/newsfirstlive-kannada/media/post_attachments/wp-content/uploads/2024/04/Istanbul-Nightclub.jpg)
ಇಸ್ತಾಂಬುಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.. ನೈಟ್ ಕ್ಲಬ್‌ನಲ್ಲಿ ಹೊತ್ತಿದ ಬೆಂಕಿ ಸಾಲು ಸಾಲು ಜೀವಗಳನ್ನ ಬಲಿ ಪಡೆದಿದೆ.. ಅಗ್ನಿಯ ಕೆನ್ನಾಲಿಗೆಗೆ ಅದೆಷ್ಟೋ ಜೀವಗಳು ಸಜೀವ ದಹನವಾಗಿವೆ.. ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಗಾಯಗೊಂಡವರು ಆಸ್ಪತ್ರೆಯಲ್ಲಿ ನರಳುವಂತಾಗಿದೆ.
ಇಸ್ತಾಂಬುಲ್‌ನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ
ಟರ್ಕಿ ದೇಶದ ಅತಿದೊಡ್ಡ ನಗರ ಇಸ್ತಾಂಬುಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. 16 ಅಂತಸ್ತಿನ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಮೂರ್ನಾಲ್ಕು ಮಹಡಿಯನ್ನೇ ಸುಟ್ಟು ಭಸ್ಮ ಮಾಡಿದೆ.. ಇಸ್ತಾಂಬುಲ್‌ನ ಖ್ಯಾತ ಮಸ್ಕ್ಯೂರೇಡ್ ನೈಟ್‌ಕ್ಲಬ್‌ನಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು. ಕಟ್ಟಡದ ಅಂಡರ್‌ಗ್ರೌಂಡ್, ಮೊದಲ ಮತ್ತು ಮೂರನೇ ಮಹಡಿಯಲ್ಲಿ ರಿನೋವೇಶನ್ ಕಾರ್ಯವನ್ನ ಮಾಡಲಾಗುತ್ತಿತ್ತು. ಈ ವೇಳೆ ನಿನ್ನೆ ಮಧ್ಯಾಹ್ನ ಇಸ್ಬಾಂಬುಲ್ ಸಮಯದ ಪ್ರಕಾರ 12 ಗಂಟೆ 47 ನಿಮಿಷಕ್ಕೆ ಬೆಂಕಿ ಕಾಣಿಸಿಕೊಂಡಿದೆ.. ಹೀಗೆ ದಿಢೀರ್ ಕಾಣಿಸಿಕೊಂಡಿದ್ದ ಬೆಂಕಿ ಕಟ್ಟಡದ ಹಲವು ಮಹಡಿಗಳಿಗೂ ಆವರಿಸಿ ಬಿಟ್ಟಿದೆ. ಪರಿಣಾಮ ಇಡೀ ಕಟ್ಟಡವೇ ಹೊತ್ತಿ ಉರಿಯಲು ಆರಂಭಿಸಿದೆ.
ನೈಟ್‌ಕ್ಲಬ್‌ನಲ್ಲಿನ ಬೆಂಕಿ ದುರಂತದಲ್ಲಿ ಸುಮಾರು 29ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.. ಇನ್ನೂ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ರಕ್ಷಣಾ ತಂಡ ನೈಟ್‌ಕ್ಲಬ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಸಿಲುಕಿದ ಹಲವರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. 29 ಮಂದಿ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ ಎಂದು ಸಿಬ್ಬಂದಿ ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದ್ದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್..!
ಗಂಭೀರವಾಗಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಹಲವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಅಂತ ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೇ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನೈಟ್ ಕ್ಲಬ್ ಮ್ಯಾನೇಜರ್, ನವೀಕರಣ ಗುತ್ತಿಗೆ ಪಡೆದ ಮ್ಯಾನೇಜರ್, ಸೂಪರ್‌ವೈಸರ್ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಇಸ್ತಾಂಲ್‍ನ ಮೇಯರ್ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಒಟ್ಟಾರೆ, ಯಾರೋ ಮಾಡಿದ ಯಡವಟ್ಟಿನಿಂದಲೋ? ಅಥವಾ ನವೀಕರಣದ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳದಿದ್ದಕ್ಕೋ? ಅನ್ಯಾಯವಾಗಿ 29 ಮಂದಿ ಸಜೀವ ದಹನವಾಗಿರೋದು ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ