newsfirstkannada.com

ನನಗೇ ಚಾಲೆಂಜ್ ಮಾಡವ್ರೇ.. ಹಾಸನ ಡಿಸಿ ಸತ್ಯಭಾಮ ಮೇಲೆ HDK ಕೆಂಡಾಮಂಡಲ; ಹೇಳಿದ್ದೇನು?

Share :

Published May 7, 2024 at 2:09pm

  ಹಾಸನ ಡಿಸಿ ಸತ್ಯಭಾಮ ಅವರು ನೀಡಿದ್ದ ಹೇಳಿಕೆಗೆ HDK ಕೆಂಡಾಮಂಡಲ

  ಮಹಾಭಾರತದಲ್ಲಿ ಶಿಶುಪಾಲನಿಗೆ ಶ್ರೀಕೃಷ್ಣ 100 ತಪ್ಪು ಮಾಡಲು ಅವಕಾಶ ನೀಡಿದ

  ಪೆನ್‌ಡ್ರೈವ್‌ ಪ್ರಕರಣದಲ್ಲಿ 2800 ಕೇಸ್‌ ಅಂತ ಹೇಳಿದ್ದೀರಾ.. ಯಾರು ನಿಮಗೆ ಹೇಳಿದ್ದಾರೆ?

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ SIT ತನಿಖೆಗೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಹಾಸನ ಡಿಸಿ ಸತ್ಯಭಾಮ ಅವರು ನೀಡಿದ್ದ ಹೇಳಿಕೆಗೆ ಕೆಂಡಾಮಂಡಲರಾಗಿದ್ದಾರೆ.

ಹಾಸನ ಡಿಸಿ ಅವರು ಈ ಪ್ರಕರಣದಲ್ಲಿ ಮಹಾಭಾರತದ ಉದಾಹರಣೆ ಕೊಟ್ಟು ಶಿಶುಪಾಲ, ಶ್ರೀಕೃಷ್ಣನ ಬಗ್ಗೆ ಮಾತನಾಡಿದ್ದಾರೆ. ಶಿಶುಪಾಲನಿಗೆ ಶ್ರೀಕೃಷ್ಣ 100 ತಪ್ಪು ಮಾಡಲು ಅವಕಾಶ ನೀಡಿದ. ಆದರೆ 100 ತಪ್ಪು ಮಾಡಿದ ಮೇಲೆ 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ ಎಂದಿದ್ದಾರೆ. ಕೋಲಾರದಲ್ಲಿ ನೀವು ಹಾಗೂ ನಿಮ್ಮ ಗಂಡ ಏನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಅದರ ಬಗ್ಗೆ ಹೆಚ್ಚು ಮಾತನಾಡಲ್ಲ. ಸಹಾಯ ವಾಣಿ ಓಪನ್ ಮಾಡಿದ್ದೀರಿ. ಎಷ್ಟು ದೂರುಗಳು ಬಂದಿವೆ ಎಂದು ಹೆಚ್‌.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಷ್ಟೇ ಅಲ್ಲ.. ಎಲ್ಲೆಲ್ಲಿ ಪೆನ್​ಡ್ರೈವ್ ಹಂಚಿದ್ದಾರೆ ಗೊತ್ತಾ? ಪ್ರೂಫ್​ ಸಮೇತ HDK ಶಾಕಿಂಗ್ ಹೇಳಿಕೆ 

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು 400 ರೇಪ್‌ ಆಗಿದೆ ಎಂದಿದ್ದಾರೆ. 16 ವರ್ಷಗಳ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಯಾವನಪ್ಪಾ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಯಾಕೆ ರಾಹುಲ್ ಗಾಂಧಿ ಅನ್ನು ವಿಚಾರಣೆಗೆ ಕರೆದಿಲ್ಲ. ಮೋದಿ, ಅಮಿತ್ ಶಾ ಹೆಸರು ಪ್ರಸ್ತಾಪ ಮಾಡಿದ್ದೀರಾ. ಅಂತರಾಷ್ಟ್ರೀಯ ಮಟ್ಟಕ್ಕೆ‌ ತೆಗೆದುಕೊಂಡು ಹೋಗಿದ್ದೀರ. ಮಾಜಿ ಪ್ರಧಾನಿ ಮೊಮ್ಮಗನ ಪ್ರಕರಣ ಅಂತ‌ ಹೇಳಿದ್ದಾರೆ. ಆ ಪೆನ್‌ಡ್ರೈವ್ ಹಂಚಿಕೆ ಆ ಹೆಣ್ಣು ಮಕ್ಕಳ ಮಾನ‌ ಮಾರ್ಯಾದೆ ಕಳೆದಿದ್ದೀರಾ. ಯಾವ ಪೋಟೋ ಬಿಡುಗಡೆ ಮಾಡೋಕೆ ಟಿಕ್ ಮಾಡಿದ್ದು ಯಾರು ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರನ್ನು ಯಾಕೆ ಅಧಿಕೃತವಾಗಿ ಕರೆಸಿಕೊಂಡಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಈ ರೀತಿಯ ಎಕ್ಸ್‌ಪರ್ಟ್. ಹೆಚ್‌.ಡಿ ದೇವೇಗೌಡರ ಜೊತೆ ಬೆಳೆದಿದ್ದೀರಾ. ಅವರ ಬಗ್ಗೆ ಹಗುರವಾದ ಮಾತನಾಡಬೇಡಿ. ಯಾರು ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು. ದೇವರಾಜೇಗೌಡರನ್ನ ಯಾಕೆ ಕರೆಸಿದ್ರಿ. ನಾನು ಅಧಿಕಾರಿಗಳಿಗೆ ಹೇಳ್ತೀನಿ. ಪಾರದರ್ಶಕವಾಗಿ ತನಿಖೆ ಮಾಡಿ. ಕಾನೂನು ಬಾಹಿರವಾಗಿ ಕೆಲಸ ಮಾಡ್ತಾ ಇದ್ದೀರಾ. ಎಲ್ಲಾ ಮಾಹಿತಿ ಬರುತ್ತೆ ನನಗೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ. 2800 ಪ್ರಕರಣ ಅಂತ ಹೇಳಿದ್ದೀರಾ. ಯಾರು ನಿಮಗೆ ಹೇಳಿದ್ದಾರೆ. ನಂಬಲು ಸಾಧ್ಯವಾದ ವಿಚಾರವನ್ನು ಹೇಳಿ. ಯಾರಾದರೂ ಕಂಪ್ಲೇಂಟ್ ಕೊಟ್ಟಿದ್ದೀರಾ. ಪಾರದರ್ಶಕ ತನಿಖೆ ಆಗಬೇಕಿದ್ದರೆ ಸಿಬಿಐ ತನಿಖೆಗೆ ಕೊಡಿ. ಪೆನ್ ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಆಗಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನಗೇ ಚಾಲೆಂಜ್ ಮಾಡವ್ರೇ.. ಹಾಸನ ಡಿಸಿ ಸತ್ಯಭಾಮ ಮೇಲೆ HDK ಕೆಂಡಾಮಂಡಲ; ಹೇಳಿದ್ದೇನು?

https://newsfirstlive.com/wp-content/uploads/2024/05/HDK-ON-Hassan-DC.jpg

Load More