‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಸ್ಫೋಟಕ ಹೇಳಿಕೆ ನೀಡಿದ ಮಾಜಿ ಗೃಹ ಸಚಿವ?

author-image
Bheemappa
Updated On
‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಸ್ಫೋಟಕ ಹೇಳಿಕೆ ನೀಡಿದ ಮಾಜಿ ಗೃಹ ಸಚಿವ?
Advertisment
  • ದರ್ಶನ್ ಕೇಸ್​ ನಿನ್ನೆವರೆಗೂ ಪಾರದರ್ಶಕವಾಗಿ ನಡೆದಿತ್ತು
  • ಈ ಕೇಸ್​ನಿಂದ ಕಾನೂನು ಏನೆಂಬುದು ಜನರಿಗೆ ತೋರಿಸಲಿ
  • ಪೊಲೀಸರು ಸೇರಿ ಯಾರು ಕೂಡ ಹಸ್ತಕ್ಷೇಪ ಮಾಡಬಾರದು

ಬೆಂಗಳೂರು: ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ ಇನ್ನುಳಿದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಸಂಬಂಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ದರ್ಶನ್ ಅವರದ್ದು ಕ್ರೂರತ್ವ, ಮೃಗಿಯ ಗುಣಗಳು ಇವೆ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ದರ್ಶನ್ ಸೆಲೆಬ್ರಿಟಿ ಆಗಿದ್ದರೇ ಅವರ ಬಗ್ಗೆ ನನಗೂ ಗೌರವವಿದೆ. ಇದೊಂದು ಅಮಾನುಷವಾದಂತಹ ಕೊಲೆ. ಕಾನೂನು ಒಬ್ಬೊಬ್ಬರಿಗೆ ಒಂದೊಂದು ಇಲ್ಲ. ಈ ಕೇಸ್​ನಿಂದ ಕಾನೂನು ಏನೆಂಬುದು ಸಾರ್ವಜನಿಕರಿಗೆ ತೋರಿಸಬೇಕು. ಕ್ರಿಮಿನಲ್ ಆ್ಯಕ್ಟಿವಿಟಿ ಮಾಡೋರಿಗೆ ಈ ಒಂದು ಸಂದೇಶ ಹೋಗಬೇಕು. ಆ ರೀತಿಯಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

ದರ್ಶನ್​ ಇರುವ ಪೊಲೀಸ್​ ಠಾಣೆಗೆ ಶಾಮಿಯಾನ ಹಾಕಿದ್ದಾರೆ. ನಿನ್ನೆವರೆಗೆ ದರ್ಶನ್ ಕೇಸ್​ ಪಾರದರ್ಶಕವಾಗಿ ನಡೆದಿತ್ತು. ಆ ಬಡಪಾಯಿ ಕೊಲೆ ಆಗಿರುವುದು ನೋಡಿದ್ರೆ ಖಂಡಿತವಾಗಿಯು ಅವರನ್ನು ಗಲ್ಲಿಗೆ ಏರಿಸಬೇಕು. ಇದಕ್ಕಿಂತ ಕಡಿಮೆಯಾದ ಶಿಕ್ಷೆ ಆಗಬಾರದು. ಪೊಲೀಸರು ಸೇರಿದಂತೆ ಮತ್ಯಾರು ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ಕಾರ ಬಿಗಿಯಾದ ನಿಲುವನ್ನು ತಾಳಬೇಕು. ದರ್ಶನ್ ಪ್ರರಕಣ ನೋಡುವಾಗ ಡಾ.ರಾಜ್​ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಪುನೀತ್ ರಾಜ್​ಕುಮಾರ್ ಅವರು ದೇವರಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment