/newsfirstlive-kannada/media/post_attachments/wp-content/uploads/2024/08/Brazil-Firing.jpg)
ಸೌಂದರ್ಯ ಸ್ಪರ್ಧೆಯಲ್ಲಿ ಮಗಳು 4ನೇ ಸ್ಥಾನ ಪಡೆದಳು ಅಂತ ತಂದೆಯೊಬ್ಬ ತೀರ್ಪುಗಾರರ ಮೇಲೆ ಗುಂಡು ಹಾರಿಸಿದ ವಿಲಕ್ಷಣ ಘಟನೆ ನಡೆದಿದೆ. ಬ್ರೆಜಿಲ್‌ನ ಅಲ್ಟಮಿರಾದಲ್ಲಿ ನಡೆದ ಪ್ರಾದೇಶಿಕ ಸೌಂದರ್ಯದಲ್ಲಿ ಈ ಘಟನೆ ನಡೆದಿದೆ. ಸ್ಪರ್ಧೆಯಲ್ಲಿ ತನ್ನ ಮಗಳು ಕೇವಲ 4ನೇ ಸ್ಥಾನ ಪಡೆದಿದ್ದರಿಂದ ಸ್ಪರ್ಧಿಯೊಬ್ಬರ ತಂದೆ ತೀರ್ಪುಗಾರರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೇ ತಾನೇ ದುರಂತ ಅಂತ್ಯ ಕಂಡಿದ್ದಾನೆ.
ಇದನ್ನೂ ಓದಿ: ವಿನೇಶ್ ಪೋಗಟ್ ಬೆಳ್ಳಿ ಪದಕದ ಕನಸು ಜೀವಂತ.. ಹೊಸ ಭರವಸೆ; ಅಂತಿಮ ತೀರ್ಪು ಯಾವಾಗ?
ಜುಲೈ 28 ರಂದು ಅಲ್ಟಾಮಿರಾ ನಗರದಲ್ಲಿ ನಡೆದ ‘ಬೈಲೆ ದ ಎಸ್ಕೊಲ್ಹಾ ಡ ರೈನ್ಹಾ’ ಸೌಂದರ್ಯ ಸ್ಪರ್ಧೆಯ ನಂತರ ಈ ಘಟನೆ ನಡೆದಿದೆ. ಸ್ಪರ್ಧೆ ಮುಗಿದ ಸುಮಾರು ಒಂದೆರಡು ಗಂಟೆಗಳ ನಂತರ, ಸ್ಪರ್ಧಿಯೊಬ್ಬರ ತಂದೆ ಸೆಬಾಸ್ಟಿಯಾವೊ ಫ್ರಾನ್ಸಿಸ್ಕೊ ​​ಎಂಬಾತ ತಮ್ಮ ಮಗಳು ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ತೀರ್ಪುಗಾರರ ನಿರ್ಧಾರ ಮತ್ತು ಮಾನದಂಡಗಳನ್ನು ಪ್ರಶ್ನಿಸಿದ್ದಾನೆ. ಒಂದು ಹಂತದಲ್ಲಿ ಗನ್ ತೆಗೆದುಕೊಂಡು ತೀರ್ಪುಗಾರರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ.
/newsfirstlive-kannada/media/post_attachments/wp-content/uploads/2024/08/BRAZIL-FASHION.jpg)
ವರದಿ ಪ್ರಕಾರ ಫ್ರಾನ್ಸಿಸ್ಕೊ ​​ತನ್ನ ಮಗಳು ಸೌಂದರ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದಕ್ಕೆ ಅವಮಾನಿತನಾಗಿದ್ದ. ತೀರ್ಪುಗಾರರ ವಿವರಣೆಯಿಂದ ಅತೃಪ್ತನಾದ ಆತ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ: ಫಸ್ಟ್ ನೈಟ್‌ನಲ್ಲಿ ಮಚ್ಚಿನ ಏಟು.. ನವವಧು-ವರರು ರೂಮಿಗೆ ಹೋದ ಮೇಲೆ ಆಗಿದ್ದೇನು? ಸಾವಿನ ಸುತ್ತ ಅನುಮಾನ!
ಘಟನೆ ನಡೆದಾಗ ಸಭಾಂಗಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಸೌಂದರ್ಯ ಸ್ಪರ್ಧೆ ನಡೆದ ಸ್ಥಳದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಭದ್ರತೆ ಒದಗಿಸಿದ್ದರು. ಘಟನೆ ಅರಿತ ಪೊಲೀಸರು ಹೆಚ್ಚಿನ ಅನಾಹುತ ತಡೆಗೆ ಅವನ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡ ಫ್ರಾನ್ಸಿಸ್ಕೋ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಜನ ತಮ್ಮ ಮಕ್ಕಳ ಬಗ್ಗೆ ತುಂಬಾ ಪಾಸಿಟಿವ್ ಆಗಿರುತ್ತಾರೆ. ತಮ್ಮ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕೆಂದು ಬಯಸುತ್ತಾರೆ. ಅದು ಅಧ್ಯಯನ, ಕ್ರೀಡೆ ಅಥವಾ ಇನ್ನಾವುದೇ ಆಗಿರಲಿ. ಆದರೆ ಒಬ್ಬ ವ್ಯಕ್ತಿ ಇದರಲ್ಲಿ ಹುಚ್ಚುತನದ ಮಿತಿಯನ್ನು ಮೀರಿ ತನ್ನ ಜೀವಕ್ಕೆ ಆಪತ್ತು ತಂದುಕೊಂಡಿದ್ದಾನೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us