/newsfirstlive-kannada/media/post_attachments/wp-content/uploads/2024/09/Flipkart-1.jpg)
Flipkart Big Billion Days 2024: ಇಂದಿನಿಂದ ಜನಪ್ರಿಯ ಆನ್​​​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​​ ಬಿಗ್​ ಬಿಲಿಯನ್​ ಡೇಸ್​​ ಮಾರಾಟ ಘೋಷಿಸಿದೆ. ಹಲವು ಸ್ಮಾರ್ಟ್​ಫೋನ್​ಗಳ ಮೇಲೆ ರಿಯಾಯಿತಿ ಘೋಷಿಸಿದೆ.
ಫ್ಲಿಪ್​ಕಾರ್ಟ್​ ಗ್ರಾಹಕರಿಗೆಂದೇ ಆ್ಯಪಲ್​ ಕಂಪನಿಯ ಐಫೋನನ್ನು ಬೆಲೆ ಕಡಿತಗೊಳಿಸಿ ಮಾರಾಟ ಮಾಡಲು ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ಐಫೋನ್​ 15 ಮಾದರಿ ಕಡಿಮೆ ಬೆಲೆಗೆ ಸಿಗಲಿದೆ.
ಫ್ಲಿಪ್​ಕಾರ್ಟ್​ ತನ್ನ ಬಿಗ್​ ಬಿಲಿಯನ್​ ಡೇಸ್​ನಲ್ಲಿ ಐಫೋನ್​​ 15 ಪ್ರೊವನ್ನು 99,999 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದೆ. 1,09,900 ರೂಪಾಯಿ ಮುಖಬೆಲೆಯ ಐಫೋನ್​​​ 15 ಪ್ರೊ ಮೇಲೆ 9,901 ರೂಪಾಯಿಯ ಫ್ಲಾಟ್​​ ರಿಯಾಯಿತಿ ನೀಡುತ್ತಿದೆ.
/newsfirstlive-kannada/media/post_attachments/wp-content/uploads/2024/07/Iphone-15-1.jpg)
ಇದನ್ನೂ ಓದಿ: Big Billion Days Sale: ಗ್ರಾಹಕರಿಗೆ ಬಂಪರ್ ಆಫರ್.. ಹೊಸ ಬೈಕ್, ಫೋನ್‌ಗಳ ಬೆಲೆ ಎಷ್ಟು?
ಇದಲ್ಲದೆ ಖರೀದಿದಾರರು ಬ್ಯಾಂಕ್​​ ಕಾರ್ಡ್​ ಮೂಲಕ ಹೆಚ್ಚುವರಿ 5 ಸಾವಿರ ರೂಪಾಯಿಗಳ ವಿನಿಮಯ ಮತ್ತು ಬೋನಸ್​ ನೀಡುತ್ತಿದೆ. ಹೀಗಾಗಿ 89,999 ರೂಗೆ ಐಫೋನ್​ ಖರೀದಿಸಬಹುದಾಗಿದೆ.
ಐಫೋನ್​ ಮಾತ್ರವಲ್ಲದೆ, ವಿವಿಧ ಸ್ಮಾರ್ಟ್​ಫೋನ್​ಗಳ ಮೇಲಿನ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಅದರಲ್ಲೂ ಮೊಟೊರೊಲಾ, ಪೊಕೊ, ಶಿಯೋಮಿ ಮತ್ತು ಒನ್​ಪ್ಲಸ್​​ ಮೇಲಿನ ಬೆಲೆಯನ್ನು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.
ಐಫೋನ್​ 15 ಪ್ರೊ ಮ್ಯಾಕ್ಸ್​ ಕೂಡ ಕಡಿಮೆ ಬೆಲೆಗೆ ಸಿಗಲಿದೆ. 1,59,900 ಮುಖ ಬೆಲೆಯ ಐಫೋನ್​ 15 ಪ್ರೊ ಮ್ಯಾಕ್ಸ್​ 1,34,900 ರೂಪಾಯಿಗೆ ಖರೀದಿಸಬಹುದಾಗಿದೆ. ಜೊತೆಗೆ ಬ್ಯಾಂಕ್​ ಕಾರ್ಡ್​ಗಳ ಮೇಲೂ 5 ಸಾವಿರ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. 1,14,900 ರೂಪಾಯಿಗೆ ಖರೀದಿಸುವ ಅವಕಾಶ ತೆರೆದಿಟ್ಟಿದೆ. ಜೊತೆಗೆ ಎಕ್ಸ್​ಚೇಂಜ್​ ಬೋನಸ್​ ನೀಡಿದ್ದು 1,09,900 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us