/newsfirstlive-kannada/media/post_attachments/wp-content/uploads/2024/03/TRAIN.jpg)
ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಕಂಟೇನರ್ ಬೋಗಿಯನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಒಂದು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲಾಗ್ತಿತ್ತು. ಮತ್ತೊಂದು ಬೋಗಿಯಲ್ಲಿ ತರಕಾರಿ, ಧಾನ್ಯಗಳನ್ನ ಸ್ಟೋರ್ ಮಾಡಿಕೊಂಡು ಇಡಲಾಗಿತ್ತು. ತರಕಾರಿ, ಧಾನ್ಯಗಳನ್ನು ತುಂಬಿದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ.
ಇದನ್ನೂ ಓದಿ: ತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್​; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು
/newsfirstlive-kannada/media/post_attachments/wp-content/uploads/2024/03/TRAIN-1.jpg)
ಯಶವಂತಪುರ ರೇಲ್ವೇ ನಿಲ್ದಾಣ ಪ್ಲಾಟ್ ಫಾರಂ 6ರಲ್ಲಿ ದುರ್ಘಟನೆ ನಡೆದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us