newsfirstkannada.com

ರಾಜ್ಯದಲ್ಲಿ ಬಿಜೆಪಿಗೆ ಯಾಕಿಂಥಾ ಸ್ಥಿತಿ ಬಂತು?; ನೋಟಿಸ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ರೆಬೆಲ್ ರೇಣುಕಾಚಾರ್ಯ

Share :

Published September 1, 2023 at 5:33pm

Update September 1, 2023 at 5:35pm

  2005-06ರಲ್ಲಿ ಬಿಜೆಪಿ ಕಚೇರಿಗೆ ಒಬ್ಬರು ಬಂದ್ರು ಅವರಿಂದಲೇ ಇಷ್ಟೆಲ್ಲಾ

  2011, 2021 ಎರಡು‌ ಬಾರಿ ಯಡಿಯೂರಪ್ಪರಿಗೆ ಇದೇ ರೀತಿ ಆಗಿದೆ

  ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಅವರೂ ನಮ್ಮ ನಾಯಕರು

ಬೆಂಗಳೂರು: ಬಿಜೆಪಿ ನಾಯಕರ ಮೇಲೆ ಗರಂ ಆಗಿರೋ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ಇವತ್ತು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಬಿಜೆಪಿ ದಿಗ್ಗಜರ ಹೆಸರನ್ನು ಹೇಳದೇ ರಾಜ್ಯದಲ್ಲಿ ಪಕ್ಷಕ್ಕೆ ಯಾಕಿಂಥಾ ಸ್ಥಿತಿ ಬಂತು ಅನ್ನೋದನ್ನ ವಿವರಿಸಿದ್ದಾರೆ. ಬಿಜೆಪಿಯಿಂದ ನೋಟಿಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು ನನಗೆ ನೋಟಿಸ್ ಕೊಡುವಂತಹ ತಪ್ಪು ಏನಾಗಿದೆ? ನಾನು ಯಾರ ವಿರುದ್ಧವು ಮಾತನಾಡಿಲ್ಲ. ಆದರೂ ನನಗೆ ನೋಟಿಸ್ ನೀಡಲಾಗಿದೆ. ನಾನು ನೋಟಿಸ್‌ಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಸರ್ಕಾರವನ್ನು ಜಸ್ಟ್​ ಟಚ್​​ ಮಾಡಲಿ ನೋಡೋಣ‘- ​​BL ಸಂತೋಷ್​​ಗೆ ಪ್ರಿಯಾಂಕ್​​​​ ಖರ್ಗೆ ವಾರ್ನಿಂಗ್​​!

ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಶುರುವಾಗಿದೆ. ಪಕ್ಷ ಇಂದು ಸೋಲಲು ಆ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಯಾರು ಆ ಸರ್ವಾಧಿಕಾರಿ? ಎಂದರೆ ನಾನು ಅವರ ಹೆಸರನ್ನು ಹೇಳುವುದಿಲ್ಲ ಎಂದರು. ಮಾತು, ಮಾತಿಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್ ಅವರ ಹೆಸರನ್ನು ಹೇಳದೇ ರೇಣುಕಾಚಾರ್ಯ ಅವರು ಸಖತ್ ಟಕ್ಕರ್ ಕೊಟ್ಟಿದ್ದಾರೆ.

ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪರನ್ನು ಕಡೆಗಣಿಸಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ. 2011ರಲ್ಲಿ, 2021ರಲ್ಲಿ ಎರಡು‌ ಬಾರಿ ಯಡಿಯೂರಪ್ಪರಿಗೆ ಇದೇ ರೀತಿ ಹೈಕಮಾಂಡ್ ನಾಯಕರು ನಡೆಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಲು ಯಡಿಯೂರಪ್ಪರ ನಾಯಕತ್ವ ಇಲ್ಲದಿರುವುದೇ ಕಾರಣ. ರಾಜ್ಯದಲ್ಲಿ ಯಡಿಯೂರಪ್ಪ ಸುತ್ತದ ಹಳ್ಳಿಯೇ ಇಲ್ಲ. ಇಂತಹ ವ್ಯಕ್ತಿಯನ್ನು‌ ಕೆಳಗೆ ಇಳಿಸಿದ್ದೇಕೆ? ಈಗ ಯಡಿಯೂರಪ್ಪರನ್ನು ಸೈಡ್‌ಲೈನ್ ಮಾಡಿರುವುದು ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

2005-06ರಲ್ಲಿ ಬಿಜೆಪಿ ಕಚೇರಿಗೆ ಒಬ್ಬರು ಬಂದ್ರು. ಅವರಿಂದಲೇ ಇಷ್ಟೆಲ್ಲಾ ಆಗುತ್ತಿದೆ‌. ಸುಮ್ಮನೆ ಬಂದು ಇಲ್ಲಿ ಬಿಜೆಪಿ ಕಚೇರಿಯಲ್ಲಿ ಕೂರುತ್ತಾರೆ. ಬಿಜೆಪಿ ಕಚೇರಿಯಲ್ಲಿ ಕುಳಿತಿದ್ರೆ, ಮತ ಬರುತ್ತಾ? ಹೊರಗೆ ಓಡಾಡಬೇಕು, ಫೀಲ್ಡ್‌ನಲ್ಲಿ ಇರಬೇಕು. ನಾನು ನನ್ನ ಮತ ಕ್ಷೇತ್ರದ 245 ಬೂತ್‌ಗಳಲ್ಲೂ ಕರಪತ್ರ ಹಂಚಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ನಾನು ಸಿದ್ಧತೆ ನಡೆಸುತ್ತಿದ್ದೇನೆ. ಆದ್ರೆ, ನಮ್ಮಲ್ಲೇ ಕೆಲವರು ಚಿತಾವಣಿ ನಡೆಸುತ್ತಿದ್ದಾರೆ. ನಾನು‌ ಸಿಎಂ, ಡಿಸಿಎಂ, ದಾವಣಗೆರೆ ಉಸ್ತುವಾರಿ ಸಚಿವರನ್ನು ಭೇಟಿಯಾದ್ರೆ, ಅವರ ಪಕ್ಷಕ್ಕೆ ಹೋಗುತ್ತೇನೆ ಎಂದು ಅರ್ಥನಾ? ನಾನು ಬಿಜೆಪಿ ಬಿಡಲ್ಲ. ಕಾಂಗ್ರೆಸ್ ಸೇರ್ಪಡೆ ಆಗಲ್ಲ ಎಂದು ಇದೇ ವೇಳೆ ರೇಣುಕಾಚಾರ್ಯ ಹೇಳಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಮ್ಮ ನಾಯಕರು. ಅವರಿಗೆ ಟಿಕೆಟ್ ತಪ್ಪಿಸಿದ್ದೇಕೆ? ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರೂ ನಮ್ಮ ನಾಯಕರು. ಇಬ್ಬರು ಕೂಡ ಪ್ರಬಲ ಸಮುದಾಯಕ್ಕೆ ಸೇರಿದವರು. ಅವರಿಬ್ಬರಿಗೂ ಟಿಕೆಟ್ ಕೈ ತಪ್ಪಿಸಿದ್ದಕ್ಕೆ ಪಕ್ಷ ಕಿತ್ತೂರು ಕರ್ನಾಟಕ ಭಾಗದಲ್ಲಿ ನೆಲ‌ಕಚ್ಚಿದೆ. ಈಗ ಲೋಕಸಭಾ ಚುನಾವಣೆಗೆ ಅದನ್ನು ಮೇಲೆತ್ತಬೇಕಿದೆ. ನಾನು ಕೂಡ ದಾವಣಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಜ್ಯದಲ್ಲಿ ಬಿಜೆಪಿಗೆ ಯಾಕಿಂಥಾ ಸ್ಥಿತಿ ಬಂತು?; ನೋಟಿಸ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ರೆಬೆಲ್ ರೇಣುಕಾಚಾರ್ಯ

https://newsfirstlive.com/wp-content/uploads/2023/09/Renukacharya-on-Bjp.jpg

Load More