newsfirstkannada.com

ಹಾಸನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ರಿಯಾಕ್ಷನ್; ಡಿಕೆ ಬಗ್ಗೆ ಏನಂದ್ರು?

Share :

Published May 7, 2024 at 12:03pm

Update May 7, 2024 at 11:59am

    ಡಿ.ಕೆ ಶಿವಕುಮಾರ್ ಭಾಗಿಯಾಗಿರುವುದು ನೇರವಾಗಿ ಇರೋದು ಇದೆ

    ನನ್ನ ಕೇಸ್​ನಲ್ಲಿ ಎಲ್ಲರೂ ಕೂಡ ಮಾತುಗಳನ್ನು ಕಡೆಗಣಿಸಿದ್ರು- ರಮೇಶ್

    ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದು‌ ಇದೆ, ಮಾಧ್ಯಮದ ಮುಂದೆ ಕೊಡಲ್ಲ

ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್‌ ಸ್ಕ್ಯಾಂಡಲ್‌ ಕೇಸ್​ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಆಡಿಯೋ ರಿಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು, ಇಲ್ಲಿ ಯಾರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ನನ್ನ ಕೇಸ್ ಆಗಿದ್ದಾಗ ಎಲ್ಲರೂ ನನ್ನನ್ನು ಕಡೆಗಣಿಸಿದರು. ನಂದು ಆದ ಮೇಲೆ ಎಲ್ಲರೂ ನಗುತ್ತಾ ಕುಳಿತಿದ್ದರು. ನಂದು ಆಗಿದೆ, ಇವತ್ತು ಒಬ್ಬರದು ಆಗಿದೆ. ಮುಂದೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್​ ಅವರಿಗೂ ಬರಬಹುದು. ಇದಕ್ಕೆ ಸಿಎಂ ಹಾಗೂ ಗೃಹ ಸಚಿವ ಪಕ್ಷಾತೀತವಾಗಿ ಇಂತಹದ್ದಕ್ಕೆ ಇತಿಶ್ರೀ ಹಾಡಬೇಕು.

ಇದನ್ನೂ ಓದಿ: ಕೆಟ್ಟು ನಿಂತ ಟಿಪ್ಪರ್​ಗೆ ವೇಗವಾಗಿ ಬಂದು ಬೈಕ್ ಡಿಕ್ಕಿ​.. ಯುವಕ ಸಾವು

ಇದನ್ನೂ ಓದಿ: ವೋಟರ್​ ID ಕಾರ್ಡ್​ ತಂದಿಲ್ಲ.. ಮಾಜಿ ಸಚಿವರನ್ನ ವಾಪಸ್ ಕಳಿಸಿದ ಚುನಾವಣಾ ಸಿಬ್ಬಂದಿ

ಹಾಸನ ಪ್ರಕರಣದಲ್ಲಿ ಆಡಿಯೋ ಎಲ್ಲ ಕಡೆಯಿಂದ ಸುತ್ತು ಹಾಕಿರುವುದು ಇದೆ. ನನ್ನ ಕೇಸ್​ನಲ್ಲಿ ನೇರವಾಗಿ ಇರೋದು ಇದೆ. ಡಿಸಿಎಂ ಡಿ.ಕೆ ಶಿವಕುಮಾರ್ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿ ಇವೆ. ಡಿ.ಕೆ ಶಿವಕುಮಾರ್ ನನ್ನ ಬಗ್ಗೆ ಷಡ್ಯಂತ್ರ ಮಾಡಿರೋದು ನೇರವಾಗಿ ಕೊಡುತ್ತೇನೆ. ಮಾಧ್ಯಮದವರಿಗೆ ಅದನ್ನು ಕೊಡಲ್ಲ. ನೇರವಾಗಿ ಸಿಬಿಐಗೆ ಕೊಡುತ್ತೇನೆ. ಅವಾಗ, ಇವಾಗ ಯಾವಾಗ್ಲೂ ಎಸ್​ಐಟಿ ಮೇಲೆ ನನಗೆ ವಿಶ್ವಾಸ ಇಲ್ಲ ಎಂದು ಹೇಳಿದ್ದಾರೆ.

ಸಿಬಿಐಗೆ ಕೇಸ್ ಕೊಟ್ರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಅಂದ್ರೆ ಈ ಕೇಸ್​ನಲ್ಲಿ ಅವರು ಫಿಕ್ಸ್ ಆಗಬೇಕು. ಈ ಕೇಸ್​ನಲ್ಲಿ ಬರೀ ಡಿಕೆ ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಇದೆನ್ನೆಲ್ಲ ಜೂನ್ 4ರಂದು ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಸತತ 4 ವರ್ಷದಿಂದ ಪ್ರಶ್ನೆಗಳ ಮೇಲೆ ಇದ್ದೀನಿ. ಒಮ್ಮೆ ಇದಕ್ಕೆಲ್ಲ ಅಂತ್ಯ ಆಡೋಣ ಎಂದರು.

ಇದನ್ನೂ ಓದಿ: ಲಾಯರ್ ಸಿಡಿಸಿರೋ ಬಾಂಬ್​​ಗೆ ಕಾಂಗ್ರೆಸ್​ ಕೋಟೆಯಲ್ಲಿ ನಡುಕ.. DCM ಬಗ್ಗೆ ದೇವರಾಜೇಗೌಡ ಗಂಭೀರ ಆರೋಪ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಸಂಬಂಧ ಮಾತನಾಡಿದ ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣರ ಕೇಸ್ ‌ಯಾರು ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವಂತಹ ವಿಷಯ. ಬಹಳ ಕೆಟ್ಟ ಪ್ರಮಾಣದಲ್ಲಿ ಆಗಿದೆ. ಆ ರೀತಿ ಆಗಬಾರದು. ಪ್ರಜ್ವಲ್ ರೇವಣ್ಣ ಕಾನೂನು, ಕೋರ್ಟ್​ ಮೂಲಕ ಹೋರಾಟ ಮಾಡಲಿ. ಕಾನೂನಿಂದ ಹೊರ ಬರಲಿ. ಕಾನೂನು ಒಂದೇ ಅದಕ್ಕೆ ಉತ್ತರ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ರಿಯಾಕ್ಷನ್; ಡಿಕೆ ಬಗ್ಗೆ ಏನಂದ್ರು?

https://newsfirstlive.com/wp-content/uploads/2024/05/RAMESH_JARAKIHOLI.jpg

Load More