/newsfirstlive-kannada/media/post_attachments/wp-content/uploads/2024/07/mandya-former.jpg)
ಮಂಡ್ಯ: ಸಾಲಬಾಧೆಗೆ ಬೇಸತ್ತು ರೈತ ನೇಣಿಗೆ ಶರಣಾದ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಿ.ಸಿ.ಸ್ವಾಮಿ(48) ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರ್ಯಾಕ್ಟರ್ ಸಾಲ, ಬೆಳೆ ಸಾಲ, ಕೈ ಸಾಲ ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ಚು ಬಿ.ಸಿ.ಸ್ವಾಮಿ ಸಾಲ ಮಾಡಿದ್ದನು.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ! ಭಯಾನಕವಾಗಿದೆ ದೃಶ್ಯ
ಇತ್ತೀಚೆಗೆ ಆತನ ಆಲೆಮನೆ ಬೆಂಕಿಗಾಹುತಿಯಾಗಿ ನಷ್ಟವಾಗಿತ್ತು. ಎರಡು ಎಕರೆ ಜಮೀನು ಹೊಂದಿದ್ದ ಸ್ವಾಮಿ ಯಾವುದೇ ಬೆಳೆ ಇಲ್ಲದೆ ನಷ್ಟಕ್ಕೆ ಒಳಗಾಗಿದ್ದನು.
ಇದನ್ನೂ ಓದಿ: ಸಿಕ್ಕಿ ಬಿದ್ದ ಅಂತರ್ ಜಿಲ್ಲಾ ಕಳ್ಳರು! 244 ಗ್ರಾಂ ಬಂಗಾರ, 2500 ಗ್ರಾಂ ಬೆಳ್ಳಿ ವಶಕ್ಕೆ
ನಷ್ಟದಿಂದ ಕಂಗೆಟ್ಟಿದ್ದ ರೈತ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ