newsfirstkannada.com

ಹೃದಯ ಶಸ್ತ್ರ ಚಿಕಿತ್ಸೆಯಿಂದ ಪುನರ್ಜನ್ಮ.. ಮಂಡ್ಯ ಚುನಾವಣೆಯ ಸ್ಪರ್ಧೆ ಬಗ್ಗೆ ಹೆಚ್‌ಡಿಕೆ ಹೇಳಿದ್ದೇನು?

Share :

Published March 24, 2024 at 12:03pm

  ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಬಂದು ವೈದ್ಯರು ಆಪರೇಷನ್ ಮಾಡಿದ್ರು

  ‘ಸಿದ್ದರಾಮಯ್ಯ ನಮ್ಮ ದುಡ್ಡು ನಮ್ಮ ತೆರಿಗೆ ಅನ್ನೋದೆಲ್ಲ ಸ್ಟಂಟ್‌, ಡ್ರಾಮಾ’

  28 ಕ್ಷೇತ್ರದಲ್ಲೂ NDA ಅಭ್ಯರ್ಥಿಗಳು ಗೆಲ್ಲಲು ನಾನು ಪ್ರಯತ್ನ ಮಾಡ್ತೀನಿ

ಬೆಂಗಳೂರು: ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಚೆನ್ನೈನಿಂದ ಮರಳಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ, ಕಳೆದ ಎರಡು ಬಾರಿ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಲೋಪದೋಷ ಆಗಿತ್ತು. ಆದ್ರೀಗ ವೈದ್ಯಕೀಯ ಲೋಕ ಸಾಕಷ್ಟು ತಾಂತ್ರಿಕವಾಗಿ ಮುಂದುವರಿದಿದೆ. ಹೀಗಾಗಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಯಿಂದ 3ನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನ 4ನೇ ಪಟ್ಟಿಯಲ್ಲೂ ಆ 4 ಲೋಕಸಭಾ ಕ್ಷೇತ್ರಗಳು ಪೆಂಡಿಂಗ್.. ಕೋಲಾರಕ್ಕಾಗಿ ‘ಕೈ’ಯಲ್ಲಿ ಬಿಗ್ ಫೈಟ್

ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ ಅವರು ನಾಡಿನ ಜನರ ಶುಭ ಹಾರೈಕೆಯಿಂದ ಭಗವಂತ ನನ್ನ ಕಾಪಾಡಿದ್ದಾನೆ. ಆಪರೇಷನ್ ಮಾಡಿದ ವೈದ್ಯರು ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಚೆನ್ನೈ ವೈದ್ಯರು ಸಾಯಿ ಬಾಬಾ ಭಕ್ತರು. ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಬಂದು ಆಪರೇಷನ್ ಮಾಡಿದ್ದಾರೆ. ಮತ್ತೊರ್ವ ವೈದ್ಯರು ಹಂಗೇರಿಯಾದವರು ನನಗೆ ಪುನರ್ಜನ್ಮ ನೀಡಿದ್ದಾರೆ ಎಂದರು.

ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಕೈಲಾದ ರೀತಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಎಲ್ಲಾ 28 ಕ್ಷೇತ್ರದಲ್ಲಿ NDA ಅಭ್ಯರ್ಥಿಗಳು ಗೆಲ್ಲಲು ನನ್ನ ಕೈಲಾದ ಪ್ರಯತ್ನ ಮಾಡ್ತೀನಿ. ಮಂಡ್ಯ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಮೂರ್ನಾಲ್ಕು ದಿನದಲ್ಲಿ ಫೈನಲ್ ಆಗುತ್ತೆ. ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸಿಎಂ ಸಿದ್ದರಾಮಯ್ಯನವರು ನಮ್ಮ ದುಡ್ಡು ನಮ್ಮ ತೆರಿಗೆ ಅನ್ನೋದೆಲ್ಲ ಸ್ಟಂಟ್‌. ಡ್ರಾಮಾ ಮಾಡೋದನ್ನ ಬಿಟ್ಟು ಕೆಲಸ ಮಾಡ್ಬೇಕು ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯ ಶಸ್ತ್ರ ಚಿಕಿತ್ಸೆಯಿಂದ ಪುನರ್ಜನ್ಮ.. ಮಂಡ್ಯ ಚುನಾವಣೆಯ ಸ್ಪರ್ಧೆ ಬಗ್ಗೆ ಹೆಚ್‌ಡಿಕೆ ಹೇಳಿದ್ದೇನು?

https://newsfirstlive.com/wp-content/uploads/2024/03/HD-Kumaraswamy-5.jpg

Load More