/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್​​​ ಮುಕ್ತಾಯದ ಹಂತಕ್ಕೆ ಬಂದಿದೆ. ಕೆಕೆಆರ್​​, ರಾಜಸ್ಥಾನ್​ ರಾಯಲ್ಸ್​​​​ ಈಗಾಗಲೇ ಪ್ಲೇ ಆಫ್​​ ತಲುಪಿದ್ದು, ಉಳಿದ ಎರಡು ಸ್ಥಾನಗಳಿಗಾಗಿ ಬರೋಬ್ಬರಿ 5 ತಂಡಗಳು ಪೈಪೋಟಿ ನಡೆಸುತ್ತಿವೆ.
ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿ, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್​​, ಸನ್​ರೈಸರ್ಸ್​ ಹೈದರಾಬಾದ್​​ ಸೇರಿದಂತೆ ಲಕ್ನೋ ಭಾರೀ ಸರ್ಕಸ್​ ನಡೆಸುತ್ತಿವೆ. ನಾಳೆ ರೋಚಕ ಪಂದ್ಯ ನಡೆಯಲಿದ್ದು, ಚೆನ್ನೈ ವಿರುದ್ಧ ಆರ್​​ಸಿಬಿ ಗೆಲ್ಲಲೇಬೇಕಿದೆ. ಅದರಲ್ಲೂ ಆರ್​​ಸಿಬಿ 18 ರನ್​ಗಳಿಂದ ಗೆಲ್ಲಬೇಕಿದೆ.
ಇನ್ನು, ಈ ಮಧ್ಯೆ ಆರ್​​ಸಿಬಿಗಿಂತಲೂ ಹೆಚ್ಚು ಪ್ಲೇ ಆಫ್​ ಅವಕಾಶ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಇದೆ ಎಂದು ಮಾಜಿ ಕ್ರಿಕೆಟರ್ಸ್​ ಆದ ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಮೊಹಮ್ಮದ್ ಕೈಫ್ ಮತ್ತು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್​ಗೆ ಹೋಗಲಿವೆ. ಆರ್​​ಸಿಬಿ ಅಲ್ಲ, ಚೆನ್ನೈ ಈ ಬಾರಿ ಪ್ಲೇ ಆಫ್​ಗೆ ಹೋಗಲು ಏನಾದ್ರೂ ಮಾರ್ಗ ಕಂಡುಕೊಳ್ಳುತ್ತದೆ. ಅದು ಪರಂಪರೆಯ ತಂಡ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us