newsfirstkannada.com

ಸಿಲಿಕಾನ್ ಸಿಟಿಯಲ್ಲಿ ಹೈಟೆಕ್​ ಸ್ಟೈಲ್​ನಲ್ಲಿ ಕಾಡು ಜಿಂಕೆ ಬೇಟೆ; ಮಾಂಸ ಸಮೇತ​ ಸಿಕ್ಕಿಬಿದ್ದ ಹಂತಕರು

Share :

Published March 31, 2024 at 6:32am

Update March 31, 2024 at 6:38am

  ಅಧಿಕಾರಿಗಳಿಂದ ಜಿಂಕೆ ಬೇಟೆಗೆ ಬಳಸಿದ್ದ ಗನ್​, ಮಚ್ಚು ಸೀಜ್​

  ಸಿನಿಮಾ ಸ್ಟೈಲ್​ನಲ್ಲಿ ಬೇಟೆಗಾರರನ್ನ ಬಗ್ಗುಬಡಿದ ಅರಣ್ಯಾಧಿಕಾರಿ

  ಅರಣ್ಯಾಧಿಕಾರಿಗಳನ್ನ ನೋಡಿ ಎದ್ದು ಬಿದ್ದು ಓಡಿದ ಕಿಲಾಡಿಗಳು

 ಬೆಂಗಳೂರು: ಕಥೆ ಪುರಾಣಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಜಿಂಕೆ ಬೇಟೆ ಬಗ್ಗೆ ನಾವು ನೋಡಿರುತ್ತೇವೆ. ಕೆಲ ಕಾಡು ಪ್ರದೇಶಗಳಲ್ಲಿ ಕದ್ದು ಮುಚ್ಚಿ ಬೇಟೆಯಾಡೋ ಪ್ರಕರಣ ನಡೀತಿರುತ್ತೆ. ಆದ್ರೀಗ ರಾಜಧಾನಿಯಲ್ಲಿ ಹೈಟೆಕ್​ ಜಿಂಕೆ ಬೇಟೆಯಾಡಲಾಗುತ್ತಿದೆ. ರುಚಿಯಾದ ಮಾಂಸ ತಿನ್ನೋ ಆಸೆಯಲ್ಲಿದ್ದವರು ಅರಣ್ಯಾಧಿಕಾರಿಗಳ ಎಂಟ್ರಿಗೆ ಎದ್ದು ಬಿದ್ದು ಓಡಿ ಹೋಗಿದ್ದಾರೆ.

ಇನ್ನು, ರಿಯಲ್​ ಆಗಿ ಜಿಂಕೆ ಭೇಟೆಯಾಡಿದವರನ್ನು ಬೆಂಗಳೂರು ಹೊರ ವಲಯ ಆನೇಕಲ್​ನಲ್ಲಿ ​ಬೇಟೆಗಾರರನ್ನ ಪೊಲೀಸರು ಸಿನಿಮೀಯ ಸ್ಟೈಲ್​ನಲ್ಲಿ ಅರೆಸ್ಟ್​​ ಮಾಡಿದ್ದಾರೆ. ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರವಾಸಿ ತಾಣ ಮುತ್ಯಾಲಮಡು ಬಳಿ ಜಿಂಕೆ ಬೇಟೆ ಆಡಿದ ಮೂವರನ್ನ ಅರೆಸ್ಟ್​​ ಮಾಡಿದ್ದಾರೆ. ಬೆಳಗಿನ ಜಾವ ಜಿಂಕೆ ಬೇಟೆ ಆಡಿದ್ದ ಆರು ಜನರ ತಂಡ, ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ರು. ಮಾಂಸ ಹಂಚಿಕೊಂಡು ಬೈಕಿನಲ್ಲಿ ಹೊರಟಿದ್ದಾಗ ಜಿಂಕೆ ಹಂತಕರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ನ್ಯೂಟ್ರಲಲ್ಲಿ ಇಟ್ಟು ಚಹಾ ಕುಡಿಯಲು ಹೋದ ಚಾಲಕ.. ತನ್ನಷ್ಟಕ್ಕೇ ಚಲಿಸಿ ಪಲ್ಟಿ ಹೊಡೆದ ಗ್ಯಾಸ್​​ ಟ್ಯಾಂಕರ್

ಮಾಂಸದ ಸಮೇತ ಖದೀಮರನ್ನ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಳಿಕ ಬೇಟೆ ಆಡಿದ ಸ್ಥಳಕ್ಕೆ ಕರೆದೊಯ್ದಿದ್ದು ಅಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೇಟೆ ಆಡಿದ ಸ್ಥಳದಲ್ಲಿ ಪೋರ್ಡ್ ಕಾರು ಹಾಗೂ ಮೂವರು ಬೇಟೆಗಾರರು ಅಲ್ಲೇ ಇದ್ರು. ಅಧಿಕಾರಿಗಳನ್ನ ನೋಡುತ್ತಿದ್ದಂತೆ ಕಾರು ಬಿಟ್ಟು ಮೂವರು ಪರಾರಿಯಾಗಿದ್ದು, ಸದ್ಯ ಬೈಕಿನಲ್ಲಿ ಸಿಕ್ಕಿಹಾಕಿಕೊಂಡ ಮೂವರನ್ನ ಅರೆಸ್ಟ್​ ಮಾಡಲಾಗಿದೆ.

ಈ ಕೇಸ್​ ಸಂಬಂಧ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು, ಆನೇಕಲ್ ತಾಲೂಕಿನ ಆದೂರು‌ ಮೂಲದ ರಾಮಕೃಷ್ಣ, ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.1 ಒಂದು ಕಾರು 3 ಬೈಕ್, ಗನ್, ಮಚ್ಚು ಹಾಗೂ‌ ಜಿಂಕೆ ಮಾಂಸವನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪರಾರಿಯಾದವರಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿಯಲ್ಲಿ ಹೈಟೆಕ್​ ಸ್ಟೈಲ್​ನಲ್ಲಿ ಕಾಡು ಜಿಂಕೆ ಬೇಟೆ; ಮಾಂಸ ಸಮೇತ​ ಸಿಕ್ಕಿಬಿದ್ದ ಹಂತಕರು

https://newsfirstlive.com/wp-content/uploads/2024/03/deer-2.jpg

Load More