newsfirstkannada.com

ಮೇಕ್ ಮೈ ಟ್ರಿಪ್ ಕಂಪನಿಗೆ ಮತ್ತೆ ಸಂಕಷ್ಟ; ₹1.45 ಲಕ್ಷ ದಂಡ ವಿಧಿಸಿದ ಕೋರ್ಟ್.. ಕಾರಣವೇನು?

Share :

Published February 12, 2024 at 6:00pm

    ದೂರುದಾರರು ಅನುಭವಿಸಿರುವ ತೊಂದರೆ ಪರಿಗಣಿಸಿ ಈ ನಿರ್ಣಯ

    ಮೂವರು ನೇತೃತ್ವದ ತ್ರೀ ಸದಸ್ಯ ಪೀಠದಿಂದ ದಂಡ ವಿಧಿಸಿ ಆದೇಶ

    ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಿಂದ ದಂಡ

ಬೆಂಗಳೂರು: ಕೆಲವು ದಿನಗಳ ಹಿಂದೆ ದೇಶದ ನಂಬರ್ ಒನ್ ಟ್ರಾವೆಲ್ ಬುಕ್ಕಿಂಗ್‌ ಕಂಪನಿ ಮೇಕ್ ಮೈ ಟ್ರಿಪ್ ಅನ್ನು ಅನ್ ಇನ್ಸ್​ಟಾಲ್ ಮಾಡುವ ಅಭಿಯಾನ ನಡೆದಿತ್ತು. ಮೇಕ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್ ಪ್ರವಾಸಕ್ಕೆ ಬುಕ್ಕಿಂಗ್ ಸ್ವೀಕರಿಸುವುದನ್ನು ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಬಹಳ ಮಂದಿ ಆಕ್ರೋಶ ಹೊರ ಹಾಕಿದ್ದರು. ಇದಾದ ಬೆನ್ನಲ್ಲೇ ಮೇಕ್ ಮೈ ಟ್ರಿಪ್ ಕಂಪನಿಗೆ ಈಗ ಗ್ರಾಹಕ ನ್ಯಾಯಾಲಯ ದಂಡ ವಿಧಿಸುವ ಮೂಲಕ ಶಾಕ್​ ಕೊಟ್ಟಿದೆ.

ಇದನ್ನು ಓದಿ: IND vs ENG; ಟೆಸ್ಟ್‌ ತಂಡಕ್ಕೆ ಎಂಟ್ರಿ ಕೊಟ್ಟ ಆಕಾಶ್​​ ದೀಪ್.. ಈ RCB ಪ್ಲೇಯರ್ ಕ್ರಿಕೆಟ್ ಎಂಟ್ರಿಯೇ ರೋಚಕ!

ಹೌದು, ಹೋಟೆಲ್ ಬುಕ್ ಮಾಡಿದ್ರೂ ರೂಂ ದೊರೆಯದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಹಕ ನ್ಯಾಯಾಲಯ ಸುಮಾರು ₹1.45 ಲಕ್ಷ ದಂಡ ವಿಧಿಸಿದೆ. ಮಯೂರ್ ಭರತ್ ಎಂಬುವವರು ಲಂಡನ್ ಹೋಗುವಾಗ ರೂಂ ಬುಕ್ ಮಾಡಿದ್ದರು. ಆಗ ಲಂಡನ್​ನಲ್ಲಿ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ ನಡೆಯುತ್ತಿತ್ತು. 4 ತಿಂಗಳ ಮುಂಚಿತವಾಗಿ ರೂಂ ಬುಕ್ ಮಾಡಿದ್ರು. ಆದರೆ ಕನ್ಫರ್ಮ್ ಮಾಡಿರಲಿಲ್ಲ. ಇದರಿಂದ ಮಯೂರ್ 6.58 ಲಕ್ಷ ಕಟ್ಟಿ ಬೇರೆ ಹೊಟೇಲ್​ನಲ್ಲಿ ತಗ್ಗಿದ್ದರು. ಮೇಕ್ ಮೈ ಟ್ರಿಪ್ ಕಂಪನಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲ ಆಗಿದೆ. ಇದರಿಂದ ಮಯೂರ್ ತೊಂದರೆ ಅನುಭವಿಸಿದ್ದು ಅನ್ಯಾಯವಾಗಿದೆ. ಹೀಗಾಗಿ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಿಂದ ಈ ದಂಡ ವಿಧಿಸಲಾಗಿದೆ.

ಮಯೂರ್ ಭರತ್ ಕನ್ಸೂಮರ್ ಎಂಬುವವರು ಕೇಸ್ ಹಾಕಿದ್ದರು. ದೂರುದಾರರು ಅನುಭವಿಸಿರುವ ತೊಂದರೆ ಪರಿಗಣಿಸಿ ನ್ಯಾಯಾಲಯ ದಂಡ ವಿಧಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೇ ದೂರುದಾರ ಬೇರೆ ಹೊಟೇಲ್​ನಲ್ಲಿ ಪಾವತಿಸಿದ ಹಣವನ್ನು ನೀಡಬೇಕು. ಹೆಚ್ಚುವರಿಯಾಗಿ ಪಾವತಿಸಿದ್ದ ₹4.34 ಲಕ್ಷ ಹಣವನ್ನು ನೀಡಲು ಸೂಚನೆ ನೀಡಿದೆ. ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಎಂ ಶೋಭಾ, ಸದಸ್ಯರಾದ ಕೆ ಅನಿತಾ ಶಿವಕುಮಾರ್ & ಸುಮಾ ಅನಿಲ್ ಕುಮಾರ್ ನೇತೃತ್ವದ ತ್ರಿಸದಸ್ಯ ಪೀಠದಿಂದ ಈ ದಂಡ ವಿಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕ್ ಮೈ ಟ್ರಿಪ್ ಕಂಪನಿಗೆ ಮತ್ತೆ ಸಂಕಷ್ಟ; ₹1.45 ಲಕ್ಷ ದಂಡ ವಿಧಿಸಿದ ಕೋರ್ಟ್.. ಕಾರಣವೇನು?

https://newsfirstlive.com/wp-content/uploads/2024/02/make-my-trip-1.jpg

Load More