newsfirstkannada.com

ಹೃದಯಾಘಾತ.. ಕರ್ತವ್ಯದಲ್ಲಿದ್ದಾಗಲೇ FDA ಅಧಿಕಾರಿ ಕಚೇರಿಯ ಆವರಣದಲ್ಲೇ ಸಾವು

Share :

Published May 9, 2024 at 7:01pm

    ಕೆಲಸದ ಒತ್ತಡದಿಂದ ಹೃದಯಾಘಾತ ಆಗಿರುವ ಬಗ್ಗೆ ಅನುಮಾನ ವ್ಯಕ್ತ

    ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಹೇಮಚಂದ್ರ ನಾಯ್ಕ

    ಹೃದಯಾಘಾತ ಆಗುತ್ತಿದ್ದಂತೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರ: ಕರ್ತವ್ಯದಲ್ಲಿದ್ದ ಎಫ್​ಡಿಎ ಹೃದಯಾಘಾತದಿಂದ ಮೃತಪಟ್ಟಿರೋ ಘಟನೆ ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ನಡೆದಿದೆ. ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಹೇಮಚಂದ್ರ ನಾಯ್ಕ (40) ಮೃತ ದುರ್ದೈವಿ.

ಇದನ್ನೂ ಓದಿ: ಗ್ಯಾಂಗ್​ ವಾರ್​​ನಲ್ಲಿ ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಆಸ್ಪತ್ರೆಯಲ್ಲಿ ಕಣ್ಮುಚ್ಚಿದ.. ಬೆಚ್ಚಿಬಿದ್ದ ಶಿವಮೊಗ್ಗ..!

ಮೃತ ಹೇಮಚಂದ್ರ ನಾಯ್ಕ ಅವರು ಕಂದಾಯ ಇಲಾಖೆಯ ಎನ್​ಸಿಆರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಹಾಗೂ 4 ವರ್ಷದ ಮಗನನ್ನು ಅಗಲಿದ್ದಾರೆ. ಕರ್ತವ್ಯದಲ್ಲಿದ್ದಾಗಲೇ ಹೇಮಚಂದ್ರ ನಾಯ್ಕ ಅವರಿಗೆ ಹೃದಯಾಘಾತ ಆಗಿದೆ. ಕೂಡಲೇ ಅಲ್ಲೇ ನಿಂತುಕೊಂಡಿದ್ದ ಸಿಬ್ಬಂದಿ ಅವರನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಕೆಲಸದ ಒತ್ತಡದಿಂದ ಹೃದಯಾಘಾತ ಆಗಿರುವ ಬಗ್ಗೆ ಸಿಬ್ಬಂದಿಯಿಂದ ಅನುಮಾನ ವ್ಯಕ್ತವಾಗಿದೆ. ಹೇಮಚಂದ್ರ ನಾಯ್ಕ ನಿಧನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯಾಘಾತ.. ಕರ್ತವ್ಯದಲ್ಲಿದ್ದಾಗಲೇ FDA ಅಧಿಕಾರಿ ಕಚೇರಿಯ ಆವರಣದಲ್ಲೇ ಸಾವು

https://newsfirstlive.com/wp-content/uploads/2024/05/death46.jpg

Load More