newsfirstkannada.com

ಇಂದು HD ರೇವಣ್ಣ ಬೇಲ್​ ಅರ್ಜಿ ವಿಚಾರಣೆ.. ಕೋರ್ಟ್‌ನಲ್ಲಿ ಜಾಮೀನು ಸಿಗದಿದ್ರೆ ಮುಂದೇನು?

Share :

Published May 13, 2024 at 8:33am

    ಸರಿಯಾಗಿ ಊಟ ಮಾಡುತ್ತಿಲ್ಲ, ಬೇಸರದಲ್ಲಿ ಮಾಜಿ ಸಚಿವ ರೇವಣ್ಣ

    ಜೈಲು ಅಧಿಕಾರಿಗಳಿಗೆ ತಲೆನೋವಾದ HD ರೇವಣ್ಣ ಆರೋಗ್ಯದ ಸಮಸ್ಯೆ

    ದೇವರು ದಯೆ ತೋರುತ್ತಾರೆ ಅನ್ನೋ ಭರವಸೆಯಲ್ಲಿ ಮಾಜಿ ಸಚಿವ

ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ದಿನ ದೂಡುತ್ತಿದ್ದಾರೆ. ಇವತ್ತು ರೇವಣ್ಣರ ಜಾಮೀನು ಅರ್ಜಿ ಕೋರ್ಟ್​​ನಲ್ಲಿ ವಿಚಾರಣೆಗೆ ಬರಲಿದೆ. ಜಾಮೀನು ವಿಚಾರವಾಗಿ ದೇವರ ಮೇಲೆ ಭಾರ ಹಾಕಿದ್ದು ಪ್ರಸಾದಕ್ಕಾಗಿ ಎದುರುನೋಡ್ತಿದ್ದಾರೆ. ಇತ್ತ ದೇವರಾಜೇಗೌಡ ಕೂಡಾ ಜಾಮೀನಿಗಾಗಿ ಕಾದು ಕೂತಿದ್ದಾರೆ.

5ನೇ ರಾತ್ರಿ.. ಕೆಆರ್​ ನಗರದ ಅಪಹರಣ ಕೇಸ್​ನಲ್ಲಿ ಬಂಧಿತರಾಗಿ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಪರಪ್ಪನ ಜೈಲಿನಲ್ಲಿ 5 ದಿನ ಕಳೆದು 6ನೇ ದಿನಕ್ಕೆ ಕಾಲಿಟ್ಟಿದ್ದಾರೆ.

ಕುಂತ್ರೂ ನಿಂತ್ರೂ ರೇವಣ್ಣರಿಗೆ ಜಾಮೀನಿನದ್ದೇ ಜಪ

ಜೈಲುವಾಸಿಯಾಗಿರುವ ರೇವಣ್ಣರಿಗೆ ಸದ್ಯ ಜಾಮೀನಿದ್ದೇ ಜಪವಾಗಿದೆ. ಯಾವಾಗ ಬೆಳಗಾಗುವುದೋ ಅಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಯಾಕಂದ್ರೆ ಇವತ್ತು ಹೆಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಬೇಲ್ ಸಿಗಲಿ ಅಂತ ದಳ ಮಾಜಿ ಸಚಿವ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೇವರು ಇವತ್ತು ದಯೆ ತೋರುತ್ತಾನೆ ಅನ್ನೋ ಭರವಸೆಯಲ್ಲಿದ್ದಾರೆ. ಜೈಲು ಸಿಬ್ಬಂದಿ ಬಳಿ ದೇವರ ಮೇಲೆ ಭಾರ ಹಾಕಿರುವೆ. ದೇವರ ಪ್ರಸಾದದಂತೆ ಜಾಮೀನೆಂಬ ಜಾಮೂನು ಸಿಗಬಹುದು ಅಂತ ಹೇಳಿದ್ದಾರೆ.

ಜೈಲಿನಲ್ಲಿ ರೇವಣ್ಣ ಜಾಮೀನು ಜಪ

  • ನಾಲ್ಕು ದಿನಗಳಿಂದ ಹೆಚ್‌,ಡಿ. ರೇವಣ್ಣಗೆ ಜೈಲಿನ ಊಟವೇ ಗತಿ
  • ಐಷಾರಾಮಿ ಜೀವನ ನಡೆಸಿದ್ದ ರೇವಣ್ಣನಿಗೆ ಒಗ್ಗದ ಜೈಲಿನ ಊಟ
  • ರಾತ್ರಿ ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ ನೀಡಿದ್ದ ಸಿಬ್ಬಂದಿ
  • ಸರಿಯಾಗಿ ಊಟ ಮಾಡದೆ ರೇವಣ್ಣ ಮೊಂಡುತನ ತೋರುತ್ತಿದ್ದಾರಾ?
  • ಜೈಲಿಗೆ ಬಂದಾಗಿನಿಂದಲೂ ಹೊಟ್ಟೆ ನೋವು ಎನ್ನುತ್ತಿರುವ ರೇವಣ್ಣ
  • ಜೈಲಾಧಿಕಾರಿಗಳಿಗೆ ತಲೆನೋವಾದ ರೇವಣ್ಣ ಆರೋಗ್ಯ ಸಮಸ್ಯೆ
  • ಆಸ್ಪತ್ರೆಗೆ ಶಿಫ್ಟ್ ಆಗಿ ಜೈಲುವಾಸ ತಪ್ಪಿಸಿಕೊಳ್ಳಲು ಈ ಸಮಸ್ಯೆ ಜಪ
  • ಈ ಮಧ್ಯೆ ಇವತ್ತು ಕೋರ್ಟ್‌ನಲ್ಲಿ ಜಾಮೀನು ಸಿಗುವ ನಿರೀಕ್ಷೆ
  • ಇವತ್ತು ಕೋರ್ಟ್‌ನಲ್ಲಿ ನ್ಯಾಯಾಧೀಶರ ತೀರ್ಪಿನತ್ತ ರೇವಣ್ಣ ಚಿತ್ತ
  • ಕೋರ್ಟ್‌ನಲ್ಲಿ ಜಾಮೀನು ಸಿಗದಿದ್ರೆ ಮತ್ತಷ್ಟು ದಿನ ಜೈಲುವಾಸ ಫಿಕ್ಸ್

ಇದನ್ನೂ ಓದಿ: 10 ರಾಜ್ಯ 96 ಕ್ಷೇತ್ರಗಳಿಗೆ ಮತಹಬ್ಬ.. ಅದೃಷ್ಟದ ಅಗ್ನಿ ಪರೀಕ್ಷೆಯಲ್ಲಿ ಸ್ಟಾರ್ಸ್​..! ಯಾಱರು ಇದ್ದಾರೆ?

ದೇವರಾಜೇಗೌಡಗೂ ಇವತ್ತು ಸಿಗುತ್ತಾ ಜಾಮೀನು?

ಇನ್ನೂ ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅರೆಸ್ಟ್ ಆಗಿದ್ದಾರೆ. ಮೊನ್ನೆಯಷ್ಟೇ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಮಧ್ಯೆ ಪೊಲೀಸರು ಕಸ್ಟಡಿಗೆ ಕೇಳಿದ್ದು, ಓಪನ್ ಕೋರ್ಟ್‌ನಲ್ಲಿ ಕಸ್ಟಡಿಗೆ ಕೇಳುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಸ್ಟಡಿಗೆ ಕೇಳಲಿದ್ದಾರೆ. ಜೊತೆಗೆ ದೇವರಾಜೇಗೌಡ ಬೇಲ್ ಅರ್ಜಿ ಸಲ್ಲಿಸಲಿದ್ದು, ನಾಳೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಇವತ್ತು ದೇವರಾಜೇಗೌಡಗೆ ಜಾಮೀನು ಸಿಗುತ್ತಾ? ಅಥವಾ ಜೈಲೇ ಗತಿಯಾಗುತ್ತಾ ಎಂಬ ಕೌತಕ ಮನೆ ಮಾಡಿದೆ.

ಇದನ್ನೂ ಓದಿ: BREAKING: ನಡು ರಸ್ತೆಯಲ್ಲಿ ಅಡ್ಡಗಟ್ಟಿ ನಟ ಚೇತನ್​​ಗೆ ರಕ್ತ ಬರುವಂತೆ ಹೊಡೆದ ಪುಂಡರು..!

ಇವತ್ತು ಜಾಮೀನು ಸಿಗುತ್ತೆ ಅನ್ನೋ ಭರವಸೆಯಲ್ಲಿ ರೇವಣ್ಣ ಮತ್ತು ದೇವರಾಜೇಗೌಡ ಕಾಯ್ತಿದ್ದಾರೆ. ಸದ್ಯ ಕೋರ್ಟ್​ನಲ್ಲಿ ನ್ಯಾಯಾಧೀಶರು ನೀಡುವ ತೀರ್ಪಿನತ್ತ ಇಬ್ಬರ ಚಿತ್ತ ನೆಟ್ಟಿದೆ. ಒಂದ್ವೇಳೆ ದೇವರು ಕಣ್ಣು ತೆರೆಯದಿದ್ರೆ ಇಬ್ಬರಿಗೂ ಮತ್ತಷ್ಟು ದಿನ ಜೈಲುವಾಸ ಫಿಕ್ಸ್ ಎನ್ನುವ ಭೀತಿ ಕೂಡ ರೇವಣ್ಣರಿಗೆ ಮನಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು HD ರೇವಣ್ಣ ಬೇಲ್​ ಅರ್ಜಿ ವಿಚಾರಣೆ.. ಕೋರ್ಟ್‌ನಲ್ಲಿ ಜಾಮೀನು ಸಿಗದಿದ್ರೆ ಮುಂದೇನು?

https://newsfirstlive.com/wp-content/uploads/2024/05/REVANNA-3-1.jpg

Load More