newsfirstkannada.com

×

ಕೇರಳದ ಭೂಕುಸಿತವನ್ನೇ ಮೀರಿಸುತ್ತೆ ಈ 5 ದುರಂತಗಳು; ಭಾರತ ಕಂಡ ಆ ದಾರುಣ ಘಟನೆಗಳು ಯಾವುವು?

Share :

Published July 30, 2024 at 7:21pm

    ವಯನಾಡ್​ ಮಾದರಿಯ 5 ಮಹಾಭೀಕರ ದುರಂತಗಳನ್ನು ಕಂಡಿದೆ ಭಾರತ

    ರಣಭೀಕರ ಭೂಕುಸಿತ ಈ ಹಿಂದೆ ತಂದ ಆಪತ್ತುಗಳು ಎಂಥವು ಗೊತ್ತಾ..?

    ದೇಶ ಕಂಡ ಅತ್ಯಂತ ದುರಂತ ಭೂಕುಸಿತವಾದದ್ದು ಯಾವ ರಾಜ್ಯದಲ್ಲಿ?

ಭೂಕುಸಿತ, ಪ್ರವಾಹದಂತ ವಿನಾಶಕಾರಿ ಪ್ರಕೃತಿ ವಿಕೋಪಗಳೆಲ್ಲವೂ ಕೂಡ ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮಗಳು. ಮನುಷ್ಯನ ತನ್ನ ಏಳ್ಗೆಗಾಗಿ ಭೂಮಿಯ ಮೇಲೆ ಮಾಡುತ್ತಿರುವ ವಿಪರೀತ ಶೋಷಣೆಯೇ ಸದ್ಯ ನಿಸರ್ಗ ಮಾತೆ ಮುನಿಸಿಗೆ ಕಾರಣವಾಗಿದೆ. ವಯನಾಡ್​ ಜಿಲ್ಲೆಯಲ್ಲಿ ಆಗಿರುವ ಭೀಕರ ಭೂಕುಸಿತ ಅದಕ್ಕೆ ಒಂದು ಸ್ಪಷ್ಟ ನಿದರ್ಶನ, ಭೂಕುಸಿತ ಅನ್ನೋದು ಬೌಗೋಳಿಕ ವಿದ್ಯಮಾನ, ಬೆಟ್ಟಗಳಲ್ಲಿ ದೊಡ್ಡ ದೊಡ್ಡ ಬಂಡೆಗಳ ಚದುರುವಿಕೆ, ಕಾಡುನಾಶ, ಮಣ್ಣಿನ ಆಳದಲ್ಲಿ ಹುದುಗಿರುವ ಅವಶೇಷಗಳು ಹೀಗೆ ನೂರಾರು ಕಾರಣಗಳಿಂದಾಗಿ ಇಂತಹ ಅನಾಹುತಕಾರಿ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಈಗ ವಯನಾಡ್​ನಲ್ಲಿ ಸಂಭವಿಸಿರುವ ಭಯಾನಕ ಭೂಕುಸಿತದಲ್ಲಿ ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. ಭಾರತ ಇಂತಹ ಭೀಕರ ಭೂಕುಸಿಗಳನ್ನು ಈಗಾಗಲೇ ಕಂಡಿದೆ. ಭೂಕುಸಿತದಿಂದಾಗಿ ನೂರಾರು ಜನರನ್ನು ಕಳೆದುಕೊಂಡಿದೆ. ಭಾರತ ಕಂಡ ಅಂತಹ 5 ಭೀಕರ ಭೂಕುಸಿತಗಳ ಬಗ್ಗೆ ವರದಿ ಇಲ್ಲಿದೆ.

ಕೇದಾರನಾಥ್ (ಉತ್ತರಾಖಂಡ್​)-2013: 2013ರಲ್ಲಿ ಭಾರತ ಹಿಂದೆಂದೂ ಕಾಣದ ಒಂದು ಭೀಕರ ಭೂಕುಸಿತವನ್ನು ಉತ್ತಾರಖಂಡ್​ನ ಕೇದಾರನಾಥದಲ್ಲಿ ಕಂಡಿತ್ತು. ಹಿಮಾಲಯದ ರಾಜ್ಯಗಳಲ್ಲಿ ಬಿದ್ದ ಭೀಕರ ಮಳೆ ಕೇದಾರನಾಥ್​ದ್ಲಲಿ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು, ಪ್ರವಾಹವೆಂಬುದ ಅಕ್ಷರಶಃ ಕೇದಾರನಾಥ್​ವನ್ನು ನುಂಗಿ ಹಾಕಿತ್ತು. ಈ ಒಂದು ಭೀಕರ ಪ್ರಕೃತಿ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಬರೋಬ್ಬರಿ 5700 ಜನ. ಸುಮಾರು 4700 ಗ್ರಾಮಗಳು ನೀರನಲ್ಲಿ ಕೊಚ್ಚಿಕೊಂಡು ಹೋಗಿ ಸಂಪೂರ್ಣ ನಿರ್ನಾಮವಾಗಿದ್ದವು. ಇಂಥಹದೊಂದು ಭಯಾನಕ, ವಿನಾಶಕಾರಿ ವಿಪತ್ತನ್ನು ಭಾರತ ತನ್ನ ಇತಿಹಾಸದಲ್ಲಿ ಎಂದಿಗೂ ಕೂಡ ಎದುರಿಸಿದ್ದಿಲ್ಲ.

ಇದನ್ನೂ ಓದಿ: ಕೇರಳ ಭೂಕುಸಿತಕ್ಕೆ ಕಾರಣವಾಗಿದ್ದೇ ಶುಂಠಿ ಬೆಳೆನಾ? ಈ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು?

ಡಾರ್ಜಲಿಂಗ್ ( ಪಶ್ಚಿಮ ಬಂಗಾಳ) 1968: 1968ರ ಅಕ್ಟೋಬರ್ 4 ರಂದು ಪಶ್ಚಿಮ ಬಂಗಾಳದ ಡಾರ್ಜಲಿಂಗ್​ನಲ್ಲಿ ಉಂಟಾದ ಭೀಕರ ಪ್ರವಾಹ ಸುಮಾರು 60 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನೆ ಕೊಚ್ಚಿಕೊಂಡು ಹೋಗಿತ್ತು. ಸುಮಾರು 91 ಪ್ರದೇಶಗಳಲ್ಲಿ ಭಯಂಕರ ಭೂಕುಸಿ ಸಂಭವಿಸಸಿತ್ತು. ಈ ಭೀಕರ ಭೂಕುಸಿತದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ರು. ಆಸ್ತಿ ಪಾಸ್ತಿ, ರಸ್ತೆ ಮಾರ್ಗಗಳು, ಚಹಾ ಬೆಳೆಯನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿತ್ತು.

ಗುವಹಾಟಿ (ಅಸ್ಸಾಂ) 1948: 1948ರಲ್ಲಿ ಅಸ್ಸಾಂನ ಗುಹವಾಟಿಯಲ್ಲಿ ಸುರಿದ ರಣಭೀಕರ ಮಳೆ ಗುವಹಾಟಿಯಲ್ಲಿ ಅತಿ ಭಯಂಕರ ಭೂಕುಸಿತಕ್ಕೆ ಕಾರಣವಾಗಿತ್ತು. ಅದರ ಪರಿಣಾಮವಾಗಿ ಇಡೀ ಒಂದು ಹಳ್ಳಿಯೇ ಜೀವಂತ ಸಮಾಧಿಯಾಗಿ ಹೋಗಿ ಸುಮಾರು 500 ಜನ ಜೀವಂತ ಸಮಾಧಿಯಾಗಿ ಹೋಗಿದ್ದರು

ಮಲ್ಪಾ ಗ್ರಾಮ (ಉತ್ತರಪ್ರದೇಶ) 1998: 1998ರಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆ ಉತ್ತರಪ್ರದೇಶದ ಮಲ್ಪಾ ಗ್ರಾಮದಲ್ಲೊಂದು ವಿನಾಶಕ ಭೂಕುಸಿತವನ್ನುಂಟು ಮಾಡಿತ್ತು . ನಿರಂತರ 7 ದಿನಗಳ ಕಾಲ ಸತತವಾಗಿ ಭೂಕುಸಿತದಿಂದಾಗಿ ಇಡೀ ಮಲ್ಪಾ ಗ್ರಾಮವೇ ಕೊಚ್ಚಿಕೊಂಡು ಹೋಗಿ ಒಂದೇ ಒಂದು ನರಪಿಳ್ಳೆ ಇಲ್ಲದಂತಾಗಿ ಮಾಡಿತ್ತು. ಇದು ಭಾರತ ಕಂಡ ಅತ್ಯಂತ ಮಾನವ ದುರಂತಗಳಲ್ಲಿ ಒಂದು ಎಂದೇ ಕರಾಳ ಗುರುತಾಗಿ ಉಳಿದುಕೊಂಡಿತು

ಇದನ್ನೂ ಓದಿ: 24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್​ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?

ಮಲಿನಾ ಗ್ರಾಮ (ಮಹಾರಾಷ್ಟ್ರ) 2014: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಮಲಿನಾ ಗ್ರಾಮ ಇಂದು ವಯನಾಡ್ ಕಂಡಂತಹುದೇ ಭೀಕರ ಭೂಕುಸಿತ ಕಂಡಿತ್ತು. ರಣಚಂಡಿಯಂತ ಮಳೆಯೇ ಈ ಗ್ರಾಮಕ್ಕೂ ಯಮಸ್ವರೂಪಿಯಾಗಿ ಕಾಡಿತ್ತು. ಮಳೆಗೆ ಉಂಟಾದ ಭೂಕುಸಿತದಿಂದಾಗಿ ಈ ಗ್ರಾಮದಲ್ಲಿ 151 ಜನರ ಬಲಿಯಾಗಿದ್ದರೆ. 100 ಜನರ ನಾಪತ್ತೆಯಾಗಿ ಹೋಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳದ ಭೂಕುಸಿತವನ್ನೇ ಮೀರಿಸುತ್ತೆ ಈ 5 ದುರಂತಗಳು; ಭಾರತ ಕಂಡ ಆ ದಾರುಣ ಘಟನೆಗಳು ಯಾವುವು?

https://newsfirstlive.com/wp-content/uploads/2024/07/NEWSFIRST-GROUND-REPORT-WAYANADU-1.jpg

Load More