ವಿರಾಟ್ ಕೊಹ್ಲಿ ರಿಟೈರ್​​ಮೆಂಟ್​​ಗೆ ಆಗ್ರಹಿಸಿದ ಫ್ಯಾನ್ಸ್! ಇವರ ಬೇಸರಕ್ಕೆ ಕಾರಣ?

author-image
AS Harshith
Updated On
ವಿರಾಟ್ ಕೊಹ್ಲಿ ರಿಟೈರ್​​ಮೆಂಟ್​​ಗೆ ಆಗ್ರಹಿಸಿದ ಫ್ಯಾನ್ಸ್! ಇವರ ಬೇಸರಕ್ಕೆ ಕಾರಣ?
Advertisment
  • 40ನೇ ವರ್ಷದಲ್ಲೂ ದೇಶಿ ಕ್ರಿಕೆಟ್ ಆಡಿದ್ರು ಸಚಿನ್
  • ಕೊಹ್ಲಿ ಲಂಡನ್​​ ಟ್ರಿಪ್​​ ಬದಲಿಗೆ ದೇಶಿ ಕ್ರಿಕೆಟ್​ ಆಡಿದ್ರೆ ಏನಾಗ್ತಿತ್ತು?
  • ಕೊಹ್ಲಿ ಫಾರ್ಮ್​ಗೆ ಇನ್ನೆಷ್ಟು ದಿನ ಕಾಯಬೇಕು? ಪರದಾಡುತ್ತಿರುವ ಕಿಂಗ್​?

ಮಾಡ್ರನ್ ಡೇ ಕ್ರಿಕೆಟ್​ನ ದೇವರು ವಿರಾಟ್​ ಕೊಹ್ಲಿಯ ಆಟಕ್ಕೆ ಕುಣಿದು ಕುಪ್ಪಳಿಸಿದ್ದ ಫ್ಯಾನ್ಸ್​, ಇದೀಗ ನಿಮ್ಮ ಆಟ ಸಾಕಪ್ಪ ಅಂತಿದ್ದಾರೆ. ಈ ವರ್ಷದಲ್ಲಂತೂ ವೈಫಲ್ಯದ ಹಾದಿ ಹಿಡಿದಿರೋ ವಿರಾಟ್​, ರನ್​ಗಳಿಕೆಗೆ ಪರದಾಟ ನಡೆಸ್ತಿದ್ದಾರೆ. ಕೊಹ್ಲಿ ಆಟವನ್ನ ಎಂಜಾಯ್​ ಮಾಡ್ತಿದ್ದ ಫ್ಯಾನ್ಸ್​, ಇದ್ರಿಂದ ಆಗಿರೋ ಬೇಸರ ಅಷ್ಟಿಷ್ಟಲ್ಲ. ಕೊಹ್ಲಿಯ ಈ ವೈಫಲ್ಯಕ್ಕೆ ಕಾರಣ ಇದೆ. ಆ ಕಾರಣ ಏನು..? ಇಲ್ಲಿದೆ ಓದಿ.

1 + 17 = 18.. ನಾವ್ ಹೇಳ್ತಿರೋದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್​ನ ಕಥೆಯಲ್ಲ. ಇದು ವಿರಾಟ್​ ಕೊಹ್ಲಿ ಫೇವರಿಟ್ ಗ್ರೌಂಡ್ ಪುಣೆಯಲ್ಲಿ ಗಳಿಸಿದ ರನ್​ನ ಕಥೆ.! ವ್ಯಥೆ.!

ಹೌದು! ನ್ಯೂಜಿಲೆಂಡ್​ ಎದುರಿನ ಬೆಂಗಳೂರು ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ, ಪುಣೆಯಲ್ಲಿ ಪವರ್ ಫುಲ್ ಕಮ್​ಬ್ಯಾಕ್ ಮಾಡ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದ್ರೆ, ಈ ನಿರೀಕ್ಷೆ ಹುಸಿಯಾಯ್ತು. ರನ್​ಗಳಿಸೋದು, ಸೆಂಚುರಿ ಸಿಡಿಸೋ ನಿರೀಕ್ಷೆಯನ್ನ ಬಿಟ್​ ಬಿಡಿ. ಮಿಚೆಲ್ ಸ್ಯಾಂಟ್ನರ್​ಗೆ ವಿಕೆಟ್​ ಒಪ್ಪಿಸಿದ ರೀತಿ ಇತ್ತಲ್ಲ ಅದಂತೂ ಹೀನಾಯವಾಗಿತ್ತು.

ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

ಕೊಹ್ಲಿ ಔಟಾದ ರೀತಿಗೆ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಟೀಕೆಗಳು ಕೇಳಿ ಬರ್ತಿವೆ. ಅಷ್ಟೇ ಅಲ್ಲ.! ದಿಗ್ಗಜ ಕ್ರಿಕೆಟಿಗರು ಕೂಡ ವಿರಾಟ್​ ವೈಫಲ್ಯದ ಬಗ್ಗೆ ಡಿಬೇಟ್ ನಡೆಸ್ತಿದ್ದಾರೆ. ಇದ್ರ ನಡುವೆ ಲೆಜೆಂಡರಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ವಿರಾಟ್​ ವೈಫಲ್ಯದ ಹಿಂದಿನ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.


">October 27, 2024

‘ದೇಶಿ ಕ್ರಿಕೆಟ್​ನಲ್ಲಿ ಆಡಿದ್ರೆ ಉಪಯೋಗವಾಗ್ತಿತ್ತು’

ಕೇವಲ ನೆಟ್ ಪ್ರಾಕ್ಟೀಸ್ ಮಾಡುವುದಕ್ಕಿಂತ, ದೇಶಿ ಕ್ರಿಕೆಟ್‌ನಲ್ಲಿ ಒಂದೆರಡು ಇನ್ನಿಂಗ್ಸ್‌ ಆಡಿದ್ದರೂ, ವಿರಾಟ್ ಕೊಹ್ಲಿಗೆ ತುಂಬಾನೇ ಪ್ರಯೋಜನವಾಗುತ್ತಿತ್ತು. ಸ್ಪಿನ್ನರ್‌ಗಳ ಎದುರು ವಿರಾಟ್ ಕೊಹ್ಲಿ ರನ್​ಗಳಿಸಲು ಪರದಾಡುತ್ತಿರುವುದಕ್ಕೆ ಇದೊಂದೇ ಕಾರಣ ಎಂದು ಹೇಳಲಾರೆ. ಆದ್ರೆ, ಮ್ಯಾನೇಜ್‌ಮೆಂಟ್​ನ ಒಪ್ಪಿಸಿ ಮೊದಲೇ ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿದ್ರೆ, ಅನುಕೂಲವಾಗ್ತಿತ್ತು.
ಅನಿಲ್ ಕುಂಬ್ಳೆ, ಮಾಜಿ ಆಟಗಾರ.

publive-image

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೈಕೊಟ್ಟ ಕೋಚ್​​; ಗೌತಮ್ ಗಂಭೀರ್​ಗೆ ಏನಾಯ್ತು..?

ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯದಲ್ಲಿ ತಪ್ಪಿಲ್ಲ. ಯಾಕಂದ್ರೆ, ಕಿಂಗ್ ಕೊಹ್ಲಿ ಎಂದು ಕರೆಸಿಕೊಳ್ಳುವ ಈ ಮಾಡ್ರನ್ ಡೇ ದಿಗ್ಗಜನ ಆಟ ಇಂದು ಅಷ್ಟರ ಮಟ್ಟಿಗೆ ಕುಸಿದಿದೆ. ಕಾನ್ಪಿಡೆನ್ಸ್​ ಮಾಯವಾಗಿದೆ. ಪರದಾಟ ಸಾಮಾನ್ಯ ಅನ್ನಿಸಿ ಬಿಟ್ಟಿದೆ. ಮೊದಲಿದ್ದ ಕೊಹ್ಲಿ ಬ್ಯಾಟಿಂಗ್ ಖದರ್​​ಗೂ ಈಗಿರೋ ಬ್ಯಾಟಿಂಗ್​ಗೂ ಅಜಗಜಾಂತರ ವ್ಯತ್ಯಾಸವಿದೆ. ಇದ್ರಿಂದಾಗಿ ವಿರಾಟ್ ಕೊಹ್ಲಿಯ​ ನಡೆ ಹಾಗೂ ಕಮಿಟ್ಮೆಂಟ್​ನ ಪ್ರಶ್ನೆ ಮಾಡುವಂತಾಗಿದೆ.

ಬೇರೆಯವರಿಗೊಂದು ನ್ಯಾಯ.. ಕೊಹ್ಲಿಗೊಂದು ನ್ಯಾಯ..?

ಕಳೆದ ಬಾಂಗ್ಲಾದೇಶ ವಿರುದ್ಧದ ಸಿರೀಸ್ ಆರಂಭಕ್ಕೂ ಮುನ್ನ 2 ತಿಂಗಳು ಟೀಮ್ ಇಂಡಿಯಾ ಆಟಗಾರರು ರೆಸ್ಟ್​ನಲ್ಲಿದ್ದರು. ಈ ವೇಳೆ ಟೀಮ್​ ಮ್ಯಾನೇಜ್​ಮೆಂಟ್​ ಕೆಲ ಆಟಗಾರರಿಗೆ ಇರಾನಿ ಕಪ್​ ಆಡುವಂತೆ ಸೂಚನೆಯನ್ನ ನೀಡಿತ್ತು. ಅದರಂತೆ ಕೆ.ಎಲ್.ರಾಹುಲ್, ರಿಷಭ್ ಪಂತ್, ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್ ಇರಾನಿ ಟ್ರೋಫಿಯನ್ನಾಡಿ ಆ ಬಳಿಕ ಬಾಂಗ್ಲಾ ಟೆಸ್ಟ್​ ಸರಣಿಗೆ ಬಂದ್ರು. ಆದ್ರೆ, ಇರಾನಿ ಕಪ್​​ನಿಂದ ದೂರ ಉಳಿದಿದ್ದ ವಿರಾಟ್​​​​​ ಹಾಗೂ ರೋಹಿತ್ ಶರ್ಮಾ ಕೇವಲ ಅಭ್ಯಾಸವನ್ನಷ್ಟೇ ನಡೆಸಿ ಬಾಂಗ್ಲಾ ಎದುರು ಕಣಕ್ಕಿಳಿದಿದ್ದರು. ಆನ್​ಫೀಲ್ಡ್​ ಇವರು ಎಂತಾ ಪರ್ಫಾಮೆನ್ಸ್​ ನೀಡಿದ್ದಾರೆ ಅನ್ನೋದು ನಿಮಗೆ ಗೊತ್ತು. ಕೇವಲ ಫಾರ್ಮ್​ ಮಾತ್ರವಲ್ಲ. ಇಲ್ಲಿ ಕಮಿಟ್​ಮೆಂಟ್​ನ ಪ್ರಶ್ನೆಯೂ ಹುಟ್ಟಿದೆ. ಇತರೆ ಆಟಗಾರರಿಗೊಂದು ನ್ಯಾಯ? ಸೂಪರ್ ಸ್ಟಾರ್​ಗಳಿಗೊಂದು ನ್ಯಾಯನಾ ಎಂಬ ಚರ್ಚೆ ನಡಿತಿದೆ.

ಸೂಪರ್ ಸ್ಟಾರ್ ಡೊಮೆಸ್ಟಿಕ್ ಆಡಬಾರದಾ..?

2012, ನವೆಂಬರ್. ಉತ್ತರ ಪ್ರದೇಶ ಎದುರು ರಣಜಿ ಪಂದ್ಯವನ್ನಾಡಿದ್ದೆ ಕೊನೆ. ಆ ಬಳಿಕ ವಿರಾಟ್, ದೇಶಿ ಕ್ರಿಕೆಟ್​ನಲ್ಲಿ ಕೊಹ್ಲಿ ಒಂದೇ ಒಂದು ಪಂದ್ಯ ಆಡಿಲ್ಲ. ವೈಫಲ್ಯ ಹಾದಿ ತುಳಿದಾಗಲೂ ಸ್ಟಾರ್ ಕ್ರಿಕೆಟರ್ ಎಂಬ ಮತ್ತಲ್ಲಿದ್ದ ಕಾರಣಕ್ಕೋ ಏನೋ ದೇಶಿ ಕ್ರಿಕೆಟ್​ನ ಆಡಲಿಲ್ಲ. ಆದ್ರೆ, ಅಂದು ಎಲ್ಲವನ್ನು ನೋಡಿದ್ದ ಸಚಿನ್ ತೆಂಡುಲ್ಕರ್​, ತನ್ನ 40ನೇ ವರ್ಷದಲ್ಲಿ 2013ರ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಹರಿಯಾಣ ಎದುರು ರಣಜಿ ಪಂದ್ಯವನ್ನಾಡಿದ್ದರು. ಆದ್ರೆ, ವಿರಾಟ್, ತಾನು ಹತ್ತಿ ಬಂದ ರಣಜಿ ಎಂಬ ಏಣಿಯನ್ನೇ ಮರೆತಂತಿದೆ.

publive-image

ದೇಶಿ ಕ್ರಿಕೆಟ್ ಆಡಿದ್ರೆ, ಫಾರ್ಮ್ ಸಮಸ್ಯೆ ಬರ್ತಿಲಿಲ್ವಾ..?

ಕಳೆದೊಂದು ವರ್ಷದಿಂದ ಫಾರ್ಮ್​ ಸಮಸ್ಯೆ ಅನುಭವಿಸ್ತಿರುವ ವಿರಾಟ್, ಸ್ಪಿನ್ನರ್​​ಗಳಿಗೆ ಸುಲಭದ ತುತ್ತಾಗ್ತಿದ್ದಾರೆ. ವಿಕ್ನೇಸ್​​​​​​​​​​​​​​​ ಸರಿಪಡಿಸಿಕೊಳ್ಳಲು ದೇಶಿ ಕ್ರಿಕೆಟ್​​ ಎಂಬ ಪರಿಹಾರದ ದಾರಿ ವಿರಾಟ್ ಮುಂದಿತ್ತು. ಈ ಹಿಂದೆ ಫಾರ್ಮ್​ ಸಮಸ್ಯೆ ಅನುಭವಿಸಿದ್ದ ಭಾರತದ ಹಲವು ದಿಗ್ಗಜರು ದೇಶಿ ಕ್ರಿಕೆಟ್​ಗೆ ತೆರಳಿ ಕಮ್​​ಬ್ಯಾಕ್ ಮಾಡಿದ್ದಿದೆ. ಆದ್ರೆ, ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ವಿರಾಟ್​, ಬ್ರೇಕ್​ ಸಿಕ್ರೆ ಸಾಕು ಲಂಡನ್​ಗೆ ಹಾರ್ತಾರೆ.

ಕೊಹ್ಲಿ ಫಾರ್ಮ್​ಗೆ ಮರಳಲು ಇನ್ನೆಷ್ಟು ದಿನ ಕಾಯಬೇಕು.?

2023.. ಜುಲೈ, ವೆಸ್ಟ್​ ಇಂಡೀಸ್ ಎದುರು ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಈ ಬಳಿಕ ಹೇಳಿಕೊಳ್ಳುವಂತ ಆಟವಾಡಿಲ್ಲ. ಹೋಮ್ ಕಂಡೀಷನ್ಸ್​ನಲ್ಲೂ ಕೊಹ್ಲಿಯ ಪರದಾಟ ನೋಡಿ ಬೇಸತ್ತಿರುವ ಕೆಲ ಫ್ಯಾನ್ಸ್​, ಸದ್ಯ ಗೌರವದಿಂದ ನಿವೃತ್ತಿ ಹೇಳುವಂತೆ ಒತ್ತಾಯಿಸುತ್ತಿದ್ದಾರೆ. ಕೊಹ್ಲಿಯ ಆಟ ಅಷ್ಟು ಬೇಸರ ತರಿಸಿದೆ. ಮುಂಬರುವ ಆಸಿಸ್ ಪ್ರವಾಸಕ್ಕೂ ಮುನ್ನವಾದ್ರೂ ಎಚ್ಚೆತ್ತುಕೊಂಡು ಕೊಹ್ಲಿ, ವೀಕ್ನೆಸ್​​ ಮೇಲೆ ವರ್ಕೌಟ್​ ಮಾಡಬೇಕಿದೆ. ಆಸ್ಟ್ರೇಲಿಯಾ ಆಟಗಾರರಂತೆ ದೇಶಿ ಕ್ರಿಕೆಟ್​ಗೆ ಮರಳಿ ಸಮಸ್ಯೆಗೆ ಪರಿಹಾರ ಕಂಡುಕೊಂಡ್ರೆ, ಕೊಹ್ಲಿ ಏನು ಸಣ್ಣವರಾಗಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment