Advertisment

ಅಪ್ಪನ ಕೊನೆಯ ಆಸೆ ಈಡೇರಿಸಿದ ಹೆಣ್ಮಕ್ಕಳು.. ICU ನಲ್ಲಿ ನಡೆಯಿತು ಎರಡು ಮದುವೆ

author-image
Ganesh
Updated On
ಅಪ್ಪನ ಕೊನೆಯ ಆಸೆ ಈಡೇರಿಸಿದ ಹೆಣ್ಮಕ್ಕಳು.. ICU ನಲ್ಲಿ ನಡೆಯಿತು ಎರಡು ಮದುವೆ
Advertisment
  • ಜೂನ್ 22 ರಂದು ನಡೆಯಬೇಕಿದ್ದ ಮದುವೆ, ಆದರೆ
  • ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧ
  • ರೋಗಿಯ ಕೊನೆಯ ಆಸೆ ಈಡೇರಿಸಲು ವೈದ್ಯರ ಸಹಕಾರ ಹೇಗಿತ್ತು?

ತಂದೆಯ ಕೊನೆಯ ಆಸೆ ಈಡೇರಿಸಲು ಇಬ್ಬರು ಹೆಣ್ಮಕ್ಕಳು ಐಸಿಯು ವಾರ್ಡ್​ನಲ್ಲೇ ಮದುವೆಯಾದ ಪ್ರಸಂಗ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಲಕ್ನೋದ ಸೈಯದ್ ಮುಹಮ್ಮದ್ ಜುನೈದ್ ಇಕ್ಬಾಲ್ ಅವರ ಇಬ್ಬರು ಪುತ್ರಿಯರಿಗೆ ಜೂನ್ 22 ರಂದು ಮದುವೆ ನಿಶ್ಚಯವಾಗಿತ್ತು. ಈ ನಡುವೆ ಇಕ್ಬಾಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

Advertisment

ಇದನ್ನೂ ಓದಿ:ಒಂದು ತಿಂಗಳ ಹಿಂದೆ ಮದುವೆ.. ನೇಣು ಬಿಗಿದ ಸ್ಥಿತಿಯಲ್ಲಿ ಇನ್ಫೋಸಿಸ್ ಉದ್ಯೋಗಿಯ ಶವ ಪತ್ತೆ..

ಆರೋಗ್ಯ ಹದಗೆಟ್ಟರೂ ತಾವು ಮುಂಬೈನಲ್ಲಿ ನಡೆಯಬೇಕಿದ್ದ ಮಕ್ಕಳ ಮದುವೆಗೆ ಹೋಗಬೇಕು ಎಂದು ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ಇಕ್ಬಾಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹೀಗಾಗಿ ಮದುವೆಗೆ ತೆರಳಲು ವೈದ್ಯರು ಅನುಮತಿ ನೀಡಿರಲಿಲ್ಲ.

ಇದನ್ನೂ ಓದಿ:ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!

Advertisment

ತಮ್ಮ ಕೊನೆಯ ಆಸೆಯಂತೆ ಹೆಣ್ಣುಮಕ್ಕಳ ಮದುವೆ ನೋಡುವ ಹೆಬ್ಬಯಕೆಯನ್ನು ವೈದ್ಯರ ಬಳಿ ತಿಳಿಸಿದ್ದರು. ಅದಕ್ಕೆ ವೈದ್ಯರು ಆಸ್ಪತ್ರೆಯಲ್ಲೇ ಮದುವೆ ಆಗಲು ಒಪ್ಪಿಗೆ ನೀಡಿದರು. ಐಸಿಯುಗೆ ವಧು-ವರ ಹಾಗೂ ಮದುವೆ ನಡೆಸಿಕೊಡುವ ಮೌಲಾಗೆ ಅನುಮತಿ ನೀಡಲಾಗಿತ್ತು. ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ಇಕ್ಬಾಲ್ ಮುಂದೆಯೇ ಹಣ್ಮಕ್ಕಳು ಮುಸ್ಲಿಂ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಜುನೈದ್ ಇಕ್ಬಾಲ್ ತನ್ನ ಹೆಣ್ಣುಮಕ್ಕಳ ಮದುವೆಯನ್ನು ನೋಡಿದ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment