Advertisment

ಮೊಟ್ಟ ಮೊದಲ ಬಾರಿಗೆ ಇಸ್ರೇಲ್​ ಮೇಲೆ ಆ ಅಸ್ತ್ರ ಬಳಕೆ; ಇರಾನ್ ಆರ್ಥಿಕ ಮೂಲವನ್ನೇ ಪುಡಿಗಟ್ಟಲು ನಿಂತಿತಾ ಯಹೂದಿ ಪಡೆ?

author-image
Gopal Kulkarni
Updated On
ಹಮಾಸ್​​​​​ ನಾಯಕರ ಹತ್ಯೆಗೆ ಪ್ರತಿಕಾರ; ಇಸ್ರೇಲ್​ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ​ ದಾಳಿ
Advertisment
  • ಮಧ್ಯಪ್ರಾಚ್ಯದಲ್ಲಿ ಕರಗದ ಯುದ್ಧ ಕವಿದ ಕಾರ್ಮೋಡದ ವಾತಾವರಣ
  • ಪ್ರತಿಕಾರದ ಜ್ವಾಲೆಯಲ್ಲಿಯೇ ಬೇಯುತ್ತಿರುವ ಇರಾನ್ ಮತ್ತು ಇಸ್ರೇಲ್
  • ಇರಾನ್​ನ ಆರ್ಥಿಕ ಮೂಲವನ್ನೇ ನಾಶ ಮಾಡಲಿದೆಯಾ ಇಸ್ರೇಲ್ ಪಡೆ?

ಮಧ್ಯಪ್ರಾಚ್ಯದಲ್ಲೀಗ ರಕ್ತಸಿಕ್ತ ಅಧ್ಯಾಯಗಳ ಪುಟಗಳೇ ತೆರೆದುಕೊಳ್ಳುತ್ತಿವೆ. ಪ್ರತಿಕಾರದ ಜ್ವಾಲೆಗಳು ಎಲ್ಲೆಡೆ ಹರಿದಾಡುತ್ತಿವೆ. ಹಮಾಸ್​ ಮುಖಂಡ ಇಸ್ಮಾಯಿಲ್ ಹನಿಯೆಹ್ ಹಾಗೂ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಹಾನನ್ನು ಮಟ್ಟಹಾಕಿದ ಇಸ್ರೇಲ್​ ವಿರುದ್ಧ ಈಗ ಇರಾನ್ ನೇರವಾಗಿ ಯುದ್ಧಕ್ಕೆ ಧುಮುಕಿದೆ. ಇಸ್ರೇಲ್​ ಮೇಲೆ ಮಿಸೈಲ್ ದಾಳಿ ಮಾಡುವ ಮೂಲಕ ಅದರ ನಿರ್ನಾಮದ ಶಪಥ ಹಾಕಿದ್ದರ ಮೊದಲ ಹೆಜ್ಜೆಯಿಟ್ಟಿದೆ. ಇರಾನ್ ಇದೇ ಮೊದಲ ಬಾರಿ ಇಸ್ರೇಲ್ ಮೇಲೆ ದಾಳಿ ನಡೆಸಲು ಹೈಪರ್ ಸಾನಿಕ್ ಫತಾ ಮಿಸೈಲ್ ಬಳಸಿದೆ.

Advertisment

publive-image

ಇದನ್ನೂ ಓದಿ:ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಹೆಚ್ಚಾದರೆ ಭಾರತಕ್ಕೆ ಎಫೆಕ್ಟ್​.. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏನಾಗುತ್ತೆ..?

ಹೈಪರ್ ಸಾನಿಕ್ ಫತಾ ಮಿಸೈಲ್ ಇಟ್ಟ ಗುರಿಯನ್ನು ಖಚಿತವಾಗಿ ಶೇಕಡಾ 90ರಷ್ಟು ಮುಟ್ಟಿ ಸರ್ವನಾಶದ ಮುನ್ನುಡಿಯನ್ನು ಬರೆದೇ ಬಿಡುವಂತಹ ಮಿಸೈಲ್. ಆದ್ರೆ ಇಸ್ರೇಲ್​ ಕೂಡ ಶತ್ರುರಾಷ್ಟ್ರಗಳ ಮಿಸೈಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳಬೇಕಾದ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಅದು ಅಳವಡಿಸಿಕೊಂಡಿರುವ ಐರನ್ ಡೋಮ್ ವ್ಯವಸ್ಥೆ ಶತ್ರು ರಾಷ್ಟ್ರಗಳ ಅನೇಕ ಮಿಸೈಲ್​ಗಳನ್ನು ಆಗಸದಲ್ಲಿಯೇ ಹೊಡೆದು ಚಿಂದಿ ಮಾಡಿಬಿಡುತ್ತದೆ.

ಇದನ್ನೂ ಓದಿ:ಕ್ಷಿಪಣಿ ದಾಳಿಯ ನಡುವೆ ವಿವಾಹ.. ಅಚ್ಚರಿ ಮೂಡಿಸಿದ ಇಸ್ರೇಲ್​ ಯಹೂದಿ ಜೋಡಿ ಮದ್ವೆ

Advertisment

publive-image

ಈ ಬಾರಿ ಇರಾನ್ ನಡೆಸಿದ ದಾಳಿಯಿಂದ ತನ್ನ ನಾಗರಿಕರನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಂಡಿದೆ ಇಸ್ರೇಲ್​ ಒಟ್ಟು 1800 ಸೈರನ್ ಮೊಳಗಿಸಿ ನಾಗರಿಕರನ್ನು ಸುರಕ್ಷಿತ ಜಾಗಕ್ಕೆ ತೆರಳಲು ಸೂಚಿಸಿದೆ. ಸೈರನ್​ ಕೇಳಿದ ಇಸ್ರೇಲ್ ನಾಗರಿಕರು ಬಾಂಬ್ ಶೆಲ್ಟರ್​, ಮಿಸೈಳ್ ಶೆಲ್ಟರ್ ಹಾಗೂ ಬಂಕರ್​ಗಳಲ್ಲಿ ಆಶ್ರಯ ಪಡೆದುಕೊಂಡು ಬಚಾವ್​ ಆಗಿದ್ದಾರೆ. ಈ ರೀತಿ ರಕ್ಷಣೆ ಪಡೆದವರ ಒಟ್ಟು ಸಂಖ್ಯೆ 1 ಕೋಟಿ ಎಂದು ಹೇಳಲಾಗುತ್ತಿದೆ. ಇರಾನ್​ನ ಭೀಕರ ಮಿಸೈಲ್ ದಾಳಿಯಿಂದ ಇಸ್ರೇಲ್​ನಲ್ಲಿ ಇಬ್ಬರು ಮಾತ್ರ ಗಾಯಗೊಂಡಿದ್ದಾರೆ. ಪಶ್ಚಿಮ ಬ್ಯಾಂಕ್​ನಲ್ಲಿ ಓರ್ವ, ಜೋರ್ಡಾನ್​ನಲ್ಲಿ ಕೆಲವರು ಪ್ರಾಣ ಬಿಟ್ಟಿದ್ದಾರೆ.

publive-image

ಇರಾನ್​ ನಾಗರಿಕರಿಗೂ ಶುರುವಾಯ್ತು ಆತಂಕ

ಇಸ್ರೇಲ್​ನನ್ನು ಒಂದು ಬಾರಿ ಕೆಣಕಿದರೆ. ಕೆಣಕಿದ ಪಡೆಯ ಅಂತಿಮ ವ್ಯಕ್ತಿಯನ್ನು ಮುಗಿಸುವವರೆಗೂ ಅದು ವಿರಮಿಸಿಲ್ಲ ವಿರಮಿಸಿ ಅದಕ್ಕೆ ಗೊತ್ತಿಲ್ಲ. ಇರಾನ್ ದಾಳಿಯಿಂದ ಹೆಡೆ ತುಳಿದ ಹಾವಿನಂತಾಗಿರುವ ಇಸ್ರೇಲ್ ಪ್ರತಿಕಾರಕ್ಕೆ ಸಜ್ಜಾಗುತ್ತಿದೆ.

ಈಗಾಗಲೇ ಇರಾನ್ ತಾನು ಮಾಡಿದ ತಪ್ಪಿಗೆ ದೊಡ್ಡ ಬೆಲೆ ತೆರಲಿದೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳಿಯಾಗಿದೆ. ಹೀಗಾಗಿ ಇರಾನ್​ನಲ್ಲಿಯೂ ಈಗ ತಳಮಳ ಶುರುವಾಗಿದೆ. ಇರಾನ್​ ಆರ್ಥಿಕ ಮೂಲವೆಂದರೇ ಅದು ತೈಲ ಉತ್ಪನ್​. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಇಸ್ರೇಲ್ ಇರಾನ್​ನ ಪ್ರಮುಖ ತೈಲ ಘಟಕಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದೆಯಂತೆ. ಒಂದು ವೇಳೆ ಅದು ಆಗಿದ್ದೇ ಆದಲ್ಲಿ ವಿಶ್ವದ ಪೆಟ್ರೋಲ್ ಡಿಸೈಲ್ ಪೂರೈಕೆಯ ಸರಪಳಿಯ ಕೊಂಡಿಯೇ ಕಳಚಿ ಬೀಳುವ ಆತಂಕವಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment