newsfirstkannada.com

ಒಬ್ಬರ ಎಂಟ್ರಿಯಿಂದ ಎಲ್ಲವೂ ಬದಲಾಯ್ತು.. KKRಗೆ ದುಬಾರಿ ಆಗಿದ್ದ ಸ್ಟಾರ್ಕ್​​ ಕಂಬ್ಯಾಕ್ ಮಾಡಿದ್ದು ಈಕೆ ಬಂದ್ಮೇಲೆ..!

Share :

Published May 29, 2024 at 6:46am

  ಐಪಿಎಲ್​ ಆರಂಭದಲ್ಲಿ ದುಬಾರಿಯಾಗಿದ್ದ ಸ್ಟಾರ್ಕ್​

  ವೈಫಲ್ಯ ಸುಳಿಯಿಂದ ಸ್ಟಾರ್ಕ್​ ಸಿಡಿದೆದ್ದಿದ್ದು ಹೇಗೆ..?

  ಸ್ಟಾರ್ಕ್​ ಕಮ್​ಬ್ಯಾಕ್​ ಹಿಂದಿದೆ ಇಂಟರೆಸ್ಟಿಂಗ್​ ಕಥೆ

ಐಪಿಎಲ್​ ಸೀಸನ್​ 17ರ ಫಸ್ಟ್​ ಹಾಫ್​ನಲ್ಲಿ ಫ್ಲಾಪ್​ ಸ್ಟಾರ್​ ಆಗಿದ್ದ ವೇಗಿ ಮಿಚೆಲ್​ ಸ್ಟಾರ್ಕ್​​, ಸೆಕೆಂಡ್​ ಹಾಫ್​ನಲ್ಲಿ ಸಿಡಿದೆದ್ರು. ಕೆಕೆಆರ್​ ಕಪ್​ ಗೆದ್ದಿರೋದ್ರ ಹಿಂದೆ ಸ್ಟಾರ್ಕ್​ ಶ್ರಮ ಅಪಾರ. ಅಷ್ಟಕ್ಕೂ ದುಬಾರಿ ಪರ್ಫಾಮೆನ್ಸ್​ ನೀಡ್ತಿದ್ದ ಕೋಟಿ ವೀರ ಇದ್ದಕ್ಕಿದ್ದಂತೆ ಫಾರ್ಮ್​ ಕಂಡುಕೊಂಡಿದ್ದು ಹೇಗೆ?

ಚೆಪಾಕ್​ ಅಂಗಳದಲ್ಲಿ ಹೈದ್ರಾಬಾದ್​​​ ಮಣಿಸಿ ಕೆಕೆಆರ್​ ಐಪಿಎಲ್​ ಚಾಂಪಿಯನ್ ಆಯ್ತು. ಈ ಕೆಕೆಆರ್​ ಸಕ್ಸಸ್​ನ ಕ್ರೆಡಿಟ್​​​, ಆಟಗಾರರು, ಸಪೋರ್ಟ್​ ಸ್ಟಾಫ್​ ಸೇರಿದಂತೆ ಇಡೀ ತಂಡಕ್ಕೆ ಸಲ್ಲಬೇಕು. ಇಡೀ ಟೀಮ್​​ ಸಾಲಿಡ್​ ಪರ್ಫಾಮೆನ್ಸ್ ನೀಡಿದ ಫಲವೇ ಇದೀಗ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಐಪಿಎಲ್​ ಆರಂಭಕ್ಕೂ ಮುನ್ನ ಕೆಕೆಆರ್​ ಚಾಂಪಿಯನ್​ ಆಗುತ್ತೆ ಅನ್ನೋ ನಿರೀಕ್ಷೆ ಬಹುತೇಕರಲ್ಲಿ ಇರಲಿಲ್ಲ. ಈ ಕೊಲ್ಕತ್ತಾ ತಂಡದ ಮೇಲೆ ವಿಶ್ವ ಕ್ರಿಕೆಟ್​ನ ಕಣ್ಣಿತ್ತು. ಅದಕ್ಕೆ ಕಾರಣ ವೇಗಿ ಮಿಚೆಲ್​ ಸ್ಟಾರ್ಕ್​.

ಇದನ್ನೂ ಓದಿ:IPL ಫೈನಲ್​​ನಲ್ಲಿ WPL ಘಟನೆಗಳು ಸೇಮ್ ಟು ಸೇಮ್​.. ನೀವು ನಂಬಲಾಗದ ಐದು ಅಚ್ಚರಿಗಳು..!

ಈ ಸೀಸನ್​​ಗೂ ಮುನ್ನ ನಡೆದ ಮೆಗಾ ಆಕ್ಷನ್​ನಲ್ಲಿ ಐಪಿಎಲ್​ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಮಿಚೆಲ್​​ ಸ್ಟಾರ್ಕ್​​ ಸೇಲಾಗಿದ್ರು. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​​ನ, ಶ್ರೀಮಂತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು. ಹರಾಜಿನ ಕಣದಲ್ಲಿ ಸ್ಟಾರ್ಕ್​ ಖರೀದಿಗೆ ಪ್ರಬಲ ಪೈಪೋಟಿ ನಡೆದಿತ್ತು. ಅಂತಿಮವಾಗಿ ಬರೋಬ್ಬರಿ 24.75 ಕೋಟಿ ನೀಡಿ ಕೆಕೆಆರ್​ ಖರೀದಿಸಿತ್ತು. ಯಾರೂ ಊಹಿಸಲಾಗದಷ್ಟು ದೊಡ್ಡ ಮೊತ್ತಕ್ಕೆ ಸೇಲಾದ ಮಿಚೆಲ್​​ ಸ್ಟಾರ್ಕ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ನಿರೀಕ್ಷೆ ಇಟ್ಟು ಕಾದ ಅಭಿಮಾನಿಗಳಿಗೆ ಆಗಿದ್ದು ನಿರಾಸೆ.

ಮೊದಲಾರ್ಧದಲ್ಲಿ ನಿರಾಸೆ ಮೂಡಿಸಿದ್ದ ಸ್ಟಾರ್ಕ್​
ಐಪಿಎಲ್​ ಸೀಸನ್​ನ ಮೊದಲ 2 ಪಂದ್ಯಗಳಲ್ಲೇ ಸ್ಟಾರ್ಕ್​​, 12.50ರ ದುಬಾರಿ ಏಕಾನಮಿಯಲ್ಲಿ ಬರೋಬ್ಬರಿ 100 ರನ್​ ​​ ಬಿಟ್ಟು ಕೊಟ್ಟರು. ಒಂದೆ ಒಂದು ವಿಕೆಟ್​ ಕಬಳಿಸುವಲ್ಲಿ ಫೇಲ್​ ಆದ್ರು. ಇಷ್ಟೇ ಅಲ್ಲ.. ಮೊದಲ 6 ಪಂದ್ಯಗಳಲ್ಲಿ 22 ಓವರ್​ ಬೌಲಿಂಗ್​ ಮಾಡಿದ ಸ್ಟಾರ್ಕ್​​​,​​ 10ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ರು. ಕೇವಲ 5 ವಿಕೆಟ್​ ಕಬಳಿಸಿದ್ರು ಅಷ್ಟೇ.

ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

IPL ಸೆಕೆಂಡ್​ ಹಾಫ್​ನಲ್ಲಿ ಸ್ಟಾರ್ಕ್​​ ಸುಂಟರಗಾಳಿ
ಮಿಚೆಲ್​ ಸ್ಟಾರ್ಕ್​​ IPL​ನ ಮೊದಲಾರ್ಧದಲ್ಲಿ ಕಂಪ್ಲೀಟ್​ ಫೇಲ್ಯೂರ್ ಕಂಡಿದ್ರು. ಸೆಕೆಂಡ್​ ಹಾಫ್​ನಲ್ಲಿ ಸಿಡಿದೆದ್ರು. ಅದ್ರಲ್ಲೂ, ವಾಂಖೆಡೆಯಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಎದುರಿನ ಪಂದ್ಯದಿಂದ ಸ್ಟಾರ್ಕ್,​ ಬೆಂಕಿ-ಬಿರುಗಾಳಿಯಂತಹ ಪರ್ಫಾಮೆನ್ಸ್​ ನೀಡಿದ್ರು. ಮುಂಬೈ ಎದುರು ಗೆಲುವಿಗೆ ಕೆಕೆಆರ್​ 12 ಎಸೆತಗಳಲ್ಲಿ 32 ರನ್​ ಡಿಫೆಂಡ್​ ಮಾಡಿಕೊಳ್ಳಬೇಕಿತ್ತು. ಈ ವೇಳೆ ದಾಳಿಗಿಳಿದ ಸ್ಟಾರ್ಕ್​​ ಮೊದಲ ಎಸೆತದಲ್ಲೇ ಸಿಕ್ಸರ್​ ಚಚ್ಚಿಸಿಕೊಂಡಿದ್ರು. ಆ ಬಳಿಕ ಕಮ್​ಬ್ಯಾಕ್​ ಮಾಡಿದ ಸ್ಟಾರ್ಕ್​, ಅದೇ ಓವರ್​​ನಲ್ಲಿ 3 ವಿಕೆಟ್​ ಕಬಳಿಸಿ ಕೆಕೆಆರ್​​ ಗೆಲುವಿಗೆ ಕಾರಣರಾದರು.

ಅಲಿಸಾ ಹೀಲಿ ಎಂಟ್ರಿಯಿಂದ ಬದಲಾಯ್ತು ಪರ್ಫಾಮೆನ್ಸ್
ಫಸ್ಟ್​ ಹಾಫ್​ನಲ್ಲಿ ಬ್ಯಾಟ್ಸ್​ಮನ್​ಗಳಿಂದ ಬೇಕಾಬಿಟ್ಟಿ ದಂಡಿಸಿಕೊಂಡಿದ್ದ ಮಿಚೆಲ್​ ಸ್ಟಾರ್ಕ್​, ಸೆಕೆಂಡ್​ ಹಾಫ್​​ನಲ್ಲಿ ಫಿನಿಕ್ಸ್​ನಂತೆ ಎದ್ದು ಬಂದಿದ್ದೇಗೆ ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ತಿರಬಹುದು. ಅದಕ್ಕೆ ಉತ್ತರವನ್ನು ಸ್ವತಃ ಮಿಚೆಲ್​ ಸ್ಟಾರ್ಕ್ ನೀಡಿದ್ದಾರೆ. ಆ ಒಬ್ಬ ವ್ಯಕ್ತಿಯ ಎಂಟ್ರಿ ಎಲ್ಲವನ್ನೂ​ ಬದಲಿಸಿತು ಎಂದಿದ್ದಾರೆ. ಅಂದ್ಹಾಗೆ ಆ ವ್ಯಕ್ತಿ ಬೇರಾರೂ ಅಲ್ಲ.. ಪತ್ನಿ ಅಲೀಸಾ ಹೀಲಿ..

https://x.com/i/status/1786706162437734627

ಫಸ್ಟ್​ ಹಾಫ್​ನಲ್ಲಿ ಹಿಗ್ಗಾಮುಗ್ಗಾ ದಂಡಿಸಿಕೊಂಡಿದ್ದ ಮಿಚೆಲ್​ ಸ್ಟಾರ್ಕ್​ ಮಾನಸಿಕವಾಗಿ ದಣಿದು ಹೋಗಿದ್ರು. ದುಬಾರಿ ಪ್ಲೇಯರ್ ನೀಡ್ತಿದ್ದ ಕಳಪೆ ಪ್ರದರ್ಶನವನ್ನ ಕ್ರಿಕೆಟ್​ ಲೋಕದಲ್ಲಿ ತೀವ್ರವಾಗಿ ಟೀಕಿಸಲಾಯ್ತು. ಈ ಟೀಕೆ, ನಿಂದನೆಗಳು, ಪರ್ಫಾಮ್​ ಮಾಡಲು ಅಗ್ರಿಲ್ಲ ಅನ್ನೋ ಕೊರಗು ಸ್ಟಾರ್ಕ್​ರನ್ನ ಮಾನಸಿಕವಾಗಿ ಕುಗ್ಗಿಸಿತ್ತು. ಈ ವೇಳೆ ಆಸ್ಟ್ರೇಲಿಯಾದಿಂದ ಬಂದ ಪತ್ನಿ ಅಲಿಸಾ ಹೀಲಿ, ಕೆಕೆಆರ್​​ ಕ್ಯಾಂಪ್​ ಸೇರಿಕೊಂಡ್ರು. ಕುಗ್ಗಿ ಹೋಗಿದ್ದ ಸ್ಟಾರ್ಕ್​ಗೆ ಮಾನಸಿಕ ಸ್ಥೈರ್ಯ ತುಂಬಿದ್ರು. ಈಕೆ ಆತ್ಮವಿಶ್ವಾಸದ ಮಾತುಗಳಿಂದ ವೇಗಿ ಪುಟಿದೆದ್ರು.

ಇದನ್ನೂ ಓದಿ:KKR ಫ್ರಾಂಚೈಸಿಗೆ ಟ್ರೋಫಿ ತಂದ್ಕೊಟ್ಟ ಅಯ್ಯರ್​.. ಇದರ ಹಿಂದಿದೆ ಒಂದು ಅಪಮಾನದ ಕಥೆ ಇದೆ..!

ಮುಂಬೈ ವಿರುದ್ಧ ಕಮ್​ಬ್ಯಾಕ್​ ಮಾಡಿದ್ರಲ್ಲ.. ಆ ಪಂದ್ಯಕ್ಕೂ ಮುನ್ನವೇ ನೋಡಿ ಪತ್ನಿ ಅಲಿಸಾ ಹೀಲಿ, ಮಿಚೆಲ್​ ಸ್ಟಾರ್ಕ್​ ಜೊತೆ ಮಾತನಾಡಿ ಧೈರ್ಯ ತುಂಬಿದ್ದು. ಆ ಬಳಿಕ ಸ್ಟಾರ್ಕ್​ ತಿರುಗಿ ನೋಡಿದ್ದೇ ಇಲ್ಲ. ಲೀಗ್​ ಸ್ಟೇಜ್​ನಲ್ಲಿ ಮಾತ್ರವಲ್ಲ.. ಕ್ವಾಲಿಫೈಯರ್​ 1, ಫೈನಲ್​ನಂತಹ ಹೈ ಪ್ರೆಷರ್​ ಗೇಮ್​ನಲ್ಲಿ ಕೆಕೆಆರ್​ ಕೈ ಹಿಡಿದಿದ್ದು ಇದೇ ಮಿಚೆಲ್​ ಸ್ಟಾರ್ಕ್​. ಕ್ವಾಲಿಫೈಯರ್​ ಗೇಮ್​ನಲ್ಲಿ 3 ವಿಕೆಟ್​ ಕಬಳಿಸಿ ಮಿಂಚಿದ ಸ್ಟಾರ್ಕ್​, ಫೈನಲ್​ನಲ್ಲಿ 3 ಓವರ್​ ಬೌಲಿಂಗ್​ ಮಾಡಿ ಕೇವಲ 14 ರನ್​ ನೀಡಿ 2 ವಿಕೆಟ್​​ ಉರುಳಿಸಿದ್ರು. ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸುವಲ್ಲಿ ನೆರವಾದ್ರು.

ಪ್ರತಿ ಯಶಸ್ವಿ ಪರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋ ಮಾತಿದ್ಯಲ್ಲ. ಆ ಮಾತು ಸ್ಟಾರ್ಕ್​ ಕಮ್​ಬ್ಯಾಕ್​ ವಿಚಾರದಲ್ಲಿ ನಿಜವಾಗಿದೆ. ಅಂದ್ಹಾಗೆ ಈ ಅಲಿಸಾ ಹೀಲಿ ಯಾರು ಗೊತ್ತಾ? ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್​ ತಂಡ, ಮಹಿಳಾ ಪ್ರೀಮಿಯರ್​​ ಲೀಗ್​ನ ಗುಜರಾತ್​ ಜೈಂಟ್ಸ್​ ತಂಡದ ನಾಯಕಿ. ಈ ಸ್ಟಾರ್ಕ್​​ಗೆ ಅಲಿಸಾ ಬೆಂಬಲ ನೀಡಿದ್ದಾರೆ. ಸ್ಟಾರ್ಕ್ ಕೂಡ ಅಷ್ಟೇ​​, ಪತ್ನಿ ಎಲ್ಲೇ ಪಂದ್ಯವನ್ನಾಡಿದ್ರೂ ಬಿಡುವು ಮಾಡಿಕೊಂಡು ಹೋಗಿ ಚಿಯರ್​ ಮಾಡ್ತಾರೆ. COUPLE GOALS ಅಂತಾರಲ್ಲ ಅದಕ್ಕೆ ಈ ಜೋಡಿ ಸಖತ್​ ಸೂಟ್​ ಆಗುತ್ತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಬ್ಬರ ಎಂಟ್ರಿಯಿಂದ ಎಲ್ಲವೂ ಬದಲಾಯ್ತು.. KKRಗೆ ದುಬಾರಿ ಆಗಿದ್ದ ಸ್ಟಾರ್ಕ್​​ ಕಂಬ್ಯಾಕ್ ಮಾಡಿದ್ದು ಈಕೆ ಬಂದ್ಮೇಲೆ..!

https://newsfirstlive.com/wp-content/uploads/2024/05/Starc.jpg

Load More