newsfirstkannada.com

ಮತ್ತೆ ಮಗ ಹುಟ್ಟಿದ ಖುಷಿಯಲ್ಲಿದ್ದ ಸಿಧು ಮೂಸೆವಾಲಾ ಪೋಷಕರಿಗೆ ಬಿಗ್‌ ಶಾಕ್‌; ಸರ್ಕಾರದಿಂದ ಕಿರುಕುಳ?

Share :

Published March 20, 2024 at 3:55pm

Update March 20, 2024 at 3:56pm

    ಇನ್​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡ ಸಿಧು ಮೂಸೆವಾಲಾ ತಂದೆ

    ಹತ್ಯೆಯಾಗಿದ್ದ ಮಗ ಸಿಧು ಮತ್ತೆ ಹುಟ್ಟಿ ಬಂದ ಅಂತ ಖುಷಿ ಆಗಿತ್ತು

    ಇಳಿ ವಯಸ್ಸಿನಲ್ಲೂ ಮಗು ಪಡೆದಿದ್ದಕ್ಕೆ ಪ್ರಶ್ನೆ ಮಾಡಿರುವ ಸರ್ಕಾರ

ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ, ತಾಯಿ ಇಳಿ ವಯಸ್ಸಿನಲ್ಲೂ IVF ತಂತ್ರಜ್ಞಾನದ ಮೂಲಕ ಮೊನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಾಹಿತಿಯನ್ನು ಹಂಚಿಕೊಂಡಿದ್ದ ತಂದೆ ಬಲ್ಕೌರ್ ಸಿಂಗ್ ಖುಷಿ ವ್ಯಕ್ತಪಡಿಸಿದ್ದರು. ಆದರೆ ಮಗು ಪಡೆದು ಸಂತಸದಲ್ಲಿದ್ದ ಪೋಷಕರಿಗೆ ಪಂಜಾಬ್ ಸರ್ಕಾರ ಕಿರುಕುಳ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ತಮ್ಮ ಅಧಿಕೃತ ಇನ್​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರುವ ಬಲ್ಕೌರ್ ಸಿಂಗ್ ಅವರು, ಪಂಜಾಬ್​ನ ಸಿಎಂ ಭಗವಂತ್ ಮಾನ್ ನೇತೃತ್ವದ ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ಮಾರ್ಚ್​ 17ರಂದು ಪತ್ನಿ ಚರಣ್ ಕೌರ್ ಮಗುವಿಗೆ ಜನ್ಮ ನೀಡಿದ್ದರು. ಆಗ ಹತ್ಯೆಯಾಗಿದ್ದ ಮಗ ಸಿಧು ಮೂಸೆವಾಲಾ ಮತ್ತೆ ಹುಟ್ಟಿ ಬಂದಿದ್ದಾನೆಂದು ಆನಂದದಲ್ಲಿದ್ದೆವು. ಆದರೆ ಪಂಜಾಬ್ ಸರ್ಕಾರವು ಬೆಳಗ್ಗೆಯಿಂದ ಮಗುವಿನ ಕುರಿತ ದಾಖಲೆಗಳನ್ನು ನೀಡುವಂತೆ ನಮ್ಮ ಫ್ಯಾಮಿಲಿಗೆ ಕಿರುಕುಳ ನೀಡುತ್ತಿದೆ. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರದ ಪ್ರಕಾರ IVF (In vitro Fertilisation) ವಿಧಾನದ ಮೂಲಕ ಮಗುವನ್ನು ಪಡೆಯಬೇಕಾದರೆ ವಯಸ್ಸಿನ ಮಿತಿ ಇರುತ್ತದೆ. ಈ ಬಗ್ಗೆ ವಿಸ್ತೃತವಾದ ಕಾಯ್ದೆ ಕೂಡ ಇದೆ. IVF ಮಗು ಪಡೆಯಲು ಬಯಸುವ ಮಹಿಳೆಗೆ 21-50 ವರ್ಷಗಳು ಹಾಗೂ ಪುರುಷಗೆ 21-55 ವರ್ಷದೊಳಗೆ ಇರಬೇಕು. ಆದರೆ ಮೊನ್ನೆ ವರದಿಯಾದ ಪ್ರಕಾರ ಸಿಧು ಮೂಸೆವಾಲಾರ ತಾಯಿಗೆ 58 ವರ್ಷದಲ್ಲಿ ಮಗು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಸಿಧು ಮೂಸೆವಾಲಾ ತಾಯಿಗೆ ಗಂಡು ಮಗು ಜನನ.. ಸಿಹಿ ಸುದ್ದಿ ಹಂಚಿಕೊಂಡ ತಂದೆ ಬಲ್ಕೌರ್ ಸಿಂಗ್

ಸದ್ಯ ಈ ಬಗ್ಗೆ ಬಲ್ಕೌರ್ ಸಿಂಗ್ ಅವರು ಎಲ್ಲ ಚಿಕಿತ್ಸೆಗಳು ಮುಗಿಯುವವರೆಗೆ ಅವಕಾಶ ನೀಡಬೇಕು. ಸಿಎಂ ಭಗವಂತ್ ಮಾನ್ ಬಳಿ ಈ ಬಗ್ಗೆ ವಿಶೇಷವಾಗಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಮುಗಿದ ಬಳಿಕ ನೀವು ಕರೆದ ಸ್ಥಳಕ್ಕೆ ಬಂದು ಎಲ್ಲದಕ್ಕೂ ಉತ್ತರಿಸುತ್ತೇನೆ. ನಾವು ಎಲ್ಲ ಕಾನೂನು ವಿಧಾನಗಳನ್ನು ಅನುಸರಿಸಿದ್ದು ಎಲ್ಲ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಮತ್ತೆ ಹುಟ್ಟಿ ಬಂದ ಮಗ.. ಸಿಧು ಮೂಸೆವಾಲಾ ಹೆತ್ತವರ ನೋಡಿದ್ರೆ ಎಂತಹವರ ಹೃದಯವೂ ತುಂಬಿ ಬರುತ್ತೆ!

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು 2022ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಫರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್​ ಪರ ನಿಂತು ಸೋತು ಹೋಗಿದ್ದರು. ಇದಾದ ಬಳಿಕ ಸಿಧು ಮೇಲೆ ಗುಂಡಿನ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಮಗ ಹುಟ್ಟಿದ ಖುಷಿಯಲ್ಲಿದ್ದ ಸಿಧು ಮೂಸೆವಾಲಾ ಪೋಷಕರಿಗೆ ಬಿಗ್‌ ಶಾಕ್‌; ಸರ್ಕಾರದಿಂದ ಕಿರುಕುಳ?

https://newsfirstlive.com/wp-content/uploads/2024/03/SIDHU_Moose_Wala.jpg

Load More