/newsfirstlive-kannada/media/post_attachments/wp-content/uploads/2024/09/Flipkart-2.jpg)
ಜನಪ್ರಿಯ ಆನ್​ಲೈನ್​ ಮಾರಾಟ ಮಳಿಗೆಯಾದ ಪ್ಲಿಪ್​ಕಾರ್ಟ್​, ಅಮೆಜಾನ್​ ಗ್ರಾಹಕರಿಗಾಗಿ ಭರ್ಜರಿ ಸೇಲ್​ ನಡೆಸುತ್ತಿದೆ. ಆಫರ್​ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಕಡಿಮೆಗೆ ಬೆಲೆಗೆ ಬ್ರ್ಯಾಂಡೆಡ್​​​ ವಸ್ತುಗಳನ್ನು ಖರೀದಿಸುವ ಅವಕಾಶ ತೆರೆದಿಟ್ಟಿದೆ. ಅದರಂತೆಯೇ ಫ್ಲಿಪ್​​ಕಾರ್ಟ್​ ಆ್ಯಪಲ್​ ವಾಚ್​ ಅನ್ನು ಕಡಿಮೆ ಬೆಲೆಗೆ ಸೇಲ್​ ಮಾಡುತ್ತಿದೆ.
ಆ್ಯಪಲ್​ ಐಫೋನ್​ 13ನನ್ನು ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಪ್ಲಿಪ್​ಕಾರ್ಟ್ ಕೈಗೆ ಧರಿಸುವ ಆ್ಯಪಲ್​ ವಾಚ್​ ಸಿರೀಸ್​​ 9 ಮೇಲೂ​​ ಭರ್ಜರಿ ಆಫರ್​ ಘೋಷಿಸಿದೆ. 27,999 ರೂಪಾಯಿಗೆ ಸೇಲ್​ ಮಾಡುತ್ತಿದೆ.
ಇದನ್ನೂ ಓದಿ: ಇಂದು ದರ್ಶನ್​​ ಸೇರಿ 5 ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ.. ಮಹತ್ವದ ಬದಲಾವಣೆ ಆಗುತ್ತಾ?
2nd ಜನರೇಶನ್​​ ಏರ್​ಪಾಡ್ಸ್​​ ಮತ್ತು ಏರ್​​ಪಾಡ್ಸ್​​ ಪ್ರೊ ಕ್ರಮವಾಗಿ 7,199 ಮತ್ತು 16,499 ರೂಪಾಯಿಗೆ ಮಾರಾಟ ಮಾಡುತ್ತಿದೆ. ಗ್ರಾಹಕರು ಒಂದು ಬಾರಿ ಆನ್​ಲೈನ್​ ಮೂಲಕ ಖರೀದಿಸಿದರೆ ಬರೀ 10 ನಿಮಿಷದಲ್ಲಿ ಆ ಉತ್ಪನ್ನ ಮನೆ ಬಾಗಿಲಿಗೆ ಬಂದು ಸೇರಲಿದೆ.
ಸದ್ಯ ಆನ್​ಲೈನ್​ ಮಾರಾಟ ಮಳಿಗೆಯಲ್ಲಿ ಹಬ್ಬಗಳ ಸುರಿಮಳೆಯೇ ಸುರಿಯುತ್ತಿದೆ. ಕಡಿಮೆ ಬೆಲೆಗೆ ಗ್ಯಾಜೆಟ್​ಗಳನ್ನ ಸೇಲ್​ ಮಾಡುತ್ತಿದ್ದಾರೆ. ಅದರಂತೆಯೇ ಬಹುತೇಕರು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us