newsfirstkannada.com

ಕಾಂಗ್ರೆಸ್ ‘ಚೊಂಬು’ ಜಾಹೀರಾತು ಕೊಟ್ಟಿದ್ದು ಯಾಕೆ ಗೊತ್ತಾ? ಬಿ.ಎಸ್‌ ಯಡಿಯೂರಪ್ಪ ಖಡಕ್ ಸವಾಲು

Share :

Published April 21, 2024 at 12:50pm

  ಕಾಂಗ್ರೆಸ್ ನಾಯಕರಿಗೆ ಖಡಕ್ ಸವಾಲು ಹಾಕಿದ ಬಿ.ಎಸ್‌ ಯಡಿಯೂರಪ್ಪ

  ಕರ್ನಾಟಕದಲ್ಲಿ ಕಾಂಗ್ರೆಸ್ ಒಂದೂ ಸೀಟು ಗೆಲ್ಲಲ್ಲ ಎಂದ ಬಿಎಸ್‌ವೈ

  ‘ನೇಹಾ ಹಿರೇಮಠ್ ತಂದೆಗೆ ಸಿದ್ದರಾಮಯ್ಯ ಸರ್ಕಾರ ನ್ಯಾಯ ಕೊಡಿಸುತ್ತಿಲ್ಲ’

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ಮಧ್ಯೆ ಚೊಂಬು ಪಾಲಿಟಿಕ್ಸ್ ತಾರಕಕ್ಕೇರಿದೆ. ಕಾಂಗ್ರೆಸ್ ಪಕ್ಷದ ಜಾಹೀರಾತು, ಪ್ರತಿಭಟನೆಗೆ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಯನ್ನೇ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಕಾರ್ಪೊರೇಟರ್‌ ಮಗಳು ನೇಹಾ ಹಿರೇಮಠ್ ಅವರ ಅಮಾನುಷ ಹತ್ಯೆ ಆಗಿದೆ. ತನ್ನದೇ ಪಕ್ಷದ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ಸರ್ಕಾರ ಮುಂದೆ ಬಂದಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಸಿದ್ದರಾಮಯ್ಯ ಸರ್ಕಾರ ಮತಾಂಧರ ಶಕ್ತಿ ಬೆಳೆಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ನೀಡುತ್ತಿರುವ ಚೊಂಬಿನ ಜಾಹೀರಾತು ಕುರಿತು ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹೋದ ಕಡೆಗೆ ಜನರು ಸೇರುತ್ತಾ ಇಲ್ಲ. ಅದಕ್ಕೆ ಜಾಹೀರಾತು ನೀಡ್ತಿದ್ದಾರೆ. ಪೊಳ್ಳು ಭರವಸೆ ನೀಡುವ ಜಾಹೀರಾತು ಯಾರು ನಂಬಲ್ಲ. ಜನ ಮೋದಿ, ಮೋದಿ ಅಂತಿದ್ದಾರೆ. ಅವರು ಹತಾಶರಾಗಿದ್ದಾರೆ. ಕರ್ನಾಟಕದಲ್ಲಿ ಅವರು ಒಂದೂ ಸೀಟು ಗೆಲ್ಲಲ್ಲ ಎಂದರು.

ಇದನ್ನೂ ಓದಿ: VIDEO: ಮೋದಿಗೆ ಚೊಂಬು ತೋರಿಸಲು ಮುಂದಾದ ನಲಪಾಡ್​​.. ಎತ್ತಾಕಂಡು ಹೋದ ಪೊಲೀಸ್ರು!

ಇನ್ನು, ತೆರಿಗೆ ಹಣ ನೀಡದ ಆರೋಪಕ್ಕೆ ನಾನಲ್ಲ ಸ್ವತಃ ಪ್ರಧಾನಿ ಅವರೇ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂದು ನಾಳೆ ಹೇಳಲಿದ್ದಾರೆ. ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಕೂಡ ಈಗಾಗಲೇ ಹೇಳಿದ್ದಾರೆ. ಈ ರಾಜಕೀಯ ದೊಂಬರಾಟಕ್ಕೆ, ಕವಡೆ ಕಾಸಿನ ಕಿಮ್ಮತ್ತಿಲ್ಲ. ವಾಸ್ತವಿಕ ಸ್ಥಿತಿ ಬೇರೆ ಇದೆ. ಕಾಂಗ್ರೆಸ್ ನಾಯಕರ ಸುಳ್ಳು ಪ್ರಚಾರ, ದೊಂಬರಾಟಕ್ಕೆ ಮನ್ನಣೆ ಇಲ್ಲ. ಕಾಂಗ್ರೆಸ್ ನಾಯಕರಿಗೆ ಒಂದು ಸವಾಲು ಹಾಕ್ತೇನೆ. ಅವರು ಗೆಲ್ಲುವ ಐದು ಕ್ಷೇತ್ರಗಳ ಹೆಸರು ಹೇಳಲಿ‌ ನೋಡೋಣ ಎಂದು ಬಿಎಸ್‌ವೈ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ ‘ಚೊಂಬು’ ಜಾಹೀರಾತು ಕೊಟ್ಟಿದ್ದು ಯಾಕೆ ಗೊತ್ತಾ? ಬಿ.ಎಸ್‌ ಯಡಿಯೂರಪ್ಪ ಖಡಕ್ ಸವಾಲು

https://newsfirstlive.com/wp-content/uploads/2024/04/Bs-Yediyurappa.jpg

Load More