ಸಿಎಂ ಚಂದ್ರಬಾಬು ನಾಯ್ಡು ಅವರ ಲಡ್ಡು ಪ್ರಸಾದದ ಆರೋಪ ಎಷ್ಟು ನಿಜ?
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬಿನ ಅಂಶ ಬಳಸಲು ಸಾಧ್ಯನಾ?
ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ ಜಗನ್
ತಿರುಮಲ ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಕೆಯ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ಫೋಟಕ ಹೇಳಿಕೆ ನೀಡಿದ್ದು, ತಿಮ್ಮಪ್ಪನ ಭಕ್ತರ ಮನಸಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಇದನ್ನೂ ಓದಿ: tirupati laddu: ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು.. ಹೊಸ ಬೇಡಿಕೆಯಿಟ್ಟ ಪವನ್ ಕಲ್ಯಾಣ್!
ಸಿಎಂ ಚಂದ್ರಬಾಬು ನಾಯ್ಡು ಅವರು ನೇರವಾಗಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲಿ ಇಂತಹದೊಂದು ಅನಾಹುತ ನಡೆದಿದೆ ಅನ್ನೋ ಗಂಭೀರ ಆರೋಪ ಮಾಡಿದ್ದರು. ಚಂದ್ರಬಾಬು ನಾಯ್ಡು ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸುದ್ದಿಗೋಷ್ಟಿ ನಡೆಸಿ ತಿರುಗೇಟು ನೀಡಿದ್ದಾರೆ.
ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ ಜಗನ್ ಅವರು ಎಲ್ಲವನ್ನೂ ತಿರುಚಿ ಮಾತನಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಅರಾಜಕತೆಯಾಗಿದೆ ಎಂದು ದೆಹಲಿಗೆ ಹೋಗಿ ಧರಣಿ ಮಾಡುತ್ತಿದ್ದಾಗ ಹೆಲಿಕಾಪ್ಟರ್‌ನಲ್ಲಿ ಮದನಪಲ್ಲಿಗೆ ಹೋಗಿದ್ದರು. ಮದನಪಲ್ಲಿಗೆ ಹೋಗಿ ಅಲ್ಲಿ ಫೈಲ್ ಸುಟ್ಟು ಹೋಗಿವೆ ಎಂದು ಹೇಳಿದ್ದರು. ಕಾಲೇಜು, ಸ್ಕೂಲ್‌ಗಳಲ್ಲಿ ಫುಡ್ ಪಾಯಿಷನ್ ಆಗುತ್ತಿದೆ. ಸ್ಕಿಲ್ ಡೆವಲಪ್‌ಮೆಂಟ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು. ವಿಜಯವಾಡದಲ್ಲಿ ಬೋಟ್ ಬಳಸಿ ಪ್ರಕಾಶಂ ಬ್ಯಾರೇಜ್‌ಗೆ ಡಿಕ್ಕಿ ಹೊಡೆಯುವಂತೆ ಮಾಡಿದ್ದರು. ಇದರ ಬಗ್ಗೆ ಪ್ರತಿಕ್ರಿಯೆ ಕೊಡದ ಚಂದ್ರಬಾಬು ನಾಯ್ಡು ಅವರು ಜನರ ಗಮನವನ್ನು ಬೇರೆಡೆ ಸೆಳೆಯಲು ಡೈವರ್ಸನ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಜಗನ್ ಹೇಳಿದ್ದಾರೆ.
ಇದನ್ನೂ ಓದಿ: ಲಡ್ಡು ಕೊಬ್ಬು ಲಡಾಯಿ; ಆರೋಪ ಬೆನ್ನಲ್ಲೇ ಮಹತ್ವದ ನಿರ್ಣಯ ತೆಗೆದುಕೊಂಡ ಜಗನ್ ಪಕ್ಷ
ದೇವರ ಹೆಸರಲ್ಲಿ ಕಟ್ಟು ಕಥೆ ಹೇಳುತ್ತಿದ್ದಾರೆ!
ಚಂದ್ರಬಾಬು ನಾಯ್ಡು ಅವರು ಅನಗತ್ಯವಾದ ಲಡ್ಡು ವಿವಾದ ಸೃಷ್ಟಿಸಿದ್ದಾರೆ. ಲಡ್ಡು ಬಗೆಗಿನ ಎಲ್ಲಾ ಆರೋಪಗಳು ಸುಳ್ಳು. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ. ಡೈವರ್ಸನ್ ಪಾಲಿಟಿಕ್ಸ್ ಬಗ್ಗೆ ಆಶ್ಚರ್ಯವಾಗುತ್ತಿದೆ. ಚಂದ್ರಬಾಬು ನಾಯ್ಡು ಜನರ ಗಮನವನ್ನು ಬೇರೆೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಗನ್ ಹೇಳಿದ್ದಾರೆ.
ತಿರುಮಲವನ್ನು ರಾಜಕೀಯ ಮೈಲೇಜ್ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕಾಗಿ ದುಷ್ಟಮಾರ್ಗ ಹಿಡಿದಿದ್ದಾರೆ. ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಎಂಬುದು ಕಟ್ಟು ಕಥೆ. ಇಂತಹ ಮಾರ್ಗ ಹಿಡಿಯುವುದು ಸರಿಯಲ್ಲ. ಜನರ ನಂಬಿಕೆಯ ವಿಷಯದಲ್ಲೂ ಪಾಲಿಟಿಕ್ಸ್ ಮಾಡುತ್ತಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಎಂದೂ ಕೂಡ ಪ್ರಾಣಿಯ ಕೊಬ್ಬು ಬಳಸಿಲ್ಲ. ಇದು ಮುಖ್ಯಮಂತ್ರಿಯಾಗಿ ಇರುವವರು ಆಡುವಂಥ ಮಾತೇ. ಅಸಂಬದ್ಧ ಮಾತು ಆಡುವುದು ಧರ್ಮವೇ? ಇದು ನಾಚಿಕೆಗೇಡು. ವೆಂಕಟೇಶ್ವರ ಸ್ವಾಮಿ ಭಕ್ತರು ಜಗತ್ತಿನಾದ್ಯಂತ ಇದ್ದಾರೆ. ಇದ್ಯಾವುದು ಸಣ್ಣ ಕಾರ್ಯಕ್ರಮವಲ್ಲ. ಲಡ್ಡು, ಅದರಲ್ಲಿ ಬಳಸುವ ವಸ್ತುಗಳನ್ನು ದಶಕದಿಂದ ಖರೀದಿಸಲಾಗುತ್ತಿದೆ. ಲಡ್ಡುಗೆ ಪೂರೈಸುವ ವಸ್ತುಗಳ ಟ್ಯಾಂಕರ್‌ಗಳನ್ನು NABL (ನ್ಯಾಷನಲ್ ಅಕ್ರೆಡಿಟೇಷನ್ ಆಫ್ ಬೋರ್ಡ್ ಆಫ್ ಲ್ಯಾಬ್) ನಿಂದ ಪರೀಕ್ಷಿಸಲಾಗುತ್ತೆ.
ಇದನ್ನೂ ಓದಿ:‘ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ -CM ನಾಯ್ಡು ಆರೋಪ ಬೆನ್ನಲ್ಲೇ, ಭಾರೀ ವಿವಾದ
NABL ಪರೀಕ್ಷೆ ಕಡ್ಡಾಯ ಪ್ರಕ್ರಿಯೆ. ಮೂರು ಟೆಸ್ಟ್ ಪಾಸ್ ಆದ ಬಳಿಕವಷ್ಟೇ ಪ್ರಸಾದದಲ್ಲಿ ಬಳಸಲಾಗುತ್ತೆ. ಲ್ಯಾಬ್ ಟೆಸ್ಟ್‌ನಲ್ಲಿ ತಿರಸ್ಕೃತವಾದದ್ದನ್ನು ಬಳಸುವ ಪ್ರಶ್ನೆಯೇ ಇಲ್ಲ. ಇಂತಹ ಅಸಂಬದ್ಧ ಮಾತನಾಡುವುದು ನ್ಯಾಯವೇ, ಧರ್ಮವೇ? ಚಂದ್ರಬಾಬು ನಾಯ್ಡು ದೇವರ ಹೆಸರಿನಲ್ಲಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಜಗನ್ ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ