Advertisment

ಮಗನಿಂದಲೇ ತಂದೆಯ ಕೊಲೆ.. ಮಚ್ಚಿನಿಂದ ಕೊಚ್ಚಿ ಸಾಯಿಸಿದ ದುರುಳ

author-image
AS Harshith
Updated On
ಮಗನಿಂದಲೇ ತಂದೆಯ ಕೊಲೆ.. ಮಚ್ಚಿನಿಂದ ಕೊಚ್ಚಿ ಸಾಯಿಸಿದ ದುರುಳ
Advertisment
  • ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಮಗ
  • ಮಗನ ಮಚ್ಚೇಟಿಗೆ ಸಾವನಪ್ಪಿದ 75 ವರ್ಷದ ತಂದೆ
  • ತಂದೆಯನ್ನು ಕೊಲೆ ಮಾಡಿ ಪರಾರಿಯಾದ ಮಗ

ತುಮಕೂರು: ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟಪ್ಪ (75) ಮೃತ ದುರ್ದೈವಿ.

Advertisment

ಸಿದ್ದಪ್ಪ (45) ತಂದೆಯನ್ನ ಕೊಲೆಗೈದ ಪಾಪಿ ಮಗ. ಕೊಲೆಯಾದ ವೆಂಕಟ್ಟಪ್ಪ ಮೂರೂವರೆ ಎಕರೆ ಆಸ್ತಿ ಹೊಂದಿದ್ದನು. ಇತ್ತೀಚೆಗೆ ಜಮೀನು ಮಾರಾಟ ಮಾಡಿದ್ದನು.

ಇದನ್ನೂ ಓದಿ: ಅರ್ಜುನ್​​ ಹುಡುಕಲು ನೀರಿಗಿಳಿದ ಈಶ್ವರ್​ ಮಲ್ಪೆ.. ಲಾರಿ ಜಾಕ್​ ಪತ್ತೆ! ಅಲ್ಲೇ ಟ್ರಕ್​ ಇರೋದು ಪಕ್ಕನಾ?

ಮಾರಾಟ ಮಾಡಿದ್ದ ಜಮೀನಿನ 25 ಲಕ್ಷ ಹಣವನ್ನ ವೆಂಕಟ್ಟಪ್ಪ ಮಗಳಿಗೆ ಕೊಟ್ಟಿದ್ದನು. ಜೊತೆಗೆ ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು.

Advertisment

ನ್ಯಾಯ ಪಂಚಾಯತಿ ಮಾಡಿದ್ರು ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ತಂದೆಯನ್ನ ಮಗ ಸಿದ್ದಪ್ಪ ಕೊಲೆಗೈದಿದ್ದಾನೆ. ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಬಳಕೆದಾರರೇ.. ನವೆಂಬರ್​​ನಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ಲ!

ಮಚ್ಚೇಟಿಗೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವೆಂಕಟಪ್ಪ ಸಾವನ್ನಪ್ಪಿದ್ದಾನೆ. ಅತ್ತ ತಂದೆಯನ್ನ ಕೊಲೆಗೈದು ಮಗ ಸಿದ್ದಪ್ಪ ಪರಾರಿಯಾಗಿದ್ದಾನೆ.

Advertisment

ಇದನ್ನೂ ಓದಿ: ಸಮಂತಾಗೆ ಮತ್ತೆ ಲವ್ ಆಗಿದೆ.. ಸ್ಟಾರ್ ಡೈರೆಕ್ಟರ್​ ಜೊತೆ ಡೇಟಿಂಗ್..?​ 

ಸ್ಥಳಕ್ಕೆ ಎಎಸ್​ಪಿ ಮರಿಯಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಮಗ ಸಿದ್ದಪ್ಪನಿಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment