‘ಪೆನ್‌ಡ್ರೈವ್ ರಿಲೀಸ್ ಮಾಡೋಕೆ HDK ಪರ್ಮಿಷನ್‌ ಕೊಟ್ರಂತೆ’- ಎಲ್‌.ಆರ್ ಶಿವರಾಮೇಗೌಡ ಹೊಸ ಬಾಂಬ್‌

author-image
admin
Updated On
‘ಪೆನ್‌ಡ್ರೈವ್ ರಿಲೀಸ್ ಮಾಡೋಕೆ HDK ಪರ್ಮಿಷನ್‌ ಕೊಟ್ರಂತೆ’- ಎಲ್‌.ಆರ್ ಶಿವರಾಮೇಗೌಡ ಹೊಸ ಬಾಂಬ್‌
Advertisment
  • ದೇವರಾಜೇಗೌಡ ಡಿ.ಕೆ ಶಿವಕುಮಾರ್ ಬಳಿ ಮಾತನಾಡಬೇಕು ಎಂದಿದ್ದ
  • ‘ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ದೇವರಾಜೇಗೌಡ’
  • ಬಿಜೆಪಿಯವರು ಬಿಡುಗಡೆ ಮಾಡಲು ಹೇಳಿದ್ದರಂತೆ - ಎಲ್‌.ಆರ್ ಶಿವರಾಮೇಗೌಡ

ಬೆಂಗಳೂರು: ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಹಾಗೂ ಪೆನ್‌ಡ್ರೈವ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಾ ಇದೆ. ಇದೀಗ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ವಕೀಲ ದೇವರಾಜೇಗೌಡ. ಈ ಬಗ್ಗೆ ನನ್ನ ಜೊತೆ ಮಾತನಾಡಿದ್ದಾನೆ. ಪೆನ್‌ಡ್ರೈವ್ ರಿಲೀಸ್ ಮಾಡಲು ಹೆಚ್‌.ಡಿ ಕುಮಾರಸ್ವಾಮಿ ಅವರೇ ಪರ್ಮಿಷನ್ ಕೊಟ್ಟಿದ್ದರು ಎಂದಿದ್ದಾನೆ ಅಂತ ಮಾಜಿ ಸಂಸದ ಎಲ್‌.ಆರ್ ಶಿವರಾಮೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಹಾಸನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ರಿಯಾಕ್ಷನ್; ಡಿಕೆ ಬಗ್ಗೆ ಏನಂದ್ರು? 

ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡರು ಎಲ್.ಆರ್ ಶಿವರಾಮೇಗೌಡ ಮಾತನಾಡಿದ ಆಡಿಯೋ ಬಿಡುಗಡೆ ಮಾಡಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಪ್ರತಿಕ್ರಿಯೆ ನೀಡಿದ್ದು ಕೌಂಟರ್ ಕೊಟ್ಟಿದ್ದಾರೆ.

publive-image

ಯಾರೋ ಹೊಳೆನರಸೀಪುರದ ಕಡೆಯವರು ಬಂದು ದೇವರಾಜೇಗೌಡ ನಿಮ್ಮ ಬಳಿ ಮಾತನಾಡಬೇಕು ಎಂದರು. ಆಗ ಫೋನ್ ಮಾಡಿ ಕೊಡಿ ಎಂದು ಹೇಳಿದೆ. ನಂತರ ಎಂ.ಜಿ ರೋಡ್‌ನಲ್ಲಿ ಸಿಕ್ಕಿ ವಕೀಲ ಅನ್ನೋ ಕಾರಣಕ್ಕೆ ದೇವರಾಜೇಗೌಡ ಅವರ ಬಳಿ ಮಾತನಾಡಿದ್ದೇನೆ ಎಂದು ಎಲ್‌.ಆರ್ ಶಿವರಾಮೇಗೌಡ ಹೇಳಿದ್ದಾರೆ.

publive-image

ವಕೀಲ ದೇವರಾಜೇಗೌಡರು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ನಾನೇ ಎಂದು ಹೇಳಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಕೂಡ ಪರ್ಮಿಷನ್ ಕೊಟ್ಟಿದ್ದರು. ಬಿಜೆಪಿಯವರು ಬಿಡುಗಡೆ ಮಾಡಲು ಹೇಳಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಅರ್ಜೆಂಟ್‌ ಭೇಟಿ ಮಾಡಿಸಿ ಎಂದು ಕೇಳಿದ. ಆಗ ನಾನು ನೋಡೋಣ ಎಂದು ಹೇಳಿದೆ ಎಂದಿದ್ದಾರೆ.

ಬಿಜೆಪಿ ನಾಯಕ ದೇವರಾಜೇಗೌಡರು 2 ವರ್ಷದಿಂದ ಹೋರಾಟ ಮಾಡಿದ್ದಾನೆ. 2 ವರ್ಷದಿಂದ ಪೆನ್​ಡ್ರೈವ್​ ರಿಲೀಸ್​ಗೆ ಪ್ಲಾನ್​ ಮಾಡಿದ್ದಾರೆ ಗೊತ್ತಾ? ದೇವರಾಜೇಗೌಡರು 2 ವರ್ಷದ ಹಿಂದೆ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ ಎಂದಿದ್ದಾನೆ. ಜಗತ್ತಿನಲ್ಲೇ ಅತಿ ದೊಡ್ಡ ಲೈಂಗಿಕ ಹಗರಣ ಇದು. ಪ್ರಜ್ವಲ್ ರೇವಣ್ಣ ಇಷ್ಟೆಲ್ಲ ಮಾಡ್ಬೇಕಾದ್ರೆ ಅವ್ರಪ್ಪ ಅಮ್ಮ ಏನು ಮಾಡುತ್ತಾ ಇದ್ದರು. ಡಿ.ಕೆ ಶಿವಕುಮಾರ್ ಅವರಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಎಲ್‌.ಆರ್ ಶಿವರಾಮೇಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment