389 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ.. ರಾತ್ರಿ 12 ಗಂಟೆಗೆ ಟೇಕಾಫ್ ಆದ ಬೋಯಿಂಗ್​ 777ನಲ್ಲಿ ದೊಡ್ಡ ಅವಘಡ

author-image
Bheemappa
Updated On
389 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ.. ರಾತ್ರಿ 12 ಗಂಟೆಗೆ ಟೇಕಾಫ್ ಆದ ಬೋಯಿಂಗ್​ 777ನಲ್ಲಿ ದೊಡ್ಡ ಅವಘಡ
Advertisment
  • ವಿಮಾನದಲ್ಲಿ PAN, PAN ಎಂದು ಕೂಗಿದ ಪ್ರಯಾಣಿಕರು, ಸಿಬ್ಬಂದಿ
  • ಬೋಯಿಂಗ್-777 ವಿಮಾನ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು ಗೊತ್ತಾ?
  • ರಾತ್ರಿ 12 ಗಂಟೆಗೆ ಟೇಕಾಫ್ ಆದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೆ ನಿಮಿಷಗಳಲ್ಲಿ 389 ಪ್ರಯಾಣಿಕರು ಹಾಗೂ 13 ಸಿಬ್ಬಂದಿಯಿದ್ದ ವಿಮಾನವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಆತಂಕ ಮೂಡಿಸಿತ್ತು. ಸಿಬ್ಬಂದಿಯೆಲ್ಲ PAN, PAN (ಸಾಧ್ಯವಾದ ಸಹಾಯದ ಅಗತ್ಯವಿದೆ) ಎಂದು ಕೂಗಿದ್ದರಿಂದ ಭಾರೀ ಅಪಘಾತವೊಂದು ತಪ್ಪಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ಕೆನಡಾದ ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 389 ಪ್ರಯಾಣಿಕರು ಹಾಗೂ 13 ಸಿಬ್ಬಂದಿಯೊಂದಿಗೆ ಬೋಯಿಂಗ್​ 777 ವಿಮಾನ ಟೇಕಾಫ್ ಆಗಿತ್ತು. ರಾತ್ರಿ 12 ಗಂಟೆ 17 ನಿಮಿಷಕ್ಕೆ ಟೇಕಾಫ್ ಆಗಿ ಫ್ರಾನ್ಸ್​ಗೆ ತೆರಳುತ್ತಿತ್ತು. ಆದರೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಹೊರ ಭಾಗದ ಬಲಗಡೆ ಶಾರ್ಟ್ ಸರ್ಕ್ಯೂಟ್ ರೀತಿಯಲ್ಲಿ​ ಬೆಂಕಿ ಚಿಮ್ಮಿದೆ. ಬಲಭಾಗದಲ್ಲಿದ್ದ ವಿಮಾನದ ಇಂಜೀನ್ ಸುಟ್ಟು ಹೋಗುತ್ತಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮಿನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ (ATC) ತಕ್ಷಣವೇ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದಿದೆ.

ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?


">June 7, 2024

ಇದರಿಂದ ಗಾಬರಿಗೊಂಡ ಒಳಗಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಪ್ಯಾನ್, ಪ್ಯಾನ್ ಎಂದು ಕೂಗಿಕೊಂಡಿದ್ದರಿಂದ ಪೈಲೆಟ್​ಗಳು ಜಾಗೃತರಾಗಿ ರಾತ್ರಿ 12 ಗಂಟೆ 39 ನಿಮಿಷಕ್ಕೆ ಮತ್ತೆ ಅದೇ ವಿಮಾನ ನಿಲ್ದಾಣದಲ್ಲೇ ವಾಪಸ್ ಲ್ಯಾಂಡ್ ಮಾಡಿದ್ದಾರೆ. ಸದ್ಯ 389 ಪ್ರಯಾಣಿಕರು ಮತ್ತು 13 ಸಿಬ್ಬಂದಿಯೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಲಾಗಿದೆ. ಇನ್ನು ಬೋಯಿಂಗ್ ಏರ್​ಕ್ರಾಫ್ಟ್​ ಇದೇ ರೀತಿ ಅವಘಡಗಳು ನಡೆಯುತ್ತಿರುವುದು ಪ್ರಯಾಣಿಕರನ್ನು ತೀವ್ರ ಆತಂಕಕ್ಕೆ ತಳ್ಳಿದಂತೆ ಆಗಿದೆ. ಪೈಲಟ್‌ಗಳು ಮತ್ತು ಅವರ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಅದ್ಭುತ ಕೆಲಸಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment