newsfirstkannada.com

ಬಿಯರ್​ ಖರೀದಿಸುವಾಗ ಬಾರ್​ನಲ್ಲೇ ತಗ್ಲಾಕೊಂಡ ಮಗ.. ಬೆಪ್ಪಾದ ಅಪ್ಪ ಮಾಡಿದ್ದೇನು ಗೊತ್ತಾ?

Share :

Published June 9, 2024 at 2:27pm

    ಇನ್ನೇನು ಬಿಯರ್ ತೆಗೆದುಕೊಂಡು ಹೋಗುವಾಗ ಬಂದ ಅಪ್ಪ

    ಕುಡಿಯಲ್ಲ ಎಂದರು ಬಿಡಲಿಲ್ಲ ಹೇಗೆ ಸೇವೆ ಮಾಡಿದರು ಗೊತ್ತಾ?

    ಬಾರ್​ನಲ್ಲಿ ಎಲ್ಲರ ಮುಂದೆಯೇ ಮಗನಿಗೆ ಬಾರ್ಸಿ ಹಾಕಿದ ತಂದೆ

ತಂದೆ ಮುಂದೆ ಮದ್ಯ ಖರೀದಿ ಮಾಡಬೇಕು ಎಂದರೆ ಧೈರ್ಯಬೇಕು. ಯಾವುದಾದರೂ ಬಾರ್​ನಲ್ಲಿ ಬೀಯರ್ ಖರೀದಿ ಮಾಡಲು ಹೋದಾಗ ಆಕಸ್ಮಾತ್​ ಆಗಿ ತಂದೆ ಬಂದರೆ ಹೇಗಿರುತ್ತದೆ ಪರಿಸ್ಥಿತಿ. ಅಲ್ಲೇ ಬಾರ್​ನಲ್ಲಿ ಏನು ಮಾಡಬೇಕೆಂದು ಗೊತ್ತಾಗದೇ ಯಾವ ಕಡೆ ಓಡೋದು ಅಂತ ಗೊತ್ತಾಗದೇ ಕೈ, ಕೈ ಹಿಸುಕಿಕೊಳ್ಳುತ್ತಿರುತ್ತೇವೆ. ಸದ್ಯ ಇಂತಹದ್ದೆ ಒಂದು ಸಂಗತಿ ನಡೆದಿದ್ದು, ಬಾರ್​ನಲ್ಲಿ ಬಿಯರ್ ಖರೀದಿಸಿದ್ದ ಮಗನಿಗೆ ತಂದೆ ಏನು ಮಾಡಿದ್ದಾರೆ ಗೊತ್ತಾ?.

ಇದನ್ನೂ ಓದಿ: ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು

ಹರಿಯಾಣದಲ್ಲಿ ಯುವಕನೊಬ್ಬ ಖುಷಿ, ಖುಷಿಯಾಗಿ ಮದ್ಯಪಾನ ಮಾಡಬೇಕೆಂದು ಖರೀದಿ ಮಾಡಲು ಬಾರ್​ವೊಂದಕ್ಕೆ ಹೋಗಿದ್ದಾನೆ. ಟಿನ್ ಬಿಯರ್ ಬಾಟಲ್ ಕೈಯಲ್ಲಿಡಿದು ಬಿಲ್ ಕಟ್ಟಿ ಇನ್ನೇನು ಬಾರ್​ನಿಂದ ಹೊರಗೆ ಹೋಗಬೇಕು ಅಷ್ಟರಲ್ಲಿ ಆಕಸ್ಮಿಕವಾಗಿ ತಂದೆ ಬಂದಿದ್ದಾರೆ. ಈ ವೇಳೆ ತಂದೆ ಕೈಯಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಗ ಭಾರೀ ಪಜೀತಿಗೆ ಒಳಗಾಗಿದ್ದಾನೆ. ಅಷ್ಟೇ ಅಲ್ಲ, ಬಾರ್​ನಲ್ಲಿ ಎಲ್ಲರ ಮುಂದೆ ಅವಮಾನಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!

ಬಾರ್​ನಲ್ಲಿ ಬಿಯರ್​ ಖರೀದಿ ಮಾಡಲು ಹೋಗಿ ಸಿಕ್ಕಿಬಿದ್ದ ತನ್ನ ಮಗನಿಗೆ, ತಂದೆ ಚಪ್ಪಲಿಯಿಂದ ಸರಿಯಾಗಿ ಹೊಡೆದಿದ್ದಾರೆ. ಎಲ್ಲರ ಮುಂದೆಯೇ ಮಗನ ಮುಖ, ಮುಖಕ್ಕೆ, ತಲೆ, ತಲೆಗೆ ಚಪ್ಪಲಿಯಲ್ಲಿ ಬಾರಿಸಿದ್ದಾನೆ. ಇಲ್ಲ ನನಗೋಸ್ಕಾರ ಬಂದಿಲ್ಲ. ಸ್ನೇಹಿತ ಕುಡೀತಿನಿ ಅಂದ ಅದಕ್ಕಾಗಿ ಬಿಯರ್​ ಕೊಳ್ಳಲು ಬಾರ್​ಗೆ ಬಂದೆ. ನಂದೇನು ತಪ್ಪಿಲ್ಲ. ಅಪ್ಪ ಎಲ್ಲರು ನೋಡುತ್ತಿದ್ದಾರೆ ಚಪ್ಪಲಿಯಲ್ಲಿ ಹೊಡೆಯಬೇಡಿ ಎಂದು ಮಗ ಹೇಳುತ್ತಿರುತ್ತಾನೆ. ಆದರೆ ತಂದೆ ಮಾತ್ರ ಕೋಪದಲ್ಲಿ ತನ್ನಷ್ಟು ಎತ್ತರದ ಮಗನಿಗೆ ಹೊಡೆಯುವುದನ್ನು ನಿಲ್ಲಿಸಿಲ್ಲ ಎಂದು ವಿಡಿಯೋದಿಂದ ತಿಳಿದು ಬರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಯರ್​ ಖರೀದಿಸುವಾಗ ಬಾರ್​ನಲ್ಲೇ ತಗ್ಲಾಕೊಂಡ ಮಗ.. ಬೆಪ್ಪಾದ ಅಪ್ಪ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2024/06/HARYANA_SON_FATHER.jpg

Load More