/newsfirstlive-kannada/media/post_attachments/wp-content/uploads/2024/05/HARDIK-PANDYA-8-1.jpg)
ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಕೊನೆಗೂ ತಂಡವನ್ನು ಸೇರಿಕೊಂಡಿದ್ದಾರೆ. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಮೇ 25 ರಂದು ಅಮೆರಿಕ ಪ್ರವಾಸ ಬೆಳೆಸಿತ್ತು. ಆದರೆ ಪಾಂಡ್ಯ ಅವರು ಟೀಂ ಇಂಡಿಯಾ ಆಟಗಾರರ ಜೊತೆ ವಿಮಾನ ಪ್ರಯಾಣ ಮಾಡಿರಲಿಲ್ಲ.
ಪತ್ನಿ ನತಾಶಾ ಜೊತೆಗೆ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿ ಬೆನ್ನಲ್ಲೇ, ಪಾಂಡ್ಯ ಟೀ ಇಂಡಿಯಾ ಜೊತೆ ಪ್ರಯಾಣ ಮಾಡದಿರೋದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪಾಂಡ್ಯ ವಿಶ್ವಕಪ್ ಆಡಲ್ವಾ? ಕುಟುಂಬ ಕಲಹದಿಂದ ಬೇಸತ್ತು ಹೋದರಾ ಎಂಬ ಚರ್ಚೆ ಶುರುವಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳನ್ನು ಪಾಂಡ್ಯ ಸುಳ್ಳಾಗಿಸಿದ್ದು, ನಿನ್ನೆಯೇ ತಂಡವನ್ನು ಸೇರಿಕೊಂಡಿದ್ದಾರೆ. ಮಾತ್ರವಲ್ಲ, ವಾರ್ಮ್​​ ಆಫ್ ಮಾಡ್ತಿರುವ ಫೋಟೋವನ್ನು ಬೆಳ್ಳಂಬೆಳಗ್ಗೆ ಶೇರ್ ಮಾಡಿದ್ದಾರೆ. ಫೋಟೋಗೆ On national duty ಎಂದು ಬರೆದು ಭಾರತ ತ್ರಿವರ್ಣ ಧ್ವಜದ ಸಿಂಬಲ್ ಹಾಕಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮತ್ತೊಂದು ರಹಸ್ಯ ಫೋಟೋ ಶೇರ್ ಮಾಡಿದ ಪಾಂಡ್ಯ ಪತ್ನಿ.. ಟಾಂಟ್ ಕೊಟ್ರಾ..?
/newsfirstlive-kannada/media/post_attachments/wp-content/uploads/2024/05/HARDIK-PANDYA-7-1.jpg)
ಫೋಟೋದಲ್ಲಿ ಶಿವಂ ದುಬೆ, ಗಿಲ್, ಸೂರ್ಯಕುಮಾರ್ ಯಾದವ್ ಸೇರಿ ಹಲವು ಆಟಗಾರರು ಇದ್ದಾರೆ. ಇನ್ನು ಜೂನ್ 2 ರಿಂದ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ನಸ್ಸುನಲ್ಲಿರುವ ಕೌಂಟಿ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
On national duty 🇮🇳 pic.twitter.com/pDji7UkUSm
— hardik pandya (@hardikpandya7) May 29, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us