newsfirstkannada.com

ರಾಹುಲ್ ಗಾಂಧಿ 2.O ಯಾತ್ರೆ ದಿನವೇ ‘ಮಹಾ’ ಕ್ರಾಂತಿ; ಕಾಂಗ್ರೆಸ್ ಪಕ್ಷಕ್ಕೆ ಮಿಲಿಂದ್ ದಿಯೋರಾ ಗುಡ್‌ ಬೈ

Share :

Published January 14, 2024 at 12:41pm

    ಕಾಂಗ್ರೆಸ್‌ ಪಕ್ಷದೊಂದಿಗೆ 55 ವರ್ಷಗಳ ಒಡನಾಟ ಹೊಂದಿದ್ದ ಫ್ಯಾಮಿಲಿ

    ಮಹಾರಾಷ್ಟ್ರದ ಯುವ ನಾಯಕ ಮಿಲಿಂದಾ ದಿಯೋರಾ ರಾಜೀನಾಮೆ

    ಸಿಎಂ ಏಕನಾಥ ಶಿಂಧೆ ಅವರ ಶಿವಸೇನಾ ಬಣ ಸೇರಿಕೊಳ್ಳಲು ನಿರ್ಧಾರ

ಮುಂಬೈ: ಲೋಕಸಭಾ ಚುನಾವಣೆ ಸಜ್ಜಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರದಲ್ಲಿ ಇಂದಿನಿಂದ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಆರಂಭಿಸಿದ್ದಾರೆ. ಈ ಮಹತ್ವದ ದಿನವೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಹಾರಾಷ್ಟ್ರದ ಯುವ ನಾಯಕ ಮಿಲಿಂದಾ ದಿಯೋರಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಿಲಿಂದಾ ದಿಯೋರಾ ಅವರು ಇಂದೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರ ಶಿವಸೇನಾ ಬಣವನ್ನು ಸೇರಿಕೊಳ್ಳುತ್ತಿದ್ದಾರೆ. ಏಕನಾಥ ಶಿಂಧೆ ಅವರ ಶಿವಸೇನೆಯಿಂದ ಮುಂಬೈ ದಕ್ಷಿಣ ಲೋಕಸಭಾ ಟಿಕೆಟ್ ಇಲ್ಲವೇ ರಾಜ್ಯಸಭಾ ಸದಸ್ಯ ಸ್ಥಾನದ ಭರವಸೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮಿಲಿಂದಾ ದಿಯೋರಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ ಬೈ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು ನಾನು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಇಂದು ಚಾಲನೆ.. ಸಿದ್ದರಾಮಯ್ಯ ಭಾಗವಹಿಸ್ತಾರಾ?

ಕಾಂಗ್ರೆಸ್‌ ಪಕ್ಷ ತ್ಯಜಿಸಲು ಕಾರಣವೇನು?
ಮಿಲಿಂದಾ ದಿಯೋರಾ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷ ಈ ಬಾರಿ ಇಂಡಿಯಾ ಮಿತ್ರಕೂಟದ ಒಪ್ಪಂದದ ಪ್ರಕಾರ ಮಿಲಿಂದಾ ದಿಯೋರಾ ಸ್ಪರ್ಧಿಸುತ್ತಿದ್ದ ಕ್ಷೇತ್ರವನ್ನು ಉದ್ಧವ್‌‌ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ನೀಡಲು ತೀರ್ಮಾನ ಮಾಡಿತ್ತು. ಕಾಂಗ್ರೆಸ್ ಹೈಕಮಾಂಡ್‌ನ ಈ ನಿರ್ಧಾರಕ್ಕೆ ಸಿಡಿದೆದ್ದ ಮಿಲಿಂದಾ ದಿಯೋರಾ ಅವರು ಏಕನಾಥ್ ಶಿಂಧೆ ಅವರ ಶಿವಸೇನಾ ಪಕ್ಷವನ್ನು ಸೇರುತ್ತಿದ್ದಾರೆ.

55 ವರ್ಷಗಳ ಸಂಬಂಧಕ್ಕೆ ಬ್ರೇಕ್‌!

ಮಿಲಿಂದ್ ದಿಯೋರಾ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು. ಮಿಲಿಂದ್ ದಿಯೋರಾ ಅವರ ಕುಟುಂಬ ಕಾಂಗ್ರೆಸ್‌ ಪಕ್ಷದೊಂದಿಗೆ ಕಳೆದ 55 ವರ್ಷಗಳ ಒಡನಾಟ ಇಟ್ಟುಕೊಂಡಿತ್ತು. ಆದ್ರೀಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದೊಂದಿಗಿನ ತಮ್ಮ ಕುಟುಂಬದ 55 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ್ದಾರೆ. ಈ ಕುರಿತು Xನಲ್ಲಿ ಪೋಸ್ಟ್ ಮಾಡಿರುವ ದಿಯೋರಾ ಅವರು ನಾನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದೊಂದಿಗಿನ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ಇಂದು ನನ್ನ ರಾಜಕೀಯ ಪ್ರಯಾಣದಲ್ಲಿ ಮಹತ್ವದ ಅಧ್ಯಾಯವೊಂದನ್ನು ಮುಕ್ತಾಯಗೊಳಿಸಿದ್ದೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ 2.O ಯಾತ್ರೆ ದಿನವೇ ‘ಮಹಾ’ ಕ್ರಾಂತಿ; ಕಾಂಗ್ರೆಸ್ ಪಕ್ಷಕ್ಕೆ ಮಿಲಿಂದ್ ದಿಯೋರಾ ಗುಡ್‌ ಬೈ

https://newsfirstlive.com/wp-content/uploads/2024/01/milind-deora-Rahul-Gandhi.jpg

Load More