newsfirstkannada.com

×

VIDEO: ಹಾರ್ದಿಕ್​​, ಬೂಮ್ರಾ ಜಗಳ ಬಿಡಿಸಲು ಬಂದ ರೋಹಿತ್​​; ಅಸಲಿಗೆ ಆಗಿದ್ದೇನು?

Share :

Published March 25, 2024 at 3:30pm

Update March 25, 2024 at 3:33pm

    ಗುಜರಾತ್​ ಟೈಟನ್ಸ್​​ ವಿರುದ್ಧ ಮುಂಬೈ ಇಂಡಿಯನ್ಸ್​ಗೆ ಹೀನಾಯ ಸೋಲು

    ಕ್ಯಾಪ್ಟನ್​ ಹಾರ್ದಿಕ್​​ ಪಾಂಡ್ಯ ಮಾತಿಗೆ ಕ್ಯಾರೇ ಎನ್ನದ ಜಸ್​ಪ್ರಿತ್​​ ಬೂಮ್ರಾ

    ಹಾರ್ದಿಕ್​​, ಬೂಮ್ರಾ ಮಧ್ಯೆ ಜಗಳ ಬಿಡಿಸಲು ಬಂದ ರೋಹಿತ್ ಶರ್ಮಾ!​

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​​ ವಿರುದ್ಧ ಮುಂಬೈ ಇಂಡಿಯನ್ಸ್​​ ಹೀನಾಯ ಸೋಲು ಕಂಡಿದೆ. ಸಾಲು ಸಾಲು ವಿಕೆಟ್​ಗಳು ಕಳೆದುಕೊಂಡ ಕಾರಣ ಮುಂಬೈ ಇಂಡಿಯನ್ಸ್​ ಸೋಲಬೇಕಾಯ್ತು. ಅದರಲ್ಲೂ ಕ್ಯಾಪ್ಟನ್​​ ಹಾರ್ದಿಕ್​​​ ಪಾಂಡ್ಯ ತಮ್ಮ ಹಳೇ ಟೀಮ್​​ ವಿರುದ್ಧವೇ ಮಂಡಿಯೂರಿದ್ರು.

ಇನ್ನು, ಪಂದ್ಯದ ವೇಳೆ ಹಲವಾರು ಘಟನೆ ನಡೆದಿವೆ. ಈ ಪೈಕಿ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ಸ್ಟಾರ್​​ ವೇಗಿ ಬೂಮ್ರಾ ಡೋಂಟ್​ ಕೇರ್​ ಎಂದಿದ್ದು. ಹಾರ್ದಿಕ್​ ಏನೇ ಹೇಳಿದ್ರೂ ಬೂಮ್ರಾ ಕೇಳಲಿಲ್ಲ, ತನ್ನ ಬೌಲಿಂಗ್​​ ವೇಳೆ ಕೇರ್​ ಕೂಡ ಮಾಡಲಿಲ್ಲ. ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಹಾರ್ದಿಕ್​ ಮಾತಿಗೆ ಕ್ಯಾರೇ ಎನ್ನದ ಬೂಮ್ರಾ..!

ಜಸ್ಪ್ರೀತ್ ಬುಮ್ರಾ ಬೌಲಿಂಗ್​ ಮಾಡೋ ಮುನ್ನ ಫೀಲ್ಡಿಂಗ್‌ ಸೆಟ್‌ ಮಾಡಿದ್ರು. ಈ ಸಂದರ್ಭದಲ್ಲಿ ಬೂಮ್ರಾಗೆ ಹಾರ್ದಿಕ್​​​ ಸಲಹೆಗಳನ್ನು ನೀಡಿದ್ರೂ ನಿರ್ಲಕ್ಷ್ಯ ಮಾಡಿರೋ ಆರೋಪ ಕೇಳಿ ಬಂದಿದೆ. ಹಾರ್ದಿಕ್​​​ ಪಾಂಡ್ಯ ಫೀಲ್ಡಿಂಗ್​​ ಸೆಟ್​ ಮಾಡಲು ಬೂಮ್ರಾ ಬಿಡಲಿಲ್ಲ. ಇದು ಒಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದ್ದು, ಆಗ ರೋಹಿತ್ ಶರ್ಮಾ ಮಧ್ಯ ಪ್ರವೇಶಿಸಿದರು. ರೋಹಿತ್ ಪ್ರವೇಶ ಮಾಡಿದ ಕೂಡಲೇ ಹಾರ್ದಿಕ್​​​ ಪಾಂಡ್ಯ ಅಲ್ಲಿಂದ ಕಾಲ್ಕಿತ್ತರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಮುಂಬೈ ಫೀಲ್ಡಿಂಗ್​ ಮಾಡುವಾಗ ಮೈದಾನಕ್ಕೆ ನುಗ್ಗಿದ ನಾಯಿ, ಹಾರ್ದಿಕ್.. ಹಾರ್ದಿಕ್ ಅಂತ ಕೂಗಿದ ರೋಹಿತ್ ಫ್ಯಾನ್ಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಾರ್ದಿಕ್​​, ಬೂಮ್ರಾ ಜಗಳ ಬಿಡಿಸಲು ಬಂದ ರೋಹಿತ್​​; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/Hardik_Bumrah-Fight.jpg

Load More