/newsfirstlive-kannada/media/post_attachments/wp-content/uploads/2024/09/Ipad.jpg)
ಫ್ಲಿಪ್​ಕಾರ್ಟ್​​ ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್​​ ಬಿಲಿಯನ್​ ಡೇಸ್​ ಆಯೋಜಿಸಲು ಮುಂದಾಗಿದೆ. ಗ್ರಾಹಕರಿಗಾಗಿ ಭರ್ಜರಿ ಆಫರ್​ ತೆರೆದಿಡಲು ಸಜ್ಜಾಗಿದೆ. ಹಲವು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡುವುದಾಗಿ ಫ್ಲಿಪ್​ಕಾರ್ಟ್​ ರಿವೀಲ್ ಮಾಡಿದೆ.
ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​​​ ಡೇಸ್​​ ಸೇಲ್​​ನಲ್ಲಿ ಐಪ್ಯಾಡ್​​​​​ 9ನೇ ಜನರೇಷನ್​​ ಟಾಬ್ಲೆಟ್​​​​ ಮೇಲೆ ಭರ್ಜರಿ ಆಫರ್​ ಘೋಷಿಸಿದೆ. ಬೆಲೆ ಕಡಿತಗೊಳಿಸಿ ಮಾರಾಟ ಮಾಡಲು ಮುಂದಾಗಿದೆ. ಅಂದಹಾಗೆಯೇ ಗ್ರಾಹಕರಿಗಾಗಿ 19 ಸಾವಿರಕ್ಕೆ ಖರೀದಿಸಲು ಅವಕಾಶ ತೆರೆದಿಟ್ಟಿದೆ. ಆ್ಯಪಲ್​​ ಕಂಪನಿಯ ಟಾಬ್ಲೆಟ್​ ಖರೀದಿಸಲು ಬಯಸುವವರಿಗೆ ಈ ಆಫರ್​ ಬೆಸ್ಟ್​​ ಎಂದೆನಿಸಿಕೊಳ್ಳಲಿದೆ.
ಇದನ್ನೂ ಓದಿ: iPhone 16 ಖರೀದಿಸುವ ಪ್ಲಾನ್​ ಇದೆಯಾ? ಈ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ!
ಫ್ಲಿಪ್​ಕಾರ್ಟ್​​​​ ತನ್ನ ವೆಬ್​ಸೈಟ್​​ನಲ್ಲಿ ‘ಟೇಕ್​​ ಎ ಸ್ನೀಕ್​ ಪೀಕ್​​’ ಸೆಕ್ಷನ್​​ ಮೂಲಕ ಡೀಲ್​ ನಡೆಸುತ್ತಿದೆ. ಇದರಲ್ಲಿ ಐಪ್ಯಾಡ್​​​​​​​​ 9ನೇ ಜನರೇಶನ್​​ ಟಾಬ್ಲೆಟ್​ ಬೆಲೆ 19 ಸಾವಿರ ರೂಪಾಯಿ ಎಂದು ನಮೂದಿಸಿದೆ.
ಐಪ್ಯಾಡ್​​​ 9th ಜನರೇಶನ್​​ 10.2 ಇಂಚಿನ ಐಪಿಎಸ್​​ ಡಿಸ್​​ಪ್ಲೇ ಜೊತೆಗೆ 2160x1620 ಪಿಕ್ಸೆಲ್​​ ರೆಸನ್ಯೂಶನ್​​​ ಹೊಂದಿದೆ. ಇದರಲ್ಲಿ ಟ್ರೂ ಟೋನ್​ ಟೆಕ್ನಾಲಜಿ ಮತ್ತು 500 ನಿಟ್ಸ್​ ಪೀಕ್​​ ಬ್ರೇಟ್​​​ನೆಸ್​​ ನೀಡಿದೆ. A13 ಬಯೋನಿಕ್​ ಚಿಪ್​ಸೆಟ್​ ಹೊಂದಿದೆ.
ಇದರಲ್ಲದೆ, 12MP ಅಲ್ಟ್ರಾ ವೈಡ್​​​ ಫ್ರಂಟ್​​ ಕ್ಯಾಮೆರಾ ಜೊತೆಗೆ 122 ಡಿಗ್ರಿ ವೀವ್​, ಫೇಸ್​​ ಟೈಮ್​​ ಕಾಲ್​, 8MP ಕ್ಯಾಮೆರಾ ಸೇರಿ ಹಲವು ವೈಶಿಷ್ಟ್ಯಗಳಿವೆ.
ಫ್ಲಿಪ್​ಕಾರ್ಟ್​​ ಐಪ್ಯಾಡ್​​​ 9th ಜನರೇಶನ್​ಗೆ ಮಾತ್ರವಲ್ಲದೆ, ಮೊಟೊರೊಲಾ, ನಂಥಿಂಗ್​ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ಆಫರ್​ ನೀಡಿದೆ. ಬಿಗ್​ ಬಿಲಿಯನ್​ ಡೇಸ್​​ನಲ್ಲಿ ಕಡಿಮೆ ಬೆಲೆ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ