ಒಳ್ಳೆ ಹುದ್ದೆಯಲ್ಲಿದ್ದ ಮಗ ಅನ್ಯಾಯವಾಗಿ ಮೃತಪಟ್ಟಿದ್ದಾನೆ
ನನ್ನ ಮಗ ಸಾಯುವ ಮುನ್ನ ಒಂದಿಷ್ಟು ಸಪ್ಪೆಯಾಗಿದ್ದ
ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು ತಂದೆ ಜನಕಮುನಿ
ಯಾದಗಿರಿ ಪಿಎಸ್ಐ ಪರಶುರಾಮ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದರ ಜೊತೆಗೆ ಮಗನ ಸಾವಿಗೆ ಕಾರಣರಾದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಮಗನ ಸಾವಿನ ಹಿಂದಿನ ದಿನ ಏನೆಲ್ಲಾ ಆಯ್ತು ಎಂಬುವುದರ ಬಗ್ಗೆ ಪರಶುರಾಮ್ ತಂದೆ ಜನಕಮುನಿ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ.. PSI ಪರಶುರಾಮ ಪತ್ನಿಯಿಂದ ಗಂಭೀರ ಆರೋಪ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಗ ಊಟ ಮಾಡೋಣ ಎಂದು ಹೇಳಿದ. ನನ್ನ ಮಗನೇ ಚಿತ್ರನ್ನ ಮಾಡಿ ನನಗೆ ಬಡಿಸಿದ. ಊಟ ಮಾಡಿ ರೂಮ್ನಲ್ಲಿ ಮಲಗಿದ್ದ. ನಾನು ಎದ್ದೇಳಿಸಲು ಹೋಗಿದ್ದಾಗ ಆಗ ಎದ್ದೇಳಲಿಲ್ಲ. ಮೈಯೆಲ್ಲ ಕಪ್ಪಾಗಿತ್ತು. ಒಂದಿಷ್ಟು ರಕ್ತ ಕೆಳಗಡೆ ಬಿದ್ದಿತ್ತು. ಸಾಯುವ ಮುನ್ನ ಒಂದಿಷ್ಟು ಸಪ್ಪಗೆ ಇದ್ದ. ನಾನು ಸಮಸ್ಯೆ ಕೇಳಿದ್ರೂ, ಏನು ಹೇಳಲಿಲ್ಲ. ಯಾವಾಗಲೂ ಅಷ್ಟೇ ಯಾವುದೇ ಸಮಸ್ಯೆ ಹೇಳ್ತಿರಲಿಲ್ಲ. ಒಳ್ಳೆ ಹುದ್ದೆಯಲ್ಲಿದ್ದು ಅನ್ಯಾಯವಾಗಿ ಸಾವನ್ನಪ್ಪಿದ್ದಾನೆ. ನನ್ನ ಮಗನಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ತಂದೆ ಜನಕಮುನಿ ಹೇಳಿದ್ದಾರೆ.
ಇತ್ತ, ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಪಿಎಸ್ಐ ಪರಶುರಾಮ್ ಅವರ ಸಹೋದರ ಹನುಮಂತ, ನನ್ನ ಸಹೋದರ ಬಹಳ ಬುದ್ದಿವಂತನಾಗಿದ್ದ. ವರ್ಗಾವಣೆಗಾಗಿಯೇ ನನ್ನ ಸಹೋದರನ ಸಾವಾಗಿದೆ. ಹಣ ಕೊಟ್ಟಿಲ್ಲ ಎಂದು ಉದ್ದೇಶ ಪೂರ್ವಕವಾಗಿ ವರ್ಗಾವಣೆ ಮಾಡಲಾಗಿದೆ. ಶಾಸಕ ಹಾಗೂ ಆತನ ಪುತ್ರನಿಗೆ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ