ಈ ಆಹಾರಗಳಿಂದ ನೀವು ದೂರ ಉಳಿಯಿರಿ; ಪಿತ್ತಕೋಶದಲ್ಲಿ ಕಲ್ಲು ಸೃಷ್ಟಿಯಾಗುವುದನ್ನು ತಡೆಯಿರಿ

author-image
Gopal Kulkarni
Updated On
ಈ ಆಹಾರಗಳಿಂದ ನೀವು ದೂರ ಉಳಿಯಿರಿ; ಪಿತ್ತಕೋಶದಲ್ಲಿ ಕಲ್ಲು ಸೃಷ್ಟಿಯಾಗುವುದನ್ನು ತಡೆಯಿರಿ
Advertisment
  • ಇಂತಹ ಆಹಾರ ಸೇವನೆಯಿಂದ ಪಿತ್ತಕೋಶದಲ್ಲಿ ಕಲ್ಲುಗಳಾಗುತ್ತವೆ
  • ಇಂತಹ ಆಹಾರಗಳಿಂದ ನೀವು ದೂರ ಉಳಿಯುವುದು ಒಳ್ಳೆಯದು
  • ಈ ಐದು ಆಹಾರಗಳಿಂದ ಆದಷ್ಟು ದೂರವಿರುವಿದ್ದರೆ ತುಂಬಾ ಲಾಭ

ಉತ್ತಮ ಆರೋಗ್ಯಕ್ಕಾಗಿ ಹಾಗೂ ಪಚನಕ್ರಿಯೆಗಾಗಿ ನಾವು ನಮ್ಮ ಪಿತ್ತಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಹದಲ್ಲಿರುವ ಈ ಚಿಕ್ಕ ಅಂಗ ಪಿತ್ತರಸವನ್ನು ಒಳಗೊಂಡಿದೆ. ಇಡೀ ಪಚನಕ್ರಿಯೆಯೇ ಈ ಒಂದು ಅಂಗದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಪಿತ್ತಕೋಶವನ್ನು ನಾವು ಹೆಚ್ಚು ಆರೋಗ್ಯಯುತವಾಗಿ ಇಟ್ಟುಕೊಳ್ಳಬೇಕು. ಕೆಲವು ಆಹಾರಗಳಿಂದ ದೂರ ಇರಬೇಕು ಇಲ್ಲವಾದರೆ ಪಿತ್ತಕೋಶದಲ್ಲಿ ಕಲ್ಲುಗಳು ಸೃಷಷ್ಟಿಯಾಗುವ ಅಪಾಯಗಳಿರುತ್ತವೆ. ನಾವು ಪಿತ್ತಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಲು ಹಾಗೂ ಅದರಲ್ಲಿ ಕಲ್ಲುಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಲು ಪ್ರಮುಖವಾಗಿ ಈ ಆಹಾರಗಳಿಂದ ನಾವು ದೂರ ಇರಬೇಕಾಗುತ್ತದೆ.

ಇದನ್ನೂ ಓದಿ:ಅ.19ಕ್ಕೆ ನ್ಯೂಸ್ ​ಫಸ್ಟ್​ನಿಂದ ‘ಪಾತ್​​​ ಟೂ ಪೇರೆಂಟ್​​ಹುಡ್’ ಈವೆಂಟ್​​; ಸಂತಾನಹೀನತೆಗೆ ಸಿಗಲಿದೆ ಪರಿಹಾರ!

publive-image

ಅತಿಹೆಚ್ಚು ಕೊಬ್ಬಿನಾಂಶ ಇರುವ ಪದಾರ್ಥಗಳು
ಅತಿಹೆಚ್ಚು ಕೊಬ್ಬಿನಾಂಶ ಹೊಂದಿರುವ ಹುರಿದ ಪದಾರ್ಥಗಳಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು, ಉದಾಹರಣೆಗೆ ಫಾಸ್ಟ್​ ಫುಡ್​ಗಳು, ಸ್ನಾಕ್ಸ್​ಗಳು, ಫ್ರೈಡ್​ ಮಾಂಸಾಹಾರ ಇವೆಲ್ಲಾ ಪಿತ್ತಕೋಶಕ್ಕೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹೀಗಾಗಿ ಈ ರೀತಿಯ ಅನಾರೋಗ್ಯಕರ ಆಹಾರಗಳ ಸೇವನೆಯನ್ನು ನಿಲ್ಲಿಸುವುದು ಒಳ್ಳೆಯದು. ಈ ಆಹಾರಗಳು ಕರಗಲು ಹೆಚ್ಚು ಸಮಯ ಬೇಡುವುದರಿಂದ ಪಿತ್ತಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೀಗಾಗಿ ಪಿತ್ತಕೋಶದಲ್ಲಿ ಕಲ್ಲುಗಳು ಸೃಷ್ಟಿಯಾಗುವ ಸಂಭವ ಹೆಚ್ಚು ಇರುತ್ತದೆ.

publive-image

ಅತಿಹೆಚ್ಚು ಸಕ್ಕರೆ ಅಂಶ ಹೊಂದಿರುವ ಪಾನೀಯಗಳು ಹಾಗೂ ಆಹಾರ
ಅಗತ್ಯಕ್ಕಿಂತ ಹೆಚ್ಚು ಸಕ್ಕರೆಯನ್ನು ನಾವು ಸೇವಿಸುವುದರಿಂದ ಪಿತ್ತಕೋಶ ಕಲ್ಲುಗಳು ಸೃಷ್ಟಿಯಾಗುವ ಅಪಾಯಗಳಿರುತ್ತವೆ. ಅತಿಯಾದ ಸಕ್ಕರೆ ಅಂಶ ಹೊಂದಿರುವ ಆಹಾರಗಳು ಪಿತ್ತಕೋಶದಲ್ಲಿರುವ ಪಿತ್ತರಸದ ಸಮತೋಲನವನ್ನು ಬಿಗಡಾಯಿಸುತ್ತವೆ, ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತವೆ. ಇವು ಪಿತ್ತಕೋಶದಲ್ಲಿ ಕಲ್ಲುಗಳು ಸೃಷ್ಟಿಯಾಗುವದಕ್ಕೆ ಪೂರಕವಾಗುತ್ತವೆ. ಹೀಗಾಗಿ ಅತಿಹೆಚ್ಚು ಸಕ್ಕರೆ ಅಂಶ ಹೊಂದಿರುವ ಪಾನೀಯ ಹಾಗೂ ಆಹಾರದಿಂದ ನೀವು ದೂರ ಉಳಿಯುವುದು ಒಳ್ಳೆಯದು.

ಇದನ್ನೂ ಓದಿ:ಅತಿಯಾದ ಸ್ಕ್ರೀನ್ ಟೈಮ್ ತುಂಬಾ ಡೇಂಜರ್; ನಿಮ್ಮ ಮಗುವಿನ ಮೇಲೆ ಎಷ್ಟು ಕೆಟ್ಟ ಪರಿಣಾಮ ಆಗ್ತದೆ?

ಪಾಸ್ತಾ, ಬ್ರೇಡ್​ಗಳಿಂದಲೂ ಇದೆ ಅಪಾಯ
ರಿಫೈನ್ಡ್ ಕಾರ್ಬ್ಸ್ ಅಂದ್ರೆ ಈ ಪಾಸ್ತಾ, ಬ್ರೇಡ್, ಪೇಸ್ಟ್ರೀಸ್​ಗಳು ಕೂಡ ಪಿತ್ತಕೋಶದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ನಿಮ್ಮ ಆಹಾರ ಕ್ರಮದಲ್ಲಿ ಇವುಗಳ ಸೇವನೆ ಹೆಚ್ಚು ಇದ್ದಲ್ಲಿ ನಿಮ್ಮ ಪಿತ್ತಕೋಶದಲ್ಲಿ ಸ್ಟೋನ್​ ಆಗುವುದು ಬಹುತೇಕ ಪಕ್ಕಾ.

publive-image

ಅತಿರೇಕ ಕೊಬ್ಬಿನಾಂಶ ಇರುವ ಡೈರಿ ಉತ್ಪನ್ನಗಳು
ಡೈರಿ ಪ್ರಾಡಕ್ಟ್​ಗಳ ಅತಿಯಾದ ಸೇವನೆಯೂ ಕೂಡ ನಿಮ್ಮ ಪಿತ್ತಕೋಶದಲ್ಲಿ ಕಲ್ಲುಗಳನ್ನು ಸೃಷ್ಟಿ ಮಾಡುತ್ತವೆ. ಅತಿಹೆಚ್ಚು ಫ್ಯಾಟ್ ಇರುವ ಹಾಲು, ಚೀಸ್, ಐಸ್​ಕ್ರೀಮ್ ಇವೆಲ್ಲಾ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತವೆ. ಇದು ನಿಮ್ಮ ಹೃದಯ ಸಂಬಂಧಿ ಕಾಯಿಲೆಗಳನ್ನು ಮಾತ್ರವಲ್ಲ, ಪಿತ್ತಕೋಶ ಸಂಬಂಧಿ ಕಾಯಿಲೆಗಳನ್ನು ವೃದ್ಧಿ ಮಾಡುತ್ತವೆ. ಹೀಗಾಗಿ ಫ್ಯಾಟ್ ಫ್ರೀ ಆಹಾರಗಳನ್ನು ಹೆಚ್ಚು ಸೇವಿಸುವುದು ತುಂಬಾ ಆರೋಗ್ಯಕರ

publive-image

ಅತಿಯಾದ ಮದ್ಯಪಾನವೂ ಅಪಾಯಕ್ಕೆ ದಾರಿ
ಮಿತವಾದ ಮದ್ಯಪಾನದಿಂದ ಆರೋಗ್ಯಕ್ಕೆ ಹೆಚ್ಚು ಅಪಾಯವಿಲ್ಲ. ಆದ್ರೆ ಅದು ಮಿತಿಮೀರಿದರೆ ನೂರೆಂಟು ತಾಪತ್ರಯಗಳನ್ನು ತಂದೊಡ್ಡುತ್ತದೆ. ಇದು ಪಿತ್ತಕೋಶದಲ್ಲಿ ಸ್ಟೋನ್​ ಸೃಷ್ಟಿಯಾಗಲು ಕೂಡ ಕಾರಣವಾಗುತ್ತದೆ. ಇದು ದೇಹದಲ್ಲಿ ಟ್ರಿಗ್ಲಿಸರೈಡ್​ನ್ನು ಸೃಷ್ಟಿಮಾಡುವುದರಿಂದ ಪಿತ್ತಕೋಶದಲ್ಲಿ ಕಲ್ಲುಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಈ ರೀತಿಯ ಆಹಾರದಿಂದ ದೂರ ಉಳಿಯುವುದು ನಿಮ್ಮ ಪಿತ್ತಕೋಶದ ಆರೋಗ್ಯಕ್ಕೆ ಅತ್ಯಂತ ಸಹಕಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment