/newsfirstlive-kannada/media/post_attachments/wp-content/uploads/2024/10/DARSHAN-1.jpg)
ಬಳ್ಳಾರಿ ಜೈಲಿನಲ್ಲಿ ಆರೋಪಿ ದರ್ಶನ್‌ಗೆ ದಿನ ದೂಡೋದೇ ಕಷ್ಟವಾಗಿ ಬಿಟ್ಟಿದೆ. ಸ್ಕ್ಯಾನಿಂಗ್ ಬೇಡ ಅಂತಾ ಮೊಂಡುತನ ಮಾಡುತ್ತಿದ್ದ ದರ್ಶನ್ ನೋವು ತಾಳತಾರದೇ ನಿನ್ನೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದಾರೆ. ದರ್ಶನ್‌ಗೆ ಲಂಬರ್ ಸ್ಪೈನ್ ಸಮಸ್ಯೆ ಇರೋದು ಕನ್ಫರ್ಮ್ ಆಗಿದ್ದು, ವೈದ್ಯರು ಸರ್ಜರಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ದರ್ಶನ್‌ಗಾಗಿ ಬಂತು ಮೆಡಿಕಲ್ ಬೆಡ್, ದಿಂಬು; ಮೆಡಿಕಲ್ ರಿಪೋರ್ಟ್‌ನಲ್ಲಿ ಇರೋದೇನು?
ವಿಮ್ಸ್ ಆಸ್ಪತ್ರೆಯಲ್ಲಿ ದರ್ಶನ್‌ಗೆ ಎಂಆರ್‌ಐ ಸ್ಕ್ಯಾನಿಂಗ್
ಬೆನ್ನುನೋವಿಯಿಂದಾಗಿ ಸಾಕು ಸಾಕಾಗಿ ಹೋಗಿರೋ ದರ್ಶನ್ ಕೊನೆಗೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳೋದಕ್ಕೆ ಒಪ್ಪಿಗೆ ಕೊಟ್ಟಿದ್ದರು. ಅದರಂತೆ ನಿನ್ನೆ ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿ ವಿಮ್ಸ್‌ನಲ್ಲಿ ದರ್ಶನ್‌ಗೆ MRI ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಸ್ಕ್ಯಾನಿಂಗ್ ವೇಳೆ ಶಾಕಿಂಗ್ ವಿಷಯವೊಂದು ಗೊತ್ತಾಗಿದೆ. ದರ್ಶನ್‌ಗೆ L1 ಹಾಗೂ L5 ಭಾಗದಲ್ಲಿ ಲಂಬರ್ ಸ್ಪೈನ್ ಸಮಸ್ಯೆ ಇರೋದು ಪತ್ತೆಯಾಗಿದೆ. ಹೀಗಾಗಿ ನ್ಯೂರೋ ಸರ್ಜನ್ ವಿಶ್ವನಾಥ್ ಹಾಗೂ ಜಿಲ್ಲಾಸ್ಪತ್ರೆ ವೈದ್ಯರು ದರ್ಶನ್‌ಗೆ ಸರ್ಜರಿ ಅಗತ್ಯವಿದೆ ಎಂದು ಹೇಳಿದ್ದಾರೆ. ವೈದ್ಯರ ವರದಿಯನ್ನ ಆಧರಿಸಿ ಜೈಲಾಧಿಕಾರಿಗಳು ಪತ್ನಿ ವಿಜಯಲಕ್ಷ್ಮಿಯೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಆಸ್ಪತ್ರೆ ಮುಂದೆ ಕೈಹಿಡಿದು ಎಳೆದ ಅಭಿಮಾನಿ; ಅಲ್ಲೇ ಗರಂ ಆದ ದರ್ಶನ್
ನಿನ್ನೆ ಸ್ಕ್ಯಾನಿಂಗ್ ಮುಗಿಸಿ ಆಸ್ಪತ್ರೆಯಿಂದ ಹೊರ ಬರುವಾಗ ದರ್ಶನ್ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ರು. ದರ್ಶನ್ ಬರುವಾಗ ಅಭಿಮಾನಿಯೊಬ್ಬ ದರ್ಶನ್ ಕೈಹಿಡಿದು ಎಳೆದಿದ್ದಾನೆ. ಮೊದಲೇ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‌ಗೆ ಮತ್ತೆ ನೋವು ಜಾಸ್ತಿಯಾಗಿದೆಯಂತೆ. ಈ ಬಗ್ಗೆ ದರ್ಶನ್ ಜೈಲಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದು, ವೈದ್ಯರು ಕೆಲ ಮಾತ್ರೆಗಳನ್ನ ನೀಡಿದ್ದಾರೆ. ಘಟನೆ ಬಗ್ಗೆ ಇವತ್ತು ಜೈಲಾಧಿಕಾರಿ ಆರ್.ಲತಾ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ.
ಇನ್ನೊಂದು ವಿಷಯ ಅಂದರೆ, ಇಷ್ಟು ದಿನ ಇರದದ್ದು ದರ್ಶನ್ ಕೊರಳಲ್ಲಿ ತಾಯತವೊಂದು ಕಾಣಿಸಿಕೊಂಡಿದೆ. ಪತಿಗೆ ಆರೋಗ್ಯ ಸಮಸ್ಯೆ ಇರೋದರಿಂದ ಕಾಮಾಕ್ಷ ದೇಗುಲದಿಂದ ತಂದಿರೋ ತಾಯತವವನ್ನ ಪತ್ನಿ ವಿಜಯಲಕ್ಷ್ಮಿ ದರ್ಶನ್‌ಗೆ ಕಟ್ಟಿದ್ದಾರೆಂಬ ವಿಷಯ ತಿಳಿದುಬಂದಿದೆ. ನಿನ್ನೆ ಆಸ್ಪತ್ರೆಗೆ ಹೋಗುವಾಗಲೂ ಕೂಡ ದರ್ಶನ್ ಕೊರಳಲ್ಲಿ ಬಿಳಿ ದಾರದ ತಾಯತ ಇದ್ದಿದ್ದು ಕಂಡು ಬಂತು.
ಈಗಾಗಲೇ ದರ್ಶನ್ ಜಾಮೀನು ಅರ್ಜಿಯನ್ನ ಹೈಕೋರ್ಟ್ 28ಕ್ಕೆ ಮುಂದೂಡಿದೆ. ಹೀಗಾಗಿ ದರ್ಶನ್ ಹೆಲ್ತ್ ರಿಪೋರ್ಟ್ ಬಂದ ನಂತರ ಅನಾರೋಗ್ಯ ವಿಚಾರ ಇಡ್ಕೊಂಡು ದರ್ಶನ್‌ನನ್ನು ಬೆಂಗಳೂರಿಗೆ ಶಿಫ್ಟ್ ಮಾಡೋದಕ್ಕೆ ಕುಟುಂಬಸ್ಥರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us