newsfirstkannada.com

ಟಿ20 ವಿಶ್ವಕಪ್​ಗೆ ಹಾರ್ದಿಕ್​​ ಪಾಂಡ್ಯ ಆಯ್ಕೆ; ಟೀಮ್​ ಇಂಡಿಯಾದ ಸೆಲೆಕ್ಟರ್ಸ್​​​​ ವಿರುದ್ಧ ಭಾರೀ ಆಕ್ರೋಶ

Share :

Published April 30, 2024 at 10:08pm

Update April 30, 2024 at 10:58pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್

  ಚುಟುಕು ಸಮರಕ್ಕೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದ ಬಿಸಿಸಿಐ!

  ಹಾರ್ದಿಕ್​ ಪಾಂಡ್ಯ ಆಯ್ಕೆ ಮಾಡಿದವರ ವಿರುದ್ಧ ಫ್ಯಾನ್ಸ್​​​​​​​ ಭಾರೀ ಆಕ್ರೋಶ

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ನಡೆಯಲಿದೆ. ಜೂನ್​ ತಿಂಗಳಲ್ಲಿ ಯುಎಸ್​​, ವೆಸ್ಟ್​ ಇಂಡೀಸ್​ನಲ್ಲಿ ನಡೆಯೋ ಟಿ20 ವಿಶ್ವಕಪ್​ಗೆ ಅಳೆದು ತೂಗಿ ಬಿಸಿಸಿಐ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದೆ.

ಇನ್ನು, ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಕ್ಯಾಪ್ಟನ್ ರೋಹಿತ್​ ಶರ್ಮಾ ಅವರೇ ಮುನ್ನಡೆಸಲಿದ್ದಾರೆ. ಅಚ್ಚರಿ ಎಂದರೆ ಫಾರ್ಮ್​ನಲ್ಲೇ ಇಲ್ಲದ ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾದ ಉಪನಾಯಕನ ಪಟ್ಟ ಕಟ್ಟಲಾಗಿದೆ. ಇಷ್ಟು ದಿನ ಹಾರ್ದಿಕ್​ ಪಾಂಡ್ಯ ಟಿ20 ವಿಶ್ವಕಪ್​ಗೆ ಆಯ್ಕೆಯಾಗಲ್ಲ. ಇದಕ್ಕೆ ಕಾರಣ ಬ್ಯಾಟಿಂಗ್​​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಹಾರ್ದಿಕ್​ ಪಾಂಡ್ಯ ವೈಫಲ್ಯ ಎಂದು ಹೇಳಲಾಗಿತ್ತು. ಆದರೀಗ, ಭಾರೀ ವಿವಾದದ ಮಧ್ಯೆ ಕೂಡ ಬಿಸಿಸಿಐ ಹಾರ್ದಿಕ್​ಗೆ ಮಣೆ ಹಾಕಿದೆ.

ಇದರ ಮಧ್ಯೆ ಇಂದು ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದೆ. ಪ್ಲೇ ಆಫ್​ಗೆ ಹೋಗಲು ಮುಂಬೈ ಇಂಡಿಯನ್ಸ್​ ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ. ಈ ಪಂದ್ಯದಲ್ಲೂ ಹಾರ್ದಿಕ್​ ಡಕೌಟ್​ ಆಗಿದ್ದಾರೆ. ಹೀಗಾಗಿ ಫ್ಯಾನ್ಸ್​ ಹಾರ್ದಿಕ್​ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದ್ದಕ್ಕೆ ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಐಪಿಎಲ್​​ನಲ್ಲಿ ಕಳಪೆ ಪ್ರದರ್ಶನ ನೀಡ್ತಿರೋ ಸಿರಾಜ್​ T20 ವಿಶ್ವಕಪ್​​ಗೆ; ಬಿಸಿಸಿಐಗೆ ನಾಚಿಕೆ ಆಗ್ಬೇಕು ಎಂದ ಫ್ಯಾನ್ಸ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​ಗೆ ಹಾರ್ದಿಕ್​​ ಪಾಂಡ್ಯ ಆಯ್ಕೆ; ಟೀಮ್​ ಇಂಡಿಯಾದ ಸೆಲೆಕ್ಟರ್ಸ್​​​​ ವಿರುದ್ಧ ಭಾರೀ ಆಕ್ರೋಶ

https://newsfirstlive.com/wp-content/uploads/2024/01/HARDIK-PANDYA-3.jpg

Load More