ ಕಾರಣಕ್ಕೆ ಇರಬಹುದು ಬನ್ಸಾಲಿ ಚಿತ್ರಗಳು ಸೋಲುವುದು ಕಡಿಮೆ. ರಿಚ್ ಮೇಕಿಂಗ್ ಸ್ಟ್ರಾಂಗ್ ಕಥೆಯ ಸಿನಿಮಾ ಮಾಡಿ ಪ್ರೇಕ್ಷಕರ ಮನಗೆದ್ದಿದ್ದ ಬನ್ಸಾಲಿ ಈಗ ಹೀರಾಮಂಡಿ ಎನ್ನುವ ವೆಬ್​ಸೀರಿಸ್ ಮಾಡಿ ಜನ ಮನ ಗೆದ್ದಿದ್ದಾರೆ. ಯಾವ ಹೈ ಬಜೆಟ್​ಗೂ ಕಡಿಮೆ ಇಲ್ಲದಂತೆ ಮಾಡಿರೋ ಹೀರಾಮಂಡಿ ಸೀರಿಸ್ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿದ್ದು, ಜನ ಹುಚ್ಚೆದ್ದು ನೋಡ್ತಿದ್ದಾರೆ. ಇಂತದ್ದೊಂದು ಮೇಕಿಂಗ್ ಇರುವ ವೆಬ್​ಸೀರಿಸ್​ ಇಂಡಿಯನ್​ ಮಾರುಕಟ್ಟೆಗೆ ಬೇಕಿತ್ತು ಎಂದು ಹೇಳ್ತಿದ್ದಾರೆ.

ಹೀಗೆ ಪಾಸಿಟಿವ್ ಫೀಡ್​ಬ್ಯಾಕ್ ಬರ್ತಿರೋದರ ಹಿಂದಿನ ಶಕ್ತಿ ಸಂಜಯ್ ಲೀಲಾ ಬನ್ಸಾಲಿ ಅಂದ್ರೆ ತಪ್ಪಾಗೋದಿಲ್ಲ. ತಮ್ಮ ಮೇಕಿಂಗ್​ನಲ್ಲಿ ತಪ್ಪೇ ಮಾಡದ ಸಂಜಯ್ ಲೀಲಾ ಬನ್ಸಾಲಿ ಈ ಬಾರಿ ಒಂದು ಸಣ್ಣ ತಪ್ಪು ಮಾಡಿಕೊಂಡು ಬಿಟ್ರಾ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಅಂದ್ಹಾಗೆ ಹೀಗೆ ಪ್ರೇಕ್ಷಕರು ಮಾತಾಡಿಕೊಳ್ಳೋಕೆ ಮುಖ್ಯ ಕಾರಣ ಹೀರಾಮಂಡಿ ಸೀರಿಸ್​ನ ಅಲಾಮ್​ಜೇಬ್ ಎನ್ನುವ ಪಾತ್ರಧಾರಿ. ಹೀರಾಮಂಡಿಯಲ್ಲಿ ಅಲಾಮ್​ಜೇಬ್​ ಎನ್ನುವ ಒಂದು ಪಾತ್ರವಿದ್ದು ಇದಕ್ಕೆ ಇಡೀ ಸೀರಿಸ್​ನಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಈ ಪಾತ್ರವನ್ನು ಶರ್ಮಿನ್​ ಸೇಗಲ್ ಎನ್ನುವ ನಟಿ ನಿಭಾಯಿಸಿದ್ದಾರೆ. ಸಖತ್ ಸ್ಟ್ರಾಂಗ್ ಮೆಂಟಾಲಿಟಿ ಇರೋ ಅಲಾಮ್​ಜೇಬ್​ ಪಾತ್ರವನ್ನು ಶರ್ಮಿನ್​ ಬಹಳ ನಿರುತ್ಸಾಹದಿಂದ ನಟಿಸಿದ್ದಾರೆ. ಇದು ಸಹಜವಾಗೇ ಪ್ರೇಕ್ಷಕರಿಗೆ ನಿರಾಸೆಯುಂಟು ಮಾಡಿದೆ. ಹೀರಾಮಂಡಿಯಂತಹ ತೂಕವುಳ್ಳ ಕಥೆಯಲ್ಲಿ ಅಲಾಮ್​ಜೇಬ್​ ಎಕ್ಸ್​​ಪ್ರೆಶನ್​ ಕೊಡದೇ ಪಾತ್ರವನ್ನು ಫುಲ್​ ಡಲ್​ ಮಾಡಿದ್ದಾರೆ ಎಂದು ವೀಕ್ಷಕರು ಕಿಡಿಕಾರಿದ್ದಾರೆ. ಕೋಪ, ಖುಷಿ, ಬೇಜಾರು, ದುಃಖ ಯಾವುದೇ ಸನ್ನಿವೇಶವಿದ್ರೂ ಅಲಾಮ್​ಜೇಬ್​ ಮುಖಭಾವ ಒಂದೇ ರೀತಿ ಇರುತ್ತೆ, ಎಲ್ಲದರಲ್ಲೂ ಪರಿಪೂರ್ಣತೆ ಇರಬೇಕು ಅಂತ ಹೇಳುವ ಬನ್ಸಾಲಿ ಇದನ್ನು ಹೇಗೆ ಒಪ್ಪಿಕೊಂಡ್ರು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ: IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಅಲ್ಲದೇ ಸೋಶಿಯಲ್ ಮಿಡಿಯಾದಲ್ಲಿ ಇದು ಬಹುದೊಡ್ಡ ಚರ್ಚೆಯಾಗಿದ್ದು. ಅಲಾಮ್​ಜೇಬ್ ಪಾತ್ರಧಾರಿಯನ್ನ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಶರ್ಮಿನ್, ಬನ್ಸಾಲಿ ಸಹೋದರಿಯ ಮಗಳು ಹಾಗಾಗಿ ಆಕೆಗೆ ಚಾನ್ಸ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಅದಿತಿ ರಾಯ್ ಹೈದರಿ ತಮ್ಮ ಗಜಗಾಮಿನಿ ನಡಿಗೆಯಿಂದ ಎಲ್ಲರ ಮನ ಗೆದ್ದಿದ್ದು, ಶರ್ಮಿನ್ ಅದಿತಿಯನ್ನು ನೋಡಿ ಕಲಿಯೋದು ತುಂಬಾ ಇದೆ ಎಂದು ಹೇಳ್ತಿದ್ದಾರೆ. ಇದಷ್ಟೇ ಅಲ್ಲದೇ ಕೆಲ ಸಂದರ್ಶನಗಳಲ್ಲಿ ಶರ್ಮಿನ್ ಕೋ ಸ್ಟಾರ್​ಗಳ ಬಗ್ಗೆ ಮಾತಾಡಿರೋದು ನೋಡಿ ಶರ್ಮಿನ್​ಗೆ ಇನ್​ಸೆಕ್ಯುರಿಟಿ ಹೆಚ್ಚು ಇದ್ದಂತೆ ಕಾಣುತ್ತೆ ಎಂದು ಟೀಕಿಸಿದ್ದಾರೆ. ಇದು ಕೆಲವರ ಅಭಿಪ್ರಾಯವಾದ್ರೆ, ಇನ್ನೂ ಕೆಲವರು ಅಲಾಮ್​ಜೇಬ್​ ಪಾತ್ರ ಇರೋದೇ ಹಾಗೇ ಆಕೆ ಸೌಮ್ಯ ಸ್ವಭಾವದ ಹೆಣ್ಣು ಮಗಳು ಹಾಗಾಗಿ ಶರ್ಮಿನ್​ ಅದರಂತೆ ನಟಿಸಿದ್ದಾರೆ ಎಂದು ನಟಿಯ ಬೆನ್ನಿಗೆ ನಿಂತಿದ್ದಾರೆ. ಆದ್ರೆ ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನೂ ಬಹಳ ವರ್ಷಗಳಿಂದ ಫಾಲೋ ಮಾಡಿಕೊಂಡು ಬರ್ತಿರೋರಿಗೆ ಎಕ್ಸ್​ಪ್ರೆಶನ್​ಲೆಸ್​ ಅಲಾಮ್​ಜೇಬ್​ ಪಾತ್ರ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟವೇ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

OTTಯಲ್ಲಿ ರಿಲೀಸ್​ ಆದ ಹೀರಾಮಂಡಿ ಸೀರಿಸ್​ ಬಗ್ಗೆ ಫ್ಯಾನ್ಸ್​ ಬೇಸರ; ಸಂಜಯ್ ಲೀಲಾ ಬನ್ಸಾಲಿ ಎಡವಿದ್ದೆಲ್ಲಿ?

https://newsfirstlive.com/wp-content/uploads/2024/05/Heeramandi2.jpg

Load More