newsfirstkannada.com

ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ; ಸ್ಥಳೀಯರಲ್ಲಿ ಆತಂಕ

Share :

Published March 20, 2024 at 5:21pm

Update March 20, 2024 at 5:26pm

    ಹೊತ್ತಿ ಉರಿದ ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಗಿಡ, ಮರಗಳು

    ಅಕ್ಕ-ಪಕ್ಕದ ಕಾಫಿ ತೋಟಗಳಿಗೂ ಬೆಂಕಿ ವ್ಯಾಪಿಸುವ ಆತಂಕ

    ಸುಮಾರು 8 ಎಕರೆಗೂ ಹೆಚ್ಚು ಅರಣ್ಯ ಪ್ರದೇಶಕ್ಕೆ ತಗುಲಿದ ಬೆಂಕಿ

ಹಾಸನ: ಸರ್ಕಾರಕ್ಕೆ ಸೇರಿದ 8 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಸಕಲೇಶಪುರ ತಾಲೂಕಿನ ಬಳಿ ನಡೆದಿದೆ. ಅರಣ್ಯಕ್ಕೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇದನ್ನು ಓದಿ: ಮತ್ತೆ ಮಗ ಹುಟ್ಟಿದ ಖುಷಿಯಲ್ಲಿದ್ದ ಸಿಧು ಮೂಸೆವಾಲಾ ಪೋಷಕರಿಗೆ ಬಿಗ್‌ ಶಾಕ್‌; ಸರ್ಕಾರದಿಂದ ಕಿರುಕುಳ?

ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ 8 ಎಕೆರೆ ಗೋಮಾಳ ಇದೆ. ಈ ಗೋಮಾಳಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಅಲ್ಲಿನ ಹುಲ್ಲು, ಗಿಡ, ಮರಗಳೆಲ್ಲ ಬೆಂಕಿಯಿಂದ ಸುಟ್ಟು ಹೋಗುತ್ತಿವೆ. ಅಕ್ಕಪಕ್ಕದ ಕಾಫಿ ತೋಟಗಳಿಗೂ ಬೆಂಕಿ ವ್ಯಾಪಿಸುವ ಮುನ್ಸೂಚನೆ ಇದೆ. ಹೀಗಾಗಿ ಆತಂಕಗೊಂಡ ಸ್ಥಳೀಯರು ತಕ್ಷಣ ಮಾಹಿತಿಯನ್ನು ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ; ಸ್ಥಳೀಯರಲ್ಲಿ ಆತಂಕ

https://newsfirstlive.com/wp-content/uploads/2024/03/HASANA_FIRE.jpg

Load More