ಕೆಂಡ ಸಂಪಿಗೆ ಸೀರಿಯಲ್​ ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಅಂಥದ್ದೇನು ಮಾಡಿದ್ರು ಕಾವ್ಯ ಶೈವ?

author-image
Veena Gangani
Updated On
ಕೆಂಡ ಸಂಪಿಗೆ ಸೀರಿಯಲ್​ ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಅಂಥದ್ದೇನು ಮಾಡಿದ್ರು ಕಾವ್ಯ ಶೈವ?
Advertisment
  • ನಿಮ್ದು ತಾಯಿ ಹೃದಯ ಅಕ್ಕ ಅಂತ ಹಾಡಿ ಹೊಗಳುತ್ತಿರುವ ನೆಟ್ಟಿಗರು
  • ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಟಿ ಕಾವ್ಯ
  • ಕೆಂಡಸಂಪಿಗೆ ಸೀರಿಯಲ್​ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಟಿ

ಕಲರ್ಸ್​ ಕನ್ನಡದಲ್ಲಿ ಟಾಪ್​ ಧಾರಾವಾಹಿಗಳ ಲಿಸ್ಟ್​ನಲ್ಲಿರೋ ಸ್ಟೋರಿ ಎಂದರೆ ಅದು ಕೆಂಡಸಂಪಿಗೆ. ಪರಿಣಿತ ಪ್ರೊಡಕ್ಷನ್ಸ್​ನಡಿ ಉದಯ್​​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೀರಿಯಲ್​ ಕೆಂಡಸಂಪಿಗೆ. ಈ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಕಾವ್ಯ ಶೈವ. ಕೆಂಡಸಂಪಿಗೆ ಸೀರಿಯಲ್​ನಲ್ಲಿ ಸುಮನಾ ಪಾತ್ರದಲ್ಲಿ ನಟಿ ಕಾವ್ಯ ಅವರು ಅಭಿನಯಿಸಿದ್ದರು.

ಇದನ್ನೂ ಓದಿ:ಸಾಯುವ ಹಿಂದಿನ ದಿನ ಕೈಯಾರೆ ಚಿತ್ರಾನ್ನ ಮಾಡಿ ಬಡಿಸಿದ್ದ -ಮೃತ ಪರಶುರಾಮನ ತಂದೆ ಆಕ್ರಂದನ..

publive-image

ಇದೇ ಸೀರಿಯಲ್ ಮೂಲಕ ಕಾವ್ಯ ಶೈವ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಆದರೆ, ಅನಾರೋಗ್ಯದ ಕಾರಣದಿಂದ ಸೀರಿಯಲ್​ನಿಂದ ದೂರ ಉಳಿದಿದ್ದ ಕಾವ್ಯ ಅವರು ಕೊಂಚ ಬ್ರೇಕ್‌ನ ಬಳಿಕ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋನಲ್ಲಿ ಕಂಟೆಸ್ಟೆಂಟ್ ಆಗಿದ್ದಾರೆ. ಸದ್ಯ ಡಿಕೆಡಿ ಶೋನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಆದರೆ ಇದರ ಮಧ್ಯೆ ನಟಿ ಕಾವ್ಯ ಅವರು ಆ ಒಂದು ಕೆಲಸದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು, ತಮ್ಮ ಕೋ ಡ್ಯಾನ್ಸರ್​ ಶಶಾಂಕ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಮಾನವೀಯತೆಯ ಹೆಜ್ಜೆ ಇಟ್ಟಿದ್ದಾರೆ.

ನಟಿ ಕಾವ್ಯ ಅವರ ಕೋ ಡ್ಯಾನ್ಸರ್​ ಆಗಿರೋ ಶಶಾಂಕ್​ ಎರಡು ವರ್ಷಗಳಿಂದ ತಮ್ಮ ಊರಿಗೆ ಹೋಗಿರಲಿಲ್ವಂತೆ. ಹೀಗಾಗಿ ಕಷ್ಟಗಳ ಹೆಜ್ಜೆಯಲ್ಲೇ ಡ್ಯಾನ್ಸ್ ವೇದಿಕೆಗೆ ಬಂದ ಶಶಾಂಕ್​ಗೆ ನಟಿ ಕಾವ್ಯ ಅವರು ಸರ್ಪ್ರೈಸ್​ವೊಂದನ್ನು ಕೊಟ್ಟಿದ್ದಾರೆ. 2 ವರ್ಷದಿಂದ ಶಶಾಂಕ್​ ಅವರ ತಾಯಿನನ್ನು ನೋಡಿರಲಿಲ್ವಂತೆ. ಅದಕ್ಕಾಗಿ ಕಾವ್ಯ ಅವರು ಶಶಾಂಕ್ ಊರಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ. ಜೊತೆಗೆ ಶಶಾಂಕ್​ ಅವರ ತಾಯಿಗೆ ಒಂದು ಫೋನ್​ ಅನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಈ ಮೂಲಕ ಶಶಾಂಕ್​ ಅವರ ತಾಯಿ ಮಗನ ಜೊತೆಗೆ ಮಾತಾಡಲೂ ಅನುಕೂಲ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಅಮ್ಮ ನೀನು ಊರಿಗೆ ಹೋಗಬೇಡ ಎಂದಿದ್ದ, 2 ದಿನದ ಹಿಂದೆ ಬಿಟ್ಟುಬಂದಿದ್ದೆ -ಮೃತ PSI ಪರಶುರಾಮನ ತಾಯಿ ಕಣ್ಣೀರು

publive-image

ಇದೇ ವಿಚಾರ ತಿಳಿಯುತ್ತಿದ್ದಂತೆ ಶೋನಲ್ಲಿ ಭಾಗಿಯಾಗಿದ್ದ ಜಡ್ಜಸ್​ ಹಾಗೂ ಸ್ಪರ್ಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಜೊತೆಗೆ ನೆಟ್ಟಿಗರು ಕೂಡ ಹೆಮ್ಮೆಯ ಮಾತಾಡಿದ್ದಾರೆ. ನಿಮ್ದು ತಾಯಿ ಹೃದಯ ಅಕ್ಕ, ಕಾವ್ಯ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕೆ, ಪ್ರೀತಿ ವಿಶ್ವಾಸ ತೋರಿಸಿದ್ದಕ್ಕೆ ನಿಮಗೊಂದು ಹ್ಯಾಟ್ಸಾಫ್, ಕಾವ್ಯ ಅವರು ಮಾಡಿದ್ದು ಒಳ್ಳೆಯ ಕೆಲಸ. ವಿಡಿಯೋವನ್ನು ನೋಡುತ್ತಿದ್ದರೆ ಬೇಸರ ಆಗುತ್ತಿದೆ ಅಂತಾ ಕಾಮೆಂಟ್ಸ್ ಹಾಕಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment