‘ನಾಚಿಕೆ ಆಗಬೇಕು ನಿನಗೆ’- ಶುಭ್ಮನ್​ ಗಿಲ್​ ವಿರುದ್ಧ ಬಹಿರಂಗ ಆಕ್ರೋಶ; ಕಾರಣವೇನು?

author-image
Ganesh Nachikethu
Updated On
ಕೈಕೊಟ್ಟ ಗಿಲ್​​.. ಭಾರತ ತಂಡಕ್ಕೆ ಅಪಾಯಕಾರಿ ಬ್ಯಾಟ್ಸ್​ಮನ್​ ಎಂಟ್ರಿ; ಇಂಗ್ಲೆಂಡ್​ಗೆ ಭಾರೀ ನಡುಕ!
Advertisment
  • ಟೀಮ್​ ಇಂಡಿಯಾದ ಭವಿಷ್ಯದ ನಾಯಕ ಶುಭ್ಮನ್​​ ಗಿಲ್​​
  • ಉಪನಾಯಕ ಶುಭ್ಮನ್​​ ಗಿಲ್​ ವಿರುದ್ಧ ಬಹಿರಂಗ ಆಕ್ರೋಶ!
  • ಶುಭ್ಮನ್​​ ಗಿಲ್​ ಕಳಪೆ ಆಟಕ್ಕೆ ಆಕ್ರೋಶಗೊಂಡ ಅಭಿಮಾನಿಗಳು

ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಇದೇ ತಿಂಗಳು ಸೆಪ್ಟೆಂಬರ್ 19ನೇ ತಾರೀಕಿನಿಂದ ಶುರುವಾಗಲಿದೆ. ಈ ಸರಣಿಗಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಸದ್ಯದಲ್ಲೇ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲವು ಆಟಗಾರರು ದುಲೀಪ್ ಟ್ರೋಫಿಯ ಭಾಗವಾಗಿದ್ದಾರೆ.

ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲ ಆಟಗಾರರಿಗೂ ಈ ಟೂರ್ನಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಭಾರತ ತಂಡದ ಉಪನಾಯಕ ಶುಭ್ಮನ್​ ಗಿಲ್​ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಯುವ ಸ್ಟಾರ್ ಆಟಗಾರರು ಮೊದಲ ದಿನವೇ ಪ್ಲಾಪ್ ಆಗಿದ್ದಾರೆ.

ಶುಭ್ಮನ್​​ ಗಿಲ್​ ಕಳಪೆ ಆಟ

ಎಂ. ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಬಿ ನಡುವೆ ದುಲೀಪ್​​ ಟ್ರೋಫಿಯ ಮೊದಲ ಪಂದ್ಯ ನಡೆಯುತ್ತಿದೆ. ಇಂಡಿಯಾ ಬಿ ಇಂಡಿಯಾ ಎ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 322 ರನ್​ಗಳ ಟಾರ್ಗೆಟ್​ ಕೊಟ್ಟಿದೆ. 322 ರನ್​ಗಳ ಗುರಿ ಬೆನ್ನತ್ತಿದ ಇಂಡಿಯಾ ಎ ತಂಡದ ಪರ ಇನ್ನಿಂಗ್ಸ್​ ಆರಂಭಿಸಿದ ಕ್ಯಾಪ್ಟನ್​ ಶುಭ್ಮನ್​​ ಕೇವಲ 25 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ತಾನು ಆಡಿದ 43 ಬಾಲ್​ನಲ್ಲಿ 3 ಫೋರ್​​ ಗಳಿಸಿದ್ದಾರೆ. ಇವರ ಸ್ಟ್ರೈಕ್​ ರೇಟ್​​ 58.14 ಇತ್ತು.

ಗಿಲ್​ ವಿರುದ್ಧ ಫ್ಯಾನ್ಸ್​ ಆಕ್ರೋಶ

ಟೀಮ್​ ಇಂಡಿಯಾದ ಉಪನಾಯಕ ಶುಭ್ಮನ್​ ಗಿಲ್​​. ಇವರು ಭಾರತ ಕ್ರಿಕೆಟ್​ ತಂಡದ ಮುಂದಿನ ಕ್ಯಾಪ್ಟನ್​​​. ದುಲೀಪ್​ ಟ್ರೋಫಿಯಲ್ಲಿ ಇಂಡಿಯಾ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಬ್ಬ ಕ್ಯಾಪ್ಟನ್​ ಆದವನು ಕ್ರೀಸ್​ನಲ್ಲೇ ನಿಂತು ಮ್ಯಾಚ್​ ಗೆಲ್ಲಿಸಬೇಕು. ಅದು ಬೇಜವಾಬ್ದಾರಿಯಿಂದ ಬಾಲ್​ ಬಿಟ್ಟು ವಿಕೆಟ್​ ಒಪ್ಪಿಸುವುದು ಎಷ್ಟು ಸರಿ? ಶೇಮ್​ ಆನ್​ ಯೂ ಗಿಲ್​ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಶ್ರೇಯಸ್​ ಅಯ್ಯರ್​​ಗೆ ಬಿಗ್​ ಶಾಕ್​​​ ಕೊಟ್ಟ ಮುಖ್ಯ ಕೋಚ್​​​ ಗಂಭೀರ್​​; ಸ್ಟಾರ್​ ಬ್ಯಾಟರ್​ ಕಥೆ ಮುಗೀತಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment