ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು.. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ 3 ಬಾರಿ ಫೈರಿಂಗ್; ಬರ್ಬರ ಹ*ತ್ಯೆ!

author-image
Gopal Kulkarni
Updated On
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು.. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ 3 ಬಾರಿ ಫೈರಿಂಗ್; ಬರ್ಬರ ಹ*ತ್ಯೆ!
Advertisment
  • ಭೀಮಾತೀರ ಕಲಬುರಗಿಯಲ್ಲಿ ಮತ್ತೆ ಕೇಳಿಬಂದ ಗುಂಡಿನ ಮೊರೆತ
  • ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥ್ ಮೇಲೆ 3 ಬಾರಿ ಫೈರಿಂಗ್​​
  • ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ನಡೀತು ಗುಂಡಿನ ದಾಳಿ

ಭೀಮಾತೀರ ಕಲಬುರಗಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದೆ. ಆಳಂದ ತಾಲೂಕಿನ ಪಡಸಾವಳಿ ಮಾಜಿ ಗ್ರಾಮದ ಪಂಚಾಯತಿ ಸದಸ್ಯ ವಿಶ್ವನಾಥ್ ಜಮಾದಾರರನ್ನ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಳಂದ ತಾಲೂಕಿನ ವಾಗ್ದಾರಿ ರಸ್ತೆಯ ಖಾನಾಫುರದ ಬಳಿ ಈ ಘಟನೆ ನಡೆದಿದ್ದು, ಪಡಸಾವಳಿ ಗ್ರಾಮದಿಂದ ಆಳಂದ ಪಟ್ಟಣಕ್ಕೆ ಬೈಕ್​ನಲ್ಲಿ ಬರುತ್ತಿದ್ದರು ವಿಶ್ವನಾಥ್ ಜಮಾದಾರ್. ಇದೇ ವೇಳೆ ಮತ್ತೊಂದು ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಪವಿತ್ರ ಗೌಡ ಗೇಮ್ ಪ್ಲಾನ್ ಚೇಂಜ್; ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಾಪಸ್.. ಕಾರಣ?

ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಫೈರಿಂಗ್​ ಮಾಡಿದ್ದಾರೆ. 50 ವರ್ಷದ ವಿಶ್ವನಾಥ್ ಗುಂಡೇಟು ತಿಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸ್ಥಳಕ್ಕೆ ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment