ಶಿವಕಾಶಿಯಿಂದ ಸಿಡಿಮದ್ದುಗಳು ಬಂದಿದ್ದವು
ಹಾವೇರಿ ಭೂಮಿಕಾ ಟ್ರೇಡರ್ಸ್ನಲ್ಲಿ ಅಗ್ನಿ ಅನಾಹುತ
ಬೆಂಕಿ ನಂದಿಸುವ ವೇಳೆಯೂ ಸಿಡಿದ ಪಟಾಕಿಗಳು
ಹಾವೇರಿ: ವೆಲ್ಡಿಂಗ್ ಮಾಡುವಾಗ ಬೃಹತ್ ಪಟಾಕಿಯ ಗೋದಾಮಿಗೆ ಬೆಂಕಿ ಬಿದ್ದು ಬರೋಬ್ಬರಿ 1 ಕೋಟಿ ಮೌಲ್ಯದ ಸಿಡಿಮದ್ದು ಭಸ್ಮವಾಗಿದೆ. ಕೆಲಸ ಮಾಡುತ್ತಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಇರುವ ಭೂಮಿಕಾ ಟ್ರೇಡರ್ಸ್ ಎಂಬ ಗೋದಾಮಿಗೆ ಕಿಡಿ ತಾಗಿ ಬೆಂಕಿ ತಗುಲಿದೆ. ಗೋದಾಮು ಸಿ.ಜಿ.ವಿರೇಶ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ಸಾಮಾಗ್ರಿಗಳು ಬಂದಿದ್ದವು.
ಇಂದು ಬಿಲ್ಡಿಂಗ್ನಲ್ಲಿ ವೆಲ್ಡಿಂಗ್ ಮಾಡುವಾಗ ದುರ್ಘಟನೆ ಸಂಭವಿಸಿದೆ. ಮೂರು ಅಂತಸ್ಥಿನ ಗೊಡೌನ್ಗೆ ಬೆಂಕಿ ಬಿದ್ದಿದೆ. ಮಾತ್ರವಲ್ಲ ಬೆಂಕಿ ನಂದಿಸುವ ವೇಳೆಯೂ ಸಿಡಿಮದ್ದು ಸಿಡಿದಿದೆ. ಇದರಿಂದ ಜೀವ ರಕ್ಷಿಸಿಕೊಳ್ಳಲು ಅಗ್ನಿಶಾಮಕ ಸಿಬ್ಬಂದಿ ಅಲ್ಲಿಂದ ದೂರ ಬಂದಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹಾನಗಲ್ ಹಾವೇರಿ ನ್ಯಾಷನಲ್ ರಸ್ತೆಯನ್ನು ಕೆಲ ಹೊತ್ತು ಬಂದ್ ಮಾಡಲಾಗಿತ್ತು.
ಹಾವೇರಿಯ ಆಲದಕಟ್ಟಿ ಗ್ರಾಮದ ಬಳಿಯ ಭೂಮಿಕಾ ಟ್ರೇಡರ್ಸ್ ಎಂಬ ಗೊಡೋನ್ಗೆ ಬೆಂಕಿ ಹೊತ್ತಿಕೊಂಡಿದೆ. ಬಿಲ್ಡಿಂಗ್ ನಲ್ಲಿ ವೆಲ್ಡಿಂಗ್ ಮಾಡುವಾಗ ಅವಘಡ ಸಂಭವಿಸಿದ್ದು, ಮೂರು ಅಂತಸ್ಥಿನ ಬಿಲ್ಡಿಂಗ್ ಬೆಂಕಿ ಕೆನ್ನಾಲಿಗೆಗೆ ಧಗ ಧಗ ಅಂತ ಹೊತ್ತಿ ಉರಿದಿದೆ..#Haveri #Fire #NewsFirstKannada pic.twitter.com/kAI7FXBQKC
— NewsFirst Kannada (@NewsFirstKan) August 29, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ