newsfirstkannada.com

ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು.. ಕೊನೆಗೂ ನಿಟ್ಟುಸಿರು ಬಿಟ್ಟ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

Share :

Published April 7, 2024 at 8:09pm

Update April 7, 2024 at 8:57pm

    ಮಾಜಿ ನಾಯಕ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ

    ಸತತ ಮೂರು ಸೋಲು ಅನುಭವಿಸಿದ್ದ ಹಾರ್ದಿಕ್ ಪಾಂಡ್ಯಗೆ ನಿಟ್ಟುಸಿರು

    ಅಂತಿಮ ಓವರ್‌ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೀನಾಯ ಸೋಲು

ಸತತ ಮೂರು ಸೋಲು ಕಂಡು ಕಂಗಾಲಾಗಿ ಹೋಗಿದ್ದ ಮುಂಬೈ ಇಂಡಿಯನ್ಸ್‌ ಕೊನೆಗೂ ಗೆಲುವಿನ ದಡ ಸೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್‌ ಹಣಾಹಣಿಯಲ್ಲಿ ಮುಂಬೈ ತಂಡಕ್ಕೆ ರೋಚಕ ಗೆಲುವು ಸಿಕ್ಕಿದೆ.
ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 29 ರನ್‌ಗಳಿಂದ ಈ ಸೀಸನ್‌ನಲ್ಲಿ ಮೊದಲ ಪಂದ್ಯವನ್ನು ಗೆದ್ದು ಬೀಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಹೀನಾಯ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಆಟಗಾರರು ಉತ್ತಮ ಸ್ಕೋರ್ ಕಲೆ ಹಾಕಿದರು. ಸಂಘಟಿತ ಬ್ಯಾಟಿಂಗ್ ಪ್ರದರ್ಶನದಲ್ಲಿ 5 ವಿಕೆಟ್ ನಷ್ಟಕ್ಕೆ ಮುಂಬೈ ತಂಡ 234 ರನ್ ಗಳಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌ನಲ್ಲಿ ಎಡವಿದ್ದು 205 ರನ್ ಕಲೆ ಹಾಕುವಲ್ಲಿ ಸುಸ್ತಾಗಿ ಹೋಯಿತು. ಉತ್ತಮ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನದೊಂದಿಗೆ ಮುಂಬೈ ಇಂಡಿಯನ್ಸ್ 29 ರನ್‌ಗಳಿಂದ ಪಂದ್ಯ ಗೆಲುವು ಸಾಧಿಸಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಈ ಬಾರಿಯ ಐಪಿಎಲ್‌ ಆರಂಭಿಸಿದ ಮುಂಬೈ ಇಂಡಿಯನ್ಸ್ ಸತತ ಮೂರು ಸೋಲು ಅನುಭವಿಸಿತ್ತು. ಹಾರ್ದಿಕ್ ಪಾಂಡ್ಯ ಕ್ಯಾಪ್ಟೆನ್ಸಿಗೆ ಇದು ಅತಿದೊಡ್ಡ ಸವಾಲಾಗಿತ್ತು. ಇಂದು ಮುಂಬೈನಲ್ಲಿ ಕಣಕ್ಕಿಳಿದ ಪಾಂಡ್ಯ ಪಡೆಗೆ ಆಪತ್ಪಾಂಧವ ರೋಹಿತ್ ಶರ್ಮಾ ಅವರೇ ಆಸರೆಯಾಗಿದ್ದಾರೆ.

ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಇವತ್ತು ಒಳ್ಳೆಯ ಬ್ಯಾಟಿಂಗ್ ಆರಂಭ ಮಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. 27 ಬಾಲ್‌ಗಳನ್ನು ಎದುರಿಸಿದ ರೋಹಿತ್ ಶರ್ಮಾ ಅವರು 3 ಸಿಕ್ಸ್, 6 ಫೋರ್‌ಗಳ ಸಹಾಯದಿಂದ 49 ರನ್‌ಗಳಿಸಿದರು. ಅರ್ಧ ಶತಕ ಸನಿಹದಲ್ಲಿ ರೋಹಿತ್ ಶರ್ಮಾ ಅವರು ಔಟ್ ಆಗಿದ್ದು, ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು.

ರೋಹಿತ್ ಶರ್ಮಾ ಔಟ್ ಆದ ಬಳಿಕ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒಂದು ಸಿಕ್ಸ್, 3 ಬೌಂಡರಿ ಸಿಡಿಸುವ ಮೂಲಕ ಹೊಸ ಭರವಸೆ ಮೂಡಿಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಕೂಡ 39 ರನ್‌ಗಳಿಗೆ ಔಟ್ ಆಗುವ ಮೂಲಕ ಮತ್ತೆ ಅಭಿಮಾನಿಗಳ ಬೇಸರಕ್ಕೆ ಕಾರಣವಾದರು. ಕೊನೆಯದಾಗಿ ಟಿಮ್ ಡೇವಿಡ್‌ ಹಾಗೂ ರೊಮಾರಿಯೋ ಶೆಫರ್ಡ್ ಜೊತೆಯಾಟದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿರೋ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಳ್ಳೆ ಟಾರ್ಗೆಟ್‌ ನೀಡಿತ್ತು.

ಇದನ್ನೂ ಓದಿ: MI vs DC; ಫ್ಯಾನ್ಸ್​ ತೋರಿಸ್ತಿರೋ ಪ್ರೀತಿಯನ್ನ ಹಾಡಿ ಹೊಗಳಿದ ಹಿಟ್​ಮ್ಯಾನ್​.. ಇವತ್ತಾದ್ರು ಮುಂಬೈ ಗೆಲ್ಲುತ್ತಾ?

ಮುಂಬೈ ಇಂಡಿಯನ್ಸ್ 235 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಪೃಥ್ವಿ ಶಾ 66 ರನ್ ಸಿಡಿಸಿದ್ರೆ, ಟ್ರಿಸ್ಟಾನ್ ಸ್ಟಬ್ಸ್ 71 ರನ್ ಗಳಿಸಿ ನಾಟೌಟ್ ಆದರು. ಅಂತಿಮ ಓವರ್‌ನವರೆಗೂ ಗೆಲ್ಲುವ ಭರವಸೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ 19ನೇ ಓವರ್‌ನಲ್ಲಿ ಎಡವಿದ್ದು, 29 ರನ್‌ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಒಪ್ಪಿಕೊಂಡಿದೆ. ಮುಂಬೈ ಇಂಡಿಯನ್ಸ್‌ ಕೊನೆಯ ಓವರ್‌ನಲ್ಲಿ ಮ್ಯಾಜಿಕ್ ಮಾಡಿ ಡೆಲ್ಲಿ ವಿರುದ್ಧ ರೋಚಕ ವಿಜಯ ಸಾಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು.. ಕೊನೆಗೂ ನಿಟ್ಟುಸಿರು ಬಿಟ್ಟ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!

https://newsfirstlive.com/wp-content/uploads/2024/04/Mumbai-Indians-1.jpg

Load More