/newsfirstlive-kannada/media/post_attachments/wp-content/uploads/2024/09/Flipkart-Big-Billion-Days.jpg)
ಬಿಗ್ ಬಿಲಿಯನ್ ಡೇ ಸಮಯದಲ್ಲಿ ಆನ್‌ಲೈನ್ ಶಾಪಿಂಗ್ ಈಗ ಭಾರತದಲ್ಲಿ ಟ್ರೆಂಡಿಂಗ್ ಆಗಿಬಿಟ್ಟಿದೆ. ಅಡುಗೆ ಮನೆಯ ವಸ್ತುವಿನಿಂದ ಹಿಡಿದು ಎಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ನಾವು ಇಂದು ಆರ್ಡರ್ ಮಾಡಬಹುದಾಗಿದೆ. ಆದರೆ ಈ ಬಾರಿಯ ಬಿಗ್ ಸೇಲ್ನಲ್ಲಿ ಗ್ರಾಹಕರಿಗೆ ಬಂಫರ್ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ: ಆ್ಯಂಡ್ರಾಯ್ಡ್ ಬಳಕೆದಾರರೇ ಈ ಆ್ಯಪ್ಗಳನ್ನು ಕೂಡಲೇ ಡಿಲೀಟ್ ಮಾಡಿ.. ಹ್ಯಾಕ್ ಆಗಬಹುದು ಹುಷಾರ್
ಇಂದು ರಾತ್ರಿ 12.00 ಗಂಟೆಯಿಂದಲೇ ದೇಶದ ಹಲವಾರು ಗ್ರಾಹಕರು ಕೈಯಲ್ಲಿ ಫೋನ್ ಹಿಡಿದುಕೊಂಡು ಕುತೂಹಲದಿಂದ ಕಾಯುತ್ತಿದ್ದಾರೆ. ಏಕೆಂದರೆ ವರ್ಷಕ್ಕೆ ಒಂದು ಬಾರಿ ನೀಡುವ ಬಂಪರ್ ಆಫರ್ಗಾಗಿ ಜನ ಫೋನ್, ಲಾಪ್ ಟಾಪ್, ಬೈಕ್, ಟಿವಿ ಹೀಗೆ ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಇ-ಕಾಮರ್ಸ್ ಸಂಸ್ಥೆಯೂ ಫ್ಲಿಪ್‌ಕಾರ್ಟ್‌ನ "ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2024" (Flipkart Big Billion Days Sale) ಈ ತಿಂಗಳ 26 ಮಧ್ಯರಾತ್ರಿ 12.00 ಗಂಟೆಯಿಂದ ಪ್ರಾರಂಭವಾಗಲಿದೆ.
ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಒಂದು ದಿನದ ಮುಂಚಿತವಾಗಿ ಮಾರಾಟಕ್ಕೆ ಪ್ರವೇಶ ಮಾಡಬಹುದು. ಪ್ಲಸ್ ಸದಸ್ಯರಿಗೆ ಡೀಲ್‌ಗಳು ಮತ್ತು ರಿಯಾಯಿತಿಗಳು ಸೆಪ್ಟೆಂಬರ್ 26, ಮಧ್ಯರಾತ್ರಿಯಿಂದ ಪ್ಲಸ್ ಸದಸ್ಯರಿಗೆ ಲಭ್ಯವಿರುತ್ತವೆ. ಪ್ಲಸ್ ಅಲ್ಲದ ಸದಸ್ಯರು ಸೆಪ್ಟೆಂಬರ್ 27ರಿಂದ ಡೀಲ್‌ಗಳು ಮತ್ತು ಕೊಡುಗೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
ಪ್ರತಿ ವರ್ಷದಂತೆ, ಫ್ಲಿಪ್‌ಕಾರ್ಟ್ ಎಲ್ಲಾ ವಿಭಾಗಗಳಲ್ಲಿ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಆದರೆ ಶೋ ಸ್ಟಾಪರ್ ಐಫೋನ್‌ಗಳಲ್ಲಿ ರಿಯಾಯಿತಿ ಕೊಡುಗೆಗಳನ್ನು ನೀಡಿರುತ್ತವೆ. ಈಗಾಗಲೇ ಐಫೋನ್‌ನ ಬೆಲೆಗೆಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಐಫೋನ್ 15 ಪ್ರೋ, ಐಫೋನ್ 15 ಪ್ರೊ ಮ್ಯಾಕ್ಸ್, ಸ್ಯಾಮ್‌ಸಂಗ್, Vivo, Oppo, OnePlus ಫೋನ್‌ಗಳ ಬೆಲೆ ಲೀಕ್ ಆಗಿದೆ. ವಿಶೇಷ ಎಂದರೆ ಐಫೋನ್ 15 ಪ್ರೊ ಅನ್ನು 89,999 ರೂ, ಐಫೋನ್ 15 ಪ್ರೊ ಮ್ಯಾಕ್ಸ್ 1,09,999 ರೂ, ನಥಿಂಗ್ ಫೋನ್ ಹಾಗೂ CMF ಉತ್ಪನ್ನಗಳ ಮೇಲೆ ಶೇಕಡಾ 50 ರಷ್ಟು ಡಿಸ್ಕೌಂಟ್ ಹಾಗೂ ಕನಿಷ್ಠ ಬೆಲೆ ಆಫರ್ ಘೋಷಿಸಿದೆ.
ಹೊಸ ಬೈಕ್‌ಗಳ ಭರ್ಜರಿ ಸೇಲ್!
ಬಿಗ್ ಬಿಲಿಯನ್ ಡೇನಲ್ಲಿ ಈ ಬಾರಿ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಟಾಪ್ ಬ್ರ್ಯಾಂಡ್‌ಗಳಾದ Hero, Bajaj, TVS, Ola, Chetak, Jawa, Yezdi, Vida, Ather ಕಂಪನಿಯ ದ್ವಿಚಕ್ರ ವಾಹನಗಳನ್ನು ಆಫರ್‌ಗಳ ಸಮೇತ ಸೇಲ್ ಮಾಡಲಾಗುತ್ತಿದೆ.
ಒಂದು ಉದಾಹರಣೆ ಅಂದ್ರೆ ಹೀರೋ ಸೂಪರ್ ಸ್ಪೆಲೆಂಡರ್ ಡಿಸ್ಕ್ ಬೈಕ್ ದರ ಮಾರುಕಟ್ಟೆಯಲ್ಲಿ 89,078 ರೂಪಾಯಿ ಇದೆ. ಆದರೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಯಲ್ಲಿ 84,198 ರೂಪಾಯಿಗೆ ಖರೀದಿ ಮಾಡಬಹುದು. ನಿಗದಿತ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಬುಕ್ ಮಾಡಿದ್ರೆ ಇನ್ನು ಶೇಕಡಾ 10 ರಷ್ಟು ರಿಯಾಯಿತಿ ದರ ನಿಮ್ಮದಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ